Published on: January 17, 2022

ಯೋಗಿನಿ ವಿಗ್ರಹ

ಯೋಗಿನಿ ವಿಗ್ರಹ

ಸುದ್ಧಿಯಲ್ಲಿ ಏಕಿದೆ ? ಭಾರತದಿಂದ ಕಾಣೆಯಾಗಿದ್ದ 10ನೇ ಶತಮಾನದ ಬೆಲೆಬಾಳುವ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಮಕರ ಸಂಕ್ರಾಂತಿಯ ಹಬ್ಬದಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ

ಮುಖ್ಯಾಂಶಗಳು

  • 40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಲೋಖಾರಿ ದೇವಸ್ಥಾನದಿಂದ ಕಾಣೆಯಾಗಿದ್ದ ಮೇಕೆ ಮುಖದ ಯೋಗಿನಿ ವಿಗ್ರಹವು ಇಂಗ್ಲೆಂಡ್‌ನ ಉದ್ಯಾನದಲ್ಲಿ ಪತ್ತೆಯಾಗಿತ್ತು.
  • ಭುದೆಲ್‌ಖಂಡದ ಬಂದಾ ಜಲ್ಲೆಯ ಲೋಖಾರಿ ದೇವಸ್ಥಾನದ ಯೋಗಿನಿ ವಿಗ್ರಹವನ್ನು ನವದೆಹಲಿಯರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ಯೋಗಿನಿ ವಿಗ್ರಹ

  • ಯೋಗಿನಿ ತಂತ್ರ ಪೂಜಾ ಆರಾಧನೆಗೆ ಸಂಬಂಧಿಸಿದ ಶಕ್ತಿಶಾಲಿ ಸ್ತ್ರೀ ದೇವತೆಗಳ ಪಂಗಡವಾಗಿದೆ. 64 ಯೋಗಿನಿಯರ ಈ ದೇವತೆಗಳನ್ನು ಗುಂಪಾಗಿ ಆರಾಧಿಸಲಾಗುತ್ತದೆ ಮತ್ತು ಅನಂತ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.
  • 1980ರ ದಶಕದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದ ದೇವಸ್ಥಾನದಿಂದ ಈ ಅಪರೂಪದ ವಿಗ್ರಹ ಕಾಣೆಯಾಗಿತ್ತು. 2021 ಅಕ್ಟೋಬರ್‌ನಲ್ಲಿ ವಿಗ್ರಹ ಪತ್ತೆಯಾದ ಕುರಿತು ಮಾಹಿತಿ ಲಭಿಸಿತ್ತು. ಬಳಿಕ ಭಾರತಕ್ಕೆ ತರುವ ನಿಟ್ಟಿನಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿತ್ತು.