Published on: September 1, 2021

ಮ್ಯಾಗ್ಸೆಸೆ ಪ್ರಶಸ್ತಿ

ಮ್ಯಾಗ್ಸೆಸೆ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ? ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ನಾಲ್ವರಿಗೆ ಮತ್ತು ಒಂದು ಸಂಸ್ಥೆಯನ್ನು 2021ನೇ ಸಾಲಿನ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  • ಕಾಲರಾ ವಿರುದ್ಧ ಕಡಿಮೆ ದರದ ಲಸಿಕೆ ಅಭಿವೃದ್ಧಿಪಡಿಸಿದ ಬಾಂಗ್ಲಾದೇಶದ ವಿಜ್ಞಾನಿ ಫಿರ್ದೌಸಿ ಖಾದ್ರಿ , ಪಾಕಿಸ್ತಾನದ ಮೈಕ್ರೊಫೈನಾನ್ಸ್‌ ಪ್ರವರ್ತಕ ಮುಹಮ್ಮದ್‌ ಅಮ್ಜದ್‌ ಸಾಖಿಬ್‌ , ಫಿಲಿಪ್ಪಿನ್ಸ್‌ನ ಮೀನುಗಾರ ರಾಬರ್ಟೊ ಬಲ್ಲೋನ್‌ ಮತ್ತು ಅಮೆರಿಕದ ಸ್ಟೆವನ್‌ ಮನ್ಸಿ ಹಾಗೂ ಇಂಡೊನೇಷ್ಯಾದ ಸಾಕ್ಷ್ಯಚಿತ್ರ ನಿರ್ಮಿಸುವ ’ವಾಚ್‌ಡಾಕ್‌ಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
  • ಫಿರ್ದೌಸಿ ಖಾದ್ರಿ: ಕಾಲರಾ ಮತ್ತು ಟೈಫಾಯ್ಡ್‌ಗೆ ಕೈಗೆಟಕುವ ದರದ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಖಾದ್ರಿ ಮಹತ್ವದ ಪಾತ್ರವಹಿಸಿದ್ದಾರೆ. ಖಾದ್ರಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ
  • ಮುಹಮ್ಮದ್‌ ಅಮ್ಜದ್‌ ಸಾಖಿಬ್‌ : ಮೈಕ್ರೊ ಫೈನ್ಸಾನ್ಸ್‌ ಯೋಜನೆಯ ಮೂಲಕ ನೆರವಾಗುತ್ತಿರುವ ಪಾಕಿಸ್ತಾನದ ಮುಹಮ್ಮದ್‌ ಅಮ್ಜದ್‌ ಸಾಖಿಬ್‌ ಅವರು ಲಕ್ಷಾಂತರ ಬಡಕುಟುಂಬಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ.
  • ರಾಬರ್ಟೊ ಬಲ್ಲೋನ್‌ : ಫಿಲಿಪ್ಪಿನ್ಸ್‌ನ ಮೀನುಗಾರ ರಾಬರ್ಟೊ ಬಲ್ಲೋನ್‌ ಅವರು ಸಂಕಷ್ಟದಲ್ಲಿದ್ದ ಮೀನುಗಾರಿಕೆ ಉದ್ಯಮಕ್ಕೆ ಪುನಶ್ಚೇತನ ನೀಡುವ ಮೂಲಕ ಮಹತ್ವದ ಕಾರ್ಯ ಕೈಗೊಂಡಿದ್ದಾರೆ.
  • ಸರ್ಕಾರದ ನೆರವಿನೊಂದಿಗೆ ಬಲ್ಲೋನ್‌ ಮತ್ತು ಇತರ ಮೀನುಗಾರರು 500 ಹೆಕ್ಟೇರ್‌ ಪ್ರದೇಶದಲ್ಲಿ ಕಾಂಡ್ಲಾ ವನ ಅಭಿವೃದ್ಧಿಪಡಿಸಿದ್ದಾರೆ.
  • ಸ್ಟೆವನ್‌ ಮನ್ಸಿ : ನಿರಾಶ್ರಿತರಿಗೆ ನೆರವು ನೀಡುವ ಕಾರ್ಯದಲ್ಲಿ ಅಮೆರಿಕದ ಸ್ಟೆವನ್‌ ಮನ್ಸಿ ತೊಡಗಿಸಿಕೊಂಡಿದ್ದಾರೆ. ನೈಸರ್ಗಿಕ ವಿಪತ್ತುಗಳಿಂದ ಸಂತ್ರಸ್ತರಾದವರಿಗೆ ಸಹಾಯ ಹಸ್ತ ಚಾಚಿದ್ದಾರೆ.
  • ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿರುವ ಇಂಡೊನೇಷ್ಯಾದ ‘ವಾಚ್‌ಡಾಕ್‌’ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪರಿಸರ ಕುರಿತ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿದೆ.

ಪ್ರಶಸ್ತಿ ಬಗ್ಗೆ

  • 1957ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. 2020ರಲ್ಲಿ ಕೊರೊನಾ ವೈರಸ್‌ ಕಾರಣಕ್ಕೆ ವರ್ಚುವಲ್ ವ್ಯವಸ್ಥೆ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.