Published on: November 19, 2021
‘ಮೆಗಾಸ್ಪೈಡರ್’ ಜೇಡ
‘ಮೆಗಾಸ್ಪೈಡರ್’ ಜೇಡ
ಸುದ್ಧಿಯಲ್ಲಿ ಏಕಿದೆ ? ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಾಂತಿಕ ಮತ್ತು ದೊಡ್ಡ ಜೇಡವೊಂದು ಪತ್ತೆಯಾಗಿದೆ.ಅಷ್ಟೇ ಅಲ್ಲ ಇದೇ ಜೇಡ ಆ್ಯಂಟಿ ವಿಷಕಾರಿಯೂ ಆಗಿದೆ.
- ವಿಜ್ಞಾನಿಗಳಿ “ಮೆಗಾಸ್ಪೈಡರ್”ಎಂದು ಕರೆಯುವ ಅತ್ಯಂತ ವಿಷಕಾರಿಯ ಈ ಜೇಡ ಫನಲ್ವೆಬ್ ಜಾತಿಗೆ ಸೇರಿದೆ. ಈ ಮೆಗಾಸ್ಪೈಡರ್ ಜೇಡದ ಕುಟುಕು ಎಷ್ಟು ಶಕ್ತಿಯುತವಾಗಿದೆ ಎಂದರೆ ಉಗುರನ್ನು ಸಹ ಇದು ಕುಟುಕುತ್ತೆ. ಇಂತಹ ಅತ್ಯಂತ ವಿಷಕಾರಿ ಜೇಡವನ್ನ ಪ್ರಸ್ತುತ ನ್ಯೂ ಸೌತ್ ವೇಲ್ಸ್ನ ಆಸ್ಟ್ರೇಲಿಯನ್ ಸರೀಸೃಪ ಉದ್ಯಾನವನದಲ್ಲಿ ಇರಿಸಲಾಗಿದ್ದು ಫನಲ್ ವೆಬ್ ಜೇಡಗಳ ವಿಷದಿಂದ ವಿಷ-ವಿರೋಧಿ ಔಷಧಗಳನ್ನು ಹೊರತೆಗೆಯಲಾಗುತ್ತೆ
- ಭೂಮಿಯ ಮೇಲೆ 40 ಜಾತಿಯ ಫನಲ್ ವೆಬ್ ಜೇಡಗಳಿವೆ. ಅದರಲ್ಲಿ ಹ್ಯಾಡ್ರೊನಿಚೆ ಮತ್ತು ಅಟ್ರಾಕ್ಸ್ ಕುಲಗಳು ಆಸ್ಟ್ರೇಲಿಯಾದ ಪೂರ್ವ ಪ್ರದೇಶಗಳಲ್ಲಿ ಕಂಡುಬರುತ್ತವೆ.
- ಈ ಜೇಡ ಕಚ್ಚಿದರೆ ಅಥವಾ ಕುಟುಕಿದರೆ, 15 ನಿಮಿಷಗಳಲ್ಲಿ ಸಾವು ಖಚಿತ. ಈ ಜೇಡದ ಚರ್ಮ ಹೊಳೆಯುವ, ಚಿಕ್ಕ ಕೂದಲಿನ ಮತ್ತು ಕಂದು ಬಣ್ಣದಿಂದ ಗಾಢ ಕಪ್ಪು ಬಣ್ಣವನ್ನು ಹೊಂದಿರುತ್ತೆ.ಇದಕ್ಕೆ ಎಂಟು ಕಣ್ಣುಗಳು ನಾಲ್ಕು ಸಾಲುಗಳಲ್ಲಿವೆ. ಈ ಜೇಡಗಳು ಸಾಮಾನ್ಯವಾಗಿ ಸಕ್ರಿಯವಾಗಿರುತ್ತವೆ.
- ಶೀತ ಮತ್ತು ಒದ್ದೆಯಾದ ಪ್ರದೇಶಗಳಲ್ಲಿ, ನೆಲದೊಳಗೆ ಬಿಲಗಳನ್ನು ಮಾಡಿ ವಾಸಮಾಡುತ್ತವೆ.ಬಿಲದ ಮೇಲೆ ಕಟ್ಟಿರುವ ಬಲೆಯ ಬಾಗಿಲಿನ ಮೇಲೆ ಕೀಟಗಳು ಸಿಕ್ಕಿಹಾಕಿಕೊಂಡರೆ ಅಥವಾ ಯಾವುದೇ ಪ್ರಾಣಿಯಾಗಲಿ ಮನುಷ್ಯರಾಗಲಿ ಅದನ್ನು ಮುಟ್ಟಿದರೆ, ಈ ಜೇಡ ತಕ್ಷಣವೇ ಅದರ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗುತ್ತದೆ. ಹೀಗೆ ಸತ್ತ ಕೀಟ ಜೀವಿಯನ್ನ ಈ ಜೇಡ ಮತ್ತೆ ತಿನ್ನುತ್ತೆ
- ಆಸ್ಟ್ರೇಲಿಯನ್ ಸರೀಸೃಪ ಉದ್ಯಾನವನವು ಫನಲ್ ವೆಬ್ ಸ್ಪೈಡರ್ನ ವಿಷದಿಂದ ವಿಷ-ವಿರೋಧಿ ಔಷಧಿಗಳನ್ನು ತಯಾರಿಸುವ ವಿಶ್ವದ ಏಕೈಕ ಸಂಸ್ಥೆಯಾಗಿದೆ.
ಆ್ಯಂಟಿ ವೆನಮ್ ತಯಾರಿಸುವ ಪ್ರಕ್ರಿಯೆ
- ಆ್ಯಂಟಿ ವೆನಮ್ ತಯಾರಿಸುವ ಪ್ರಕ್ರಿಯೆಯು ತುಂಬಾ ಆಸಕ್ತಿದಾಯಕವಾಗಿದೆ. ಫನಲ್-ವೆಬ್ ಜೇಡಗಳ ವಿಷವನ್ನು ಮೊಲದ ದೇಹಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಚುಚ್ಚಲಾಗುತ್ತದೆ. ಈ ಕಾರಣದಿಂದಾಗಿ, ಮೊಲದ ದೇಹದಲ್ಲಿ ಪ್ರತಿಕಾಯಗಳನ್ನು ತಯಾರಿಸಲಾಗುತ್ತದೆ.
- ಅದರ ನಂತರ, ಮೊಲದ ದೇಹದಿಂದ ಪ್ರತಿಕಾಯಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಸೀರಮ್ ಅನ್ನು ತಯಾರಿಸಲಾಗುತ್ತದೆ, ಇದು ಮಾನವರಿಗೆ ಉಪಯುಕ್ತವಾಗಿದೆ. ಅಂದರೆ, ಈ ಜೇಡವು ವ್ಯಕ್ತಿಯನ್ನು ಕಚ್ಚಿದರೆ, ಮೊಲದ ದೇಹದಿಂದ ಬಿಡುಗಡೆಯಾದ ಪ್ರತಿಕಾಯಗಳಿಂದ ಮಾಡಿದ ಸೀರಮ್ ಅನ್ನು ಬಳಸಲಾಗುತ್ತದೆ.
- ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್(ARP) ಅನ್ನು 1950 ರಲ್ಲಿ ಸ್ಥಾಪಿಸಿದ್ದು ಇಲ್ಲಿಯವರೆಗೆ, ಈ ಉದ್ಯಾನವನದಿಂದ ತಯಾರಿಸಿದ ಔಷಧಿಗಳಿಂದ 25 ಸಾವಿರಕ್ಕೂ ಹೆಚ್ಚು ಆಸ್ಟ್ರೇಲಿಯನ್ನರನ್ನು ಉಳಿಸಲಾಗಿದೆ.