Published on: December 25, 2021

ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನೆ

ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನೆ

ಸುದ್ಧಿಯಲ್ಲಿ ಏಕಿದೆ ? ಬಹುನಿರೀಕ್ಷಿತ ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್‌ ಬುಲೆಟ್‌ ಟ್ರೈನ್‌ ಯೋಜನೆ ತಯಾರಿ ಇನ್ನಷ್ಟು ಚುರುಕುಗೊಂಡಿದೆ. ದೇಶದ ಪ್ರಮುಖ ಏಳು ಪ್ರಮುಖ ಹೈಸ್ಪೀಡ್‌ ಯೋಜನೆಯಲ್ಲಿ ದಕ್ಷಿಣ ಭಾರತದ ಏಕೈಕ ಯೋಜನೆಯಾಗಿದೆ.

ಯೋಜನೆ ಬಗ್ಗೆ

  • ದೇಶದ ಪ್ರಮುಖ ನಗರಗಳಿಗೆ ಶೀಘ್ರ ಸಂಪರ್ಕ ಕಲ್ಪಿಸುವ ಹೈಸ್ಪೀಡ್‌ ಬುಲೆಟ್‌ ಟ್ರೈನ್‌ಗಳ ಏಳು ಯೋಜನೆಯನ್ನು ರೈಲ್ವೆ ಇಲಾಖೆ ಅಂಗೀಕರಿಸಿದೆ. ದೆಹಲಿ-ವಾರಾಣಸಿ, ಮುಂಬಯಿ-ನಾಗಪುರ, ದೆಹಲಿ- ಅಹಮದಾಬಾದ್‌, ದೆಹಲಿ-ಅಮೃತಸರ, ಮುಂಬಯಿ-ಹೈದರಾಬಾದ್‌, ಚೆನ್ನೈ-ಮೈಸೂರು, ವಾರಾಣಸಿ-ಹೌರ ಮಾರ್ಗದಲ್ಲಿ ಬುಲೆಟ್‌ ಟ್ರೈನ್‌ ಸಂಚರಿಸಲಿದೆ.
  • ಈಗಾಗಲೇ ಮುಂಬೈ-ಅಹ್ಮದಾಬಾದ್‌ ನಡುವಿನ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ಮೈಸೂರು-ಚೆನ್ನೈ ಯೋಜನೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
  • ಈಗ ಮೈಸೂರಿನಿಂದ ಚೆನ್ನೈಗೆ ಸುಮಾರು 10 ರಿಂದ 11 ಗಂಟೆಯವರೆಗೆ ಪ್ರಯಾಣಿಸಬೇಕಿದೆ. ಒಂದು ವೇಳೆ ಬುಲೆಟ್‌ ಟ್ರೈನ್‌ ಸಂಚರಿಸಿದಲ್ಲಿ ಈ ಅವಧಿಯಲ್ಲಿ 7 ಗಂಟೆಗಳ ಉಳಿತಾಯವಾಗಲಿದೆ. ಇದರಿಂದಾಗಿ ಮೈಸೂರು, ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚರಿಸುವವರಿಗೆ ಹಾಗೂ ಉದ್ಯಮದ ಬೆಳವಣಿಗೆಗೆ ಸಾಕಷ್ಟು ಪ್ರಯೋಜನವಾಗಲಿದೆ. ವಿಮಾನ ನಿಲ್ದಾಣಕ್ಕೆ ತೆರಳುವುದು, ಅಲ್ಲಿನ ಪರಿಶೀಲನೆ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಮುಗಿಸುವ ವೇಳೆಗೆ ರೈಲಿನಲ್ಲಿ ಚೆನ್ನೈ ಹಾಗೂ ಮೈಸೂರು ನಡುವೆ ಸಂಚರಿಸಬಹುದಾಗಿದೆ.

ಭಾರತ-ಜಪಾನ್‌ ನಡುವೆ ಒಪ್ಪಂದ!

  • ಯೋಜನೆಯ ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರಕ್ಕೆ ಈಗಾಗಲೇ ಭಾರತ ಹಾಗೂ ಜಪಾನ್‌ ಸರಕಾರಗಳ ನಡುವೆ ಒಪ್ಪಂದವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಯೋಜನೆ ಕುರಿತು ಅವರು ವಿಶೇಷ ಆಸಕ್ತಿ ವಹಿಸಿದ್ದರು.

ವಿಶೇಷತೆ ಏನು?

  • ಗರಿಷ್ಠ ವೇಗ (ಗಂಟೆಗೆ): 350 ಕಿ.ಮೀ ಸರಾಸರಿ
  • ವೇಗ : 320 ಕಿ.ಮೀ ಕನಿಷ್ಠ ವೇಗ 250 ಕಿ.ಮೀ
  • ಟ್ರ್ಯಾಕ್‌ ಗೇಜ್‌ : ಸ್ಟ್ಯಾಂಡರ್ಡ್‌ ಗೇಜ್‌ 1435 ಎಂಎಂ
  • ಪ್ರಯಾಣಿಕರ ಗರಿಷ್ಠ ಸಂಖ್ಯೆ : 750
  • ಅಂದಾಜು ವೆಚ್ಚ : ಲಕ್ಷ ಕೋಟಿ ರೂ.
  • ಭೂಕಂಪನ ಮುನ್ಸೂಚನೆ ಹೈಸ್ಪೀಡ್‌ ಬುಲೆಟ್‌ ಟ್ರೈನ್‌ನ ಮತ್ತೊಂದು ವಿಶೇಷತೆ. ಚಲಿಸಲಿರುವ ಮಾರ್ಗದಲ್ಲಿ ಒಂದು ವೇಳೆ ಭೂಕಂಪಿಸುವ ಸಂಭವ ಇದ್ದಲ್ಲಿ ಮುಂಚಿತವಾಗಿ ಎಚ್ಚರಿಕೆ ಸಂದೇಶ ರವಾನಿಸುವುದರೊಂದಿಗೆ ಅಲರಾಂ ಮೊಳಗಲಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಅತೀ ವೇಗದ ರೈಲನ್ನು ನಿಲ್ಲಿಸಲು ಅಟೋಮೆಟಿಕ್‌ ಬ್ರೇಕ್‌ ಸಿಸ್ಟಮ್‌ ಕೂಡ ಇರಲಿದೆ.