Published on: July 24, 2024

ಮೊಯಿಡಮ್ ವ್ಯವಸ್ಥೆ

ಮೊಯಿಡಮ್ ವ್ಯವಸ್ಥೆ

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ವಿಶ್ವ ಪರಂಪರೆಯ ಸಮಿತಿಯ 46 ನೇ ಅಧಿವೇಶನದಲ್ಲಿ ಅಹೋಮ್ ರಾಜವಂಶದ ‘ಮೊಯಿಡಮ್'(ಸಮಾದಿ ದಿಬ್ಬಗಳು)ಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ.

ಮುಖ್ಯಾಂಶಗಳು

  • ಭಾರತವು ಮೊದಲ ಬಾರಿಗೆ ಈ ಅಧಿವೇಶನವನ್ನು ಜುಲೈ 2024 ರಲ್ಲಿ ನವದೆಹಲಿಯಲ್ಲಿ ಆಯೋಜಿಸಲಿದೆ.
  • ಪ್ರಸ್ತುತ, UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ 168 ದೇಶಗಳಿಂದ 1,199 ಆಸ್ತಿಗಳನ್ನು ಒಳಗೊಂಡಿದೆ.

ಮೊಯಿಡಮ್ ಗಳು

  • ಮಧ್ಯಕಾಲೀನ (13ನೇ-19ನೇ ಶತಮಾನ CE) ದ ಅಸ್ಸಾಂನ ತೈ ಅಹೋಮ್ ರಾಜವಂಶದ ಸಂಪ್ರದಾಯ ಸಮಾಧಿ ದಿಬ್ಬಗಳಾಗಿವೆ.
  • ಇವುಗಳನ್ನು ಪ್ರಾಥಮಿಕವಾಗಿ ಮಣ್ಣು, ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ.
  • ಅವು ಅಸ್ಸಾಂನ ಚರೈಡಿಯೊ ಜಿಲ್ಲೆಯ ರಾಜಮನೆತನಗಳ ಸಮಾಧಿ ಸ್ಥಳವಾಗಿದೆ.
  • ಇದು ರಾಜಮನೆತನದ ಸದಸ್ಯರ ಮರಣದ ನಂತರ ಅವರ ವಸ್ತುಗಳ ಸಮೇತ ಅವರನ್ನು ಸಮಾಧಿ ಮಾಡುತ್ತಿದ್ದರು.
  • 18 ನೇ ಶತಮಾನದ ನಂತರ, ಅಹೋಮ್ ಆಡಳಿತಗಾರರು ಹಿಂದೂ ಶವಸಂಸ್ಕಾರ ವಿಧಾನವನ್ನು ಅಳವಡಿಸಿಕೊಂಡರು ಮತ್ತು ದಹನ ಮಾಡಿದ ಮೂಳೆಗಳು ಮತ್ತು ಚಿತಾಭಸ್ಮವನ್ನು ಚರೈಡಿಯೊದಲ್ಲಿನ ಮೈದಾನದಲ್ಲಿ ಸಮಾಧಿ ಮಾಡಲು ಪ್ರಾರಂಭಿಸಿದರು.

ಅಹೋಮ್ ಸಾಮ್ರಾಜ್ಯ

  • ಅಹೋಮ್ ಸಾಮ್ರಾಜ್ಯವನ್ನು ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿ 1228 ರಲ್ಲಿ ಸ್ಥಾಪಿಸಲಾಯಿತು ಮತ್ತು 600 ವರ್ಷಗಳ ಕಾಲ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಂಡಿತು.
  • ಇದನ್ನು 1253 ರಲ್ಲಿ 13 ನೇ ಶತಮಾನದ ಆಡಳಿತಗಾರ ಚೌಲುಂಗ್ ಸುಕಾಫಾ ಸ್ಥಾಪಿಸಿದರು.
  • ಚರೈಡಿಯೊ ಅವರ ಆರಂಭಿಕ ರಾಜಧಾನಿಯಾಗಿತ್ತು.
  • 1826 ರಲ್ಲಿ ಯಾಂಡಬೂ ಒಪ್ಪಂದದ ಮೂಲಕ ಅಸ್ಸಾಂ ಅನ್ನು ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವವರೆಗೂ ಅಹೋಮ್ ರಾಜವಂಶವು ಸರಿಸುಮಾರು 600 ವರ್ಷಗಳ ಕಾಲ ಆಳಿತು.
  • ರಾಜಕೀಯ ಸ್ಥಾಪನೆ:

ಭೂಯಾನರ (ಭೂಮಾಲಿಕರ) ಹಳೆಯ ರಾಜಕೀಯ ವ್ಯವಸ್ಥೆಯನ್ನು ನಿಗ್ರಹಿಸುವ ಮೂಲಕ ಅಹೋಮ್‌ಗಳು ಹೊಸ ರಾಜ್ಯವನ್ನು ರಚಿಸಿದರು.

  • ಮಿಲಿಟರಿ ತಂತ್ರ:

ಅಹೋಮ್ ಸೈನ್ಯದ ಪೂರ್ಣ ತುಕಡಿಯು ಪದಾತಿದಳ, ನೌಕಾಪಡೆ, ಫಿರಂಗಿ, ಆನೆಪಡೆ, ಅಶ್ವದಳ ಮತ್ತು ಗೂಢಚಾರರನ್ನು ಒಳಗೊಂಡಿತ್ತು.

ಲಚಿತ್ ಬೋರ್ಫುಕನ್ ನೇತೃತ್ವದ ಅಹೋಮ್ ನೌಕಾಪಡೆಯು 1671 ರಲ್ಲಿ ಸರೈಘಾಟ್ ಕದನದಲ್ಲಿ ಔರಂಗಜೇಬನ ಆಳ್ವಿಕೆಯಲ್ಲಿ ರಾಮ್ ಸಿಂಗ್ I ನೇತೃತ್ವದ ಮೊಘಲ್ ಪಡೆಗಳನ್ನು ಸೋಲಿಸಿತು.

  • ಲಚಿತ್ ಬೊರ್ಫುಕನ್ ಚಿನ್ನದ ಪದಕವನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಅತ್ಯುತ್ತಮ ಕೆಡೆಟ್‌ಗೆ ನೀಡಲಾಗುತ್ತದೆ.
  • ಬೋರ್ಫುಕನ್‌ನ ಶೌರ್ಯ ಮತ್ತು ತ್ಯಾಗವನ್ನು ಅನುಕರಿಸಲು ರಕ್ಷಣಾ ಸಿಬ್ಬಂದಿಗೆ ಸ್ಫೂರ್ತಿ ನೀಡಲು 1999 ರಲ್ಲಿ ಪದಕವನ್ನು ಸ್ಥಾಪಿಸಲಾಯಿತು.
  • ಅಸ್ಸಾಂನ ಜೋರ್ಹತ್‌ನಲ್ಲಿ ಅಹೋಮ್ ಜನರಲ್ ಲಚಿತ್ ಬೊರ್ಫುಕನ್ ಅವರ 125 ಅಡಿ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅನಾವರಣಗೊಳಿಸಿದರು.

UNESCO ವಿಶ್ವ ಪರಂಪರೆಯ ತಾಣಗಳು

  • ವಿಶ್ವ ಪರಂಪರೆಯ ತಾಣವು ಅದರ ವಿಶೇಷ ಸಾಂಸ್ಕೃತಿಕ ಅಥವಾ ಭೌತಿಕ ಪ್ರಾಮುಖ್ಯತೆಗಾಗಿ ಯುನೆಸ್ಕೋದಿಂದ ಪಟ್ಟಿಮಾಡಲ್ಪಟ್ಟ ಸ್ಥಳವಾಗಿದೆ.
  • ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯು ನಿರ್ವಹಿಸುವ ಅಂತರರಾಷ್ಟ್ರೀಯ ‘ವಿಶ್ವ ಪರಂಪರೆ ಕಾರ್ಯಕ್ರಮ’ ನಿರ್ವಹಿಸುತ್ತದೆ.
  • ಇದು 1972 ರಲ್ಲಿ ಯುನೆಸ್ಕೋ ಅಳವಡಿಸಿಕೊಂಡ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿದ ಸಮಾವೇಶ ಎಂಬ ಅಂತರರಾಷ್ಟ್ರೀಯ ಒಪ್ಪಂದದಲ್ಲಿ ಸಾಕಾರಗೊಂಡಿದೆ.
  • ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ (34 ಸಾಂಸ್ಕೃತಿಕ, 7 ನೈಸರ್ಗಿಕ ಮತ್ತು 1 ಮಿಶ್ರ ತಾಣ). ಇತ್ತೀಚಿನ ಸೇರ್ಪಡೆಗಳೆಂದರೆ ಶಾಂತಿನಿಕೇತನ (2023) ಮತ್ತು ಹೊಯ್ಸಳರ ಪವಿತ್ರ ದೇವಾಲಯಗಳು (2023)