Published on: March 8, 2023
ಮೇಘಾ – ಟ್ರೋಪಿಕ್ಸ್-1 ಉಪಗ್ರಹ
ಮೇಘಾ – ಟ್ರೋಪಿಕ್ಸ್-1 ಉಪಗ್ರಹ
ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ಸಹಯೋಗದಲ್ಲಿ ನಿಯಂತ್ರಿತ ರೀತಿಯಲ್ಲಿ ತನ್ನ ನಿಷ್ಕ್ರಿಯಗೊಂಡ ಉಪಗ್ರಹ ಮೇಘಾ – ಟ್ರೋ ಪಿಕ್ಸ್-1 (MT1) ಅನ್ನು ಭೂಮಿಯ ಮೇಲೆ ಇಳಿಸಲು ಯಶಶ್ವಿಯಾಗಿದೆ.
ಮುಖ್ಯಾಂಶಗಳು
- ಉಪಗ್ರಹವು ಪೆಸಿಫಿಕ್ ಮಹಾಸಾಗರದ ಜನವಸತಿ ಇಲ್ಲದ ಸ್ಥಳದ ಮೇಲೆ ಇಳಿಯಿತು .
MT1
- ಅಕ್ಟೋ ಬರ್ 12, 2011 ರಂದು ಇಸ್ರೊ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ನ ಜಂಟಿ ಉಪಗ್ರಹ ಯೋಜನೆಯಡಿ ಉಷ್ಣವಲಯದ ಹವಾಮಾನ ಮತ್ತು ಹವಾಮಾನ ಅಧ್ಯಯನಕ್ಕಾಗಿ ಉಡಾವಣೆ ಮಾಡಲಾಗಿತ್ತು. ಉಪಗ್ರಹದ ಕಾರ್ಯಾಚರಣೆ ಅವಧಿಯು ಮೂಲತಃ ಮೂರು ವರ್ಷಗಳಾ ಗಿದ್ದರೂ, ಉಪಗ್ರಹವು 2021 ರವರೆಗೆ ಪ್ರಾದೇಶಿಕ ಮತ್ತು ಜಾಗತಿಕ ಹವಾಮಾನ ಕುರಿತಾದ ಮಾಹಿತಿಗಳನ್ನು ಒದಗಿಸುವ ಮೂಲಕ ಒಂದು ದಶಕಕ್ಕೂ ಹೆಚ್ಚು ಕಾಲ ಮೌಲ್ಯಯುತ ಡೇಟಾ ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸಿತ್ತು.
- ಸುಮಾರು 1,000 ಕೆಜಿ ತೂಕದ MT1 ನ ಕಕ್ಷೆಯ ಜೀವಿತಾವಧಿಯು 867 ಕಿಮೀ ಎತ್ತರದ ಅದರ 20 ಡಿಗ್ರಿ ಇಳಿಜಾರಿನ ಕಾರ್ಯಾಚರಣೆಯ ಕಕ್ಷೆಯಲ್ಲಿ 100 ವರ್ಷಗಳಿಗಿಂತ ಹೆಚ್ಚು ಇರುತ್ತದೆ.
ಉಪಗ್ರಹಗಳು ಭೂಮಿಗೆ ಮರಳುವಾಗಿನ ಮಾರ್ಗ ಸೂಚಿಗಳು
- ಕಡಿಮೆ ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹವನ್ನು ಅದರ ಜೀವಿತಾವಧಿಯ ಕೊನೆಯಲ್ಲಿ ನಿಯಂತ್ರಿತ ಮಾದರಿಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇಳಿಸಬೇಕು ಅಥವಾ 25 ವರ್ಷಕ್ಕಿಂತ ಕಡಿಮೆ ಕಕ್ಷೆ ಜೀವಿತಾವಧಿ ಇರುವಂಥ ಕಕ್ಷೆಗೆ ಅದನ್ನು ಸೇರಿಸಬೇಕೆಂದು UN/IADC ಬಾಹ್ಯಾಕಾಶ ಶಿಲಾಖಂಡರಾಶಿಗಳ ಉಪಶಮನದ ಮಾರ್ಗಸೂಚಿ ನಿಯಮಗಳಲ್ಲಿ ತಿಳಿಸಲಾಗಿದೆ.
- ಕಾರ್ಯಾಚರಣೆಯ ನಂತರದ ಯಾವುದೇ ಆಕಸ್ಮಿಕ ವಿಘಟನೆಯ ಅಪಾಯವನ್ನು ಕಡಿಮೆ ಮಾಡಲು ಆನ್-ಬೋರ್ಡ್ ಶಕ್ತಿಯ ಮೂಲಗಳ ನಿಷ್ಕ್ರಿಯಗೊಳಿಸುವಿಕೆಯನ್ನು ಕೈಗೊಳ್ಳಲು ಸಹ ಶಿಫಾರಸು ಮಾಡಲಾಗಿದೆ.