Published on: October 4, 2021

ಮೈಸೂರು ಮೃಗಾಲಯ

ಮೈಸೂರು ಮೃಗಾಲಯ

ಸುದ್ಧಿಯಲ್ಲಿ ಏಕಿದೆ? ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರವೇ ಗೊರಿಲ್ಲಾ ಹಾಗೂ ಒರಾಂಗುಟನ್ ಗಳು ಕಾಣಸಿಗಲಿವೆ.

ಮುಖ್ಯಾಂಶಗಳು

  • ಹಲವು ವರ್ಷಗಳ ಹಿಂದೆ ಪೋಲೊ ಎಂಬ ಗೊರಿಲ್ಲಾ ಸಾವಿನ ನಂತರ ಮೈಸೂರು ಮೃಗಾಲಯದಲ್ಲಿ ಬೇರೆ ಗೊರಿಲ್ಲಾಗಳನ್ನು ಕರೆತರಲಾಗಿರಲಿಲ್ಲ.
  • ಅಂತರರಾಷ್ಟ್ರೀಯ ವಿನಿಮಯ ಒಪ್ಪಂದದ ಅಡಿಯಲ್ಲಿ ಮೃಗಾಲಯವು ಗೊರಿಲ್ಲಾಗಳು ಮತ್ತು ಒರಾಂಗುಟನ್‌ಗಳನ್ನು ಖರೀದಿಸಿದೆ. ಎರಡು ಜೋಡಿ ಒರಾಂಗುಟನ್‌ಗಳನ್ನು ಸಿಂಗಪುರದಿಂದ ಮತ್ತು ಎರಡು ಗಂಡು ಗೊರಿಲ್ಲಾಗಳನ್ನು ಜರ್ಮನಿಯಿಂದ ಪಡೆಯಲಾಗಿದೆ.
  • ಇದರೊಂದಿಗೆ, ಮೈಸೂರು ಮೃಗಾಲಯ, ಬಿಳಿ ಘೇಂಡಾಮೃಗ ಮತ್ತು ಆಫ್ರಿಕನ್ ಚಿರತೆಗಳೊಂದಿಗೆ ಗೊರಿಲ್ಲಾಗಳು ಮತ್ತು ಒರಾಂಗುಟನ್‌ಗಳನ್ನು ಹೊಂದಿರುವ ಭಾರತದ ಏಕೈಕ ಮೃಗಾಲಯ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ.