Published on: October 17, 2023
ಮೇರಾ ಯುವ ಭಾರತ್
ಮೇರಾ ಯುವ ಭಾರತ್
ಸುದ್ದಿಯಲ್ಲಿ ಏಕಿದೆ? ದೇಶದ ಯುವ ಸಮುದಾಯದ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇರಾ ಯುವ ಭಾರತ್ (ಮೈ ಭಾರತ್/My Bharat) ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ.
ಮುಖ್ಯಾಂಶಗಳು
- ಇದನ್ನು ಅಕ್ಟೋಬರ್ 31 ರಂದು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಅಂದರೆ ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಈ ವೇದಿಕೆಯನ್ನು ಪ್ರಾರಂಭಿಸಲಾಗುವುದು.
- ತಂತ್ರಜ್ಞಾನವನ್ನೇ ಕೇಂದ್ರೀಕರಿಸಿಕೊಂಡು ಈ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ
- ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಇರುವ ಭಾರತ ಮೂಲದ ಯುವಜನರಲ್ಲಿ ದೇಶವನ್ನು ಪ್ರಭಾವಶಾಲಿಯಾಗಿ ಕಟ್ಟುವ ನಿಲುವು ಬೆಳೆಸುವ ನಿಟ್ಟಿನಲ್ಲಿ ಹೊಸ ಸಂಸ್ಥೆ ಸ್ಥಾಪಿಸಲಾಗುತ್ತಿದೆ.
ಉದ್ದೇಶ : ದೇಶದಲ್ಲಿ 15 ರಿಂದ 19 ವರ್ಷದೊಳಗಿನ ಸುಮಾರು 40 ಕೋಟಿ ಯುವಕರಿದ್ದಾರೆ. ಈ ಯುವಕರಿಗಾಗಿ ಇದು ಡಿಜಿಟಲ್ ವೇದಿಕೆಯಾಗಲಿದ್ದು, ಈ ಮೂಲಕ ಯುವಜನರಲ್ಲಿ ನಾಯಕತ್ವದ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಲಾಗುವುದು. ಅದರ ಮೂಲಕ ದೇಶವನ್ನು ಸಶಕ್ತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸಲು ಈ ವೇದಿಕೆ ಸಹಕಾರಿಯಾಗಲಿದೆ.
ಅನುಕೂಲಗಳು
- ಯುವ ಸಮುದಾಯದಲ್ಲಿ ನಾಯಕತ್ವ ಗುಣ ಅಭಿವೃದ್ಧಿ, ಸಮುದಾಯದ ಅಗತ್ಯ ಮತ್ತು ಯುವಜನರ ಆಶಯಗಳ ನಡುವೆ ಸಮನ್ವಯತೆ, ಯುವ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಂಯೋಜನೆಗೊಳಿಸಿ ಜಾರಿ ಗೊಳಿಸುವುದು.
- ಯುವ ಸಮುದಾಯದವರ ಮಾಹಿತಿ ಮತ್ತು ದಾಖಲೆಗೆ ಏಕೀಕೃತ ವ್ಯವಸ್ಥೆ, ಯುವಜನತೆಗೆ ಅಗತ್ಯವಾಗಿರುವ ಭೌತಿಕ ಪರಿಸರ ನಿರ್ಮಾಣ ಮಾಡಲು ಇದರಿಂದ ನೆರವಾಗಲಿದೆ.
- ಈ ವೇದಿಕೆಯು ಯುವ ಸಂವಾದ, ಯುವ ಸಂಸತ್ತು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿನಿಮಯ ಕಾರ್ಯಕ್ರಮ ಉತ್ತಮ ವೇದಿಕೆ ಎಂದು ಸಾಬೀತುಪಡಿಸುತ್ತದೆ.