Published on: December 14, 2022

ಯುಜಿಸಿ ಹೊಸ ಮಾರ್ಗಸೂಚಿ

ಯುಜಿಸಿ ಹೊಸ ಮಾರ್ಗಸೂಚಿ

ಸುದ್ದಿಯಲ್ಲಿ ಏಕಿದೆ? ವಿದ್ಯಾರ್ಥಿಗಳು ಆನರ್ಸ್ ಪದವಿಯನ್ನು (ಗೌರವ ಪದವಿ) ಪಡೆಯಲು ಮೂರರ ಬದಲಿಗೆ ನಾಲ್ಕು ವರ್ಷದ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಬೇಕು ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ತಿಳಿಸಿದೆ.

ಮುಖ್ಯಾಂಶಗಳು

  • ಪ್ರಸ್ತುತ, ಮೂರು ವರ್ಷಗಳ ಪದವಿಪೂರ್ವ ಕೋರ್ಸ್‌ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಗೌರವ ಪದವಿ; ಪಡೆಯುತ್ತಿದ್ದು, ಈ ಅವಧಿಯು ಇನ್ನು ಮುಂದೆ ನಾಲ್ಕು ವರ್ಷಗಳಿಗೆ ವಿಸ್ತರಣೆಯಾಗಲಿದೆ.
  • ನೂತನ ಶಿಕ್ಷಣ ನೀತಿಯನ್ವಯ (ಎನ್‌ಇಪಿ) ರೂಪಿಸಲಾದ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗಾಗಿ ಪಠ್ಯಕ್ರಮ ಮತ್ತು ಕ್ರೆಡಿಟ್‌ ಫ್ರೇಮ್‌ವರ್ಕ್ ಎಂಬ ಕರಡಿನಲ್ಲಿ ಯೂಜಿಸಿ ಈ ಹೊಸ ನಿಯಮವನ್ನು ಪರಿಚಯಿಸಿದೆ.
  • ವಿದ್ಯಾರ್ಥಿಗಳು ಸಂಶೋಧನಾ ಕೋರ್ಸ್‌ಗಳಿಗೆ(ಪಿಎಚ್‌.ಡಿ) ಪ್ರವೇಶ ಪಡೆದುಕೊಳ್ಳಬೇಕಾದರೆ ನಾಲ್ಕು ವರ್ಷದ ಪದವಿ ಕಾರ್ಯಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.
  • ವಿದ್ಯಾರ್ಥಿಗಳಿಗೆ ಕೋರ್ಸ್‌ ಅವಧಿಯಲ್ಲಿ ಹಲವು ಬಾರಿ ಪ್ರವೇಶ/ನಿರ್ಗಮನಕ್ಕೂ ಎಫ್‌ಐಯುಪಿ ಅವಕಾಶ ಕಲ್ಪಿಸಲಿದೆ.

ಉದ್ದೇಶ

  • ವಿದ್ಯಾರ್ಥಿಗಳಿಗೆ ಒಂದು ಅಥವಾ ಹೆಚ್ಚು ವಿಶೇಷ ಆಸಕ್ತಿಯ ಕ್ಷೇತ್ರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಮತ್ತು ವಿವಿಧ ವಿಭಾಗಗಳಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಬಹು ಎಂಟ್ರಿ/ಎಕ್ಸಿಟ್‌ಗೆ ಅವಕಾಶ

  • ವಿದ್ಯಾರ್ಥಿಗಳಿಗೆ ಕೋರ್ಸ್‌ ಅವಧಿಯಲ್ಲಿ ಹಲವು ಬಾರಿ ಪ್ರವೇಶ/ನಿರ್ಗಮನಕ್ಕೂ ಎಫ್‌ಐಯುಪಿ ಅವಕಾಶ ಕಲ್ಪಿಸಲಿದೆ. ಅಂದರೆ, ವಿದ್ಯಾರ್ಥಿಗಳು ಮೂರು ವರ್ಷಕ್ಕೆ ಮುನ್ನವೇ ಕೋರ್ಸ್‌ನಿಂದ ನಿರ್ಗಮಿಸಿದರೆ, ಅಂದಿನಿಂದ ಮುಂದಿನ ಮೂರು ವರ್ಷದ ಒಳಗಾಗಿ ಅವರು ಪುನರ್‌ ಸೇರ್ಪಡೆಗೊಂಡು ಕೋರ್ಸ್‌ ಮುಗಿಸಬಹುದು. ಆದರೆ ಗರಿಷ್ಠ 7 ವರ್ಷದ ಒಳಗೆ ಕೋರ್ಸ್‌ ಪೂರ್ಣಗೊಳಿಸಬೇಕು.

ವಿಷಯಗಳ ಆಯ್ಕೆ

  • ಎಫ್‌ವೈಯುಪಿ ಪಠ್ಯಕ್ರಮವು ಮೇಜರ್‌ ಕೋರ್ಸ್‌ಗಳು, ಮೈನರ್‌ ಕೋರ್ಸ್‌ಗಳು, ಭಾಷಾ ಕೋರ್ಸ್‌ಗಳು, ಕೌಶಲ್ಯ ಕೋರ್ಸ್‌ಗಳು, ಪರಿಸರ ಶಿಕ್ಷಣ, ಡಿಜಿಟಲ್‌ ಮತ್ತು ತಂತ್ರಜ್ಞಾನ ಪರಿಹಾರಗಳು, ಆರೋಗ್ಯ ಮತ್ತು ಆರೈಕೆ, ಯೋಗ ಶಿಕ್ಷಣ, ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್‌ ಹೀಗೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.
  • ಎರಡನೇ ಸೆಮಿಸ್ಟರ್‌ ಅಂತ್ಯದಲ್ಲಿ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಮೇಜರ್‌ ಕೋರ್ಸ್‌ ಅನ್ನು ಬದಲಾಯಿಸಲು ಅವಕಾಶವಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ಮೇಜರ್‌ ವಿಷಯವನ್ನು ಅಥವಾ ಎರಡು ಮೇಜರ್‌ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶವೂ ಇರಲಿದೆ. ಯಾವುದೇ ವಿದ್ಯಾರ್ಥಿಯು ಮೇಜರ್‌ ಆಗಿ ಆಯ್ದುಕೊಂಡ ವಿಷಯದಲ್ಲಿಕನಿಷ್ಠ 50% ಕ್ರೆಡಿಟ್‌ ಗಳಿಸಬೇಕು ಎಂದು ಯುಜಿಸಿ ದಾಖಲೆಯು ತಿಳಿಸಿದೆ.