Published on: October 30, 2021
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ? ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 11 ಕ್ರೀಡಾಪಟುಗಳ ಹೆಸರನ್ನು ಈ ವರ್ಷದ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
- ಇನ್ನೂ ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ಶಿಫಾರಸು ಮಾಡಿದೆ.
ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಹೆಸರುಗಳು:
- ನೀರಜ್ ಚೋಪ್ರಾ (ಅಥ್ಲೆಟಿಕ್ಸ್) , ರವಿ ದಹಿಯಾ (ಕುಸ್ತಿ) , ಪಿಆರ್ ಶ್ರೀಜೇಶ್ (ಹಾಕಿ) , ಲೊವ್ಲಿನಾ ಬೊರ್ಗೊಹೈ (ಬಾಕ್ಸಿಂಗ್) , ಸುನಿಲ್ ಛೆಟ್ರಿ (ಫುಟ್ ಬಾಲ್) , ಮಿಥಾಲಿ ರಾಜ್ (ಕ್ರಿಕೆಟ್) , ಪ್ರಮೋದ್ ಭಗತ್ (ಬ್ಯಾಡ್ಮಿಂಟನ್) , ಸುಮಿತ್ ಆಂಟಿಲ್ (ಅಥ್ಲೆಟಿಕ್ಸ್) , ಅವನಿ ಲೇಖರ (ಶೂಟಿಂಗ್) , ಕೃಷ್ಣ ನಗರ (ಬ್ಯಾಡ್ಮಿಂಟನ್) , ಮನೀಶ್ ನರ್ವಾಲ್ (ಶೂಟಿಂಗ್)
ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಹೆಸರುಗಳು:
- ಯೋಗೇಶ್ ಕಥುನಿಯಾ (ಡಿಸ್ಕಸ್ ಥ್ರೋ) , ನಿಶಾದ್ ಕುಮಾರ್ (ಹೈಜಂಪ್) , ಪ್ರವೀಣ್ ಕುಮಾರ್ (ಹೈಜಂಪ್) , ಶರದ್ ಕುಮಾರ್ (ಹೈ ಜಂಪ್), ಸುಹಾಸ್ LY (ಬ್ಯಾಡ್ಮಿಂಟನ್) , ಸಿಂಗ್ರಾಜ್ ಅಧಾನ (ಶೂಟಿಂಗ್), ಭಾವಿನಾ ಪಟೇಲ್ (ಟೇಬಲ್ ಟೆನಿಸ್) , ಹರ್ವಿಂದರ್ ಸಿಂಗ್ (ಶೂಟಿಂಗ್) , ಶಿಖರ್ ಧವನ್ (ಕ್ರಿಕೆಟ್)
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ
- ಖೇಲ್ ರತ್ನ ಪ್ರಶಸ್ತಿಯನ್ನು 1991-1992 ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಮೊದಲು ತನ್ನದಾಗಿಸಿಕೊಂಡವರು ಚೆಸ್ ದಂತಕತೆ ವಿಶ್ವನಾಥನ್ ಆನಂದ್. ಲಿಯಾಂಡರ್ ಪೇಸ್, ಸಚಿನ್ ತೆಂಡೂಲ್ಕರ್, ಧನರಾಜ್ ಪಿಳ್ಳೈ, ಪುಲ್ಲೇಲ ಗೋಪಿಚಂದ್, ಅಭಿನವ್ ಬಿಂದ್ರಾ, ಅಂಜು ಬಾಬಿ ಜಾರ್ಜ್, ಮೇರಿ ಕೋಮ್ ಮೊದಲಾದ ಶ್ರೇಷ್ಠ ಕ್ರೀಡಾಪಟುಗಳು ಈ ಪ್ರಶಸ್ತಿಯ ಹಿರಿಮೆಗೆ ಪಾತ್ರರಾಗಿದ್ದಾರೆ.
- ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ
- ಪ್ರಶಸ್ತಿಯು 25 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಹಾಕಿ ಮಾಂತ್ರಿಕ ಎಂದೇ ಬಿರುದಾಂಕಿತರಾಗಿರುವ ಮೇಜರ್ ಧ್ಯಾನ್ ಚಂದ್ ಅಂತಾರಾಷ್ಟ್ರೀಯ ಹಾಕಿ ಪಂದ್ಯಾಟವನ್ನು 1926ರಿಂದ 1949ರವರೆಗೆ ಆಡಿದರು ಹಾಗೂ ತಮ್ಮ ವೃತ್ತಿಜೀವನದಲ್ಲಿ 400 ಗೋಲುಗಳನ್ನು ಗಳಿಸಿ ಭಾರತದ ಅಗ್ರಗಣ್ಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಹಾಬಾದ್ನಲ್ಲಿ ಜನಿಸಿದ ಧ್ಯಾನ್ಚಂದ್ 1928, 1932 ಹಾಗೂ 1936ರ ಒಲಿಂಪಿಕ್ಸ್ ತಂಡದ ಭಾಗವಾಗಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.