Published on: October 12, 2022
ಮೊದಲ ಸೌರಶಕ್ತಿ ಚಾಲಿತ ಗ್ರಾಮ ಮೋಧೆರಾ
ಮೊದಲ ಸೌರಶಕ್ತಿ ಚಾಲಿತ ಗ್ರಾಮ ಮೋಧೆರಾ
ಸುದ್ದಿಯಲ್ಲಿ ಏಕಿದೆ?
ದೇಶದ ಮೊದಲ ಸೌರಶಕ್ತಿ ಚಾಲಿತ ಹಳ್ಳಿ ಎಂಬ ಶ್ರೇಯ ಪಡೆದ ಮೋಧೆರಾದಲ್ಲಿ ದಿನದ 24 ತಾಸೂ ಸೌರ ವಿದ್ಯುತ್ ದೊರೆಯಲಿದೆ. ಗ್ರಾಮದಲ್ಲಿ ಸೌರ ವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲಾಗಿದೆ. ವಸತಿ ಕಟ್ಟಡಗಳು, ಸರ್ಕಾರಿ ಕಟ್ಟಡಗಳ ಮೇಲ್ಚಾವಣಿಯಲ್ಲಿ 1,300ಕ್ಕೂ ಹೆಚ್ಚು ಸೌರಫಲಕಗಳನ್ನು ಅಳವಡಿಸಲಾಗಿದೆ.
ಮುಖ್ಯಾಂಶಗಳು
- ಮೊಧೇರಾ’ ಸೂರ್ಯ ದೇವಾಲಯ (ಇದನ್ನು ಚಾಲುಕ್ಯ ರಾಜವಂಶದ ರಾಜ ಭೀಮ I ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯವನ್ನು ಮಾರು-ಗುರ್ಜರ ಶೈಲಿಯಲ್ಲಿ (ಚಾಲುಕ್ಯ ಶೈಲಿ) ನಿರ್ಮಿಸಲಾಗಿದೆ.)ಕ್ಕೆ ಹೆಸರುವಾಸಿಯಾಗಿದೆ. ಇದು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವಾಗಲಿದೆ.
- ‘ಹಳ್ಳಿಯ ಮನೆಗಳ ಮೇಲೆ 1000ಕ್ಕೂ ಹೆಚ್ಚು ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಹೆಚ್ಚು ವಿದ್ಯುತ್ ಉತ್ಪಾದನೆಯಾಗಲಿದೆ. ಬಳಕೆದಾರರಿಗೆ ಶೂನ್ಯ ವೆಚ್ಚದಲ್ಲಿ ಸೌರ ವಿದ್ಯುತ್ ಒದಗಿಸಲಾಗುವುದು’.
ಉದ್ದೇಶ
- ದೇಶದಲ್ಲಿ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಉತ್ತೇಜಿಸುವುದು.