Published on: July 29, 2024
ಮ್ಯಾನ್ಕೈಂಡ್ ಮತ್ತು ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್
ಮ್ಯಾನ್ಕೈಂಡ್ ಮತ್ತು ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್
ಸುದ್ದಿಯಲ್ಲಿ ಏಕಿದೆ? ಭಾರತದ ಪ್ರಮುಖ ಫಾರ್ಮಾ ಕಂಪನಿಯಾದ ಮ್ಯಾನ್ಕೈಂಡ್ (Mankind), ಮತ್ತೊಂದು ಪ್ರಮುಖ ಫಾರ್ಮಾ ಕಂಪನಿಯಾದ ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್(BSV) ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
ಮುಖ್ಯಾಂಶಗಳು
- ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್ ಕಂಪನಿಯಲ್ಲಿ ಅಮೆರಿಕ ಮೂಲದ Advent International ಹೊಂದಿರುವ ಶೇ 100 ರಷ್ಟು ಷೇರುಗಳನ್ನು ಮ್ಯಾನ್ಕೈಂಡ್ ಖರೀದಿಸಿದೆ.
- ಮ್ಯಾನ್ಕೈಂಡ್, ಕಾಂಡೋಮ್ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಔಷಧ ಹಾಗೂ ಇತರ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿದೆ.
- ಭಾರತ್ ಸೀರಂ ಸೀರಮ್ಸ್ ಫಾರ್ಮಾ ಕಂಪನಿ ಇಷ್ಟು ದಿನ ಅಮೆರಿಕದ ಷೇರು ಹೂಡಿಕೆ ಕಂಪನಿ Advent International ಹಿಡಿತದಲ್ಲಿತ್ತು.
ಮ್ಯಾನ್‌ಕೈಂಡ್ ಫಾರ್ಮಾ
ಭಾರತದ ಬಹುರಾಷ್ಟ್ರೀಯ ಔಷಧೀಯ ಮತ್ತು ಆರೋಗ್ಯ ಉತ್ಪನ್ನ ಕಂಪನಿಯಾಗಿದೆ.
ಪ್ರಧಾನ ಕಛೇರಿ: ಭಾರತದ ದೆಹಲಿಯಲ್ಲಿದೆ
ಸ್ಥಾಪಕ: ಆರ್.ಸಿ. ಜುನೇಜಾ
ಸ್ಥಾಪನೆ: 1991
BSV
ಡಾ. ವಿನೋದ್ ಜಿ. ದಫ್ಟರಿ 1971 ರಲ್ಲಿ ಭಾರತ್ ಸೀರಮ್ಸ್ ಮತ್ತು ವ್ಯಾಕ್ಸಿನ್ಸ್ ಲಿಮಿಟೆಡ್ (BSV) ಅನ್ನು ಸ್ಥಾಪಿಸಿದರು.