Published on: August 9, 2022

ರಂಗನತಿಟ್ಟು ಪಕ್ಷಿಧಾಮ ರಾಮ್ಸರ್ ಪಟ್ಟಿಗೆ ಸೇರ್ಪಡೆ

ರಂಗನತಿಟ್ಟು ಪಕ್ಷಿಧಾಮ ರಾಮ್ಸರ್ ಪಟ್ಟಿಗೆ ಸೇರ್ಪಡೆ

ಸುದ್ದಿಯಲ್ಲಿ ಏಕಿದೆ?

ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಭಾರತದ ಒಟ್ಟು 10 ತಾಣಗಳು ರಾಮ್ಸರ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿಕೊಂಡಿದೆ.

ಮುಖ್ಯಾಂಶಗಳು

  • ಭಾರತದಲ್ಲಿ ಇದುವರೆಗೆ 64 ಜೌಗು ಪ್ರದೇಶಗಳಿದ್ದು, ಅತಿಹೆಚ್ಚು ಜೌಗು ಪ್ರದೇಶಗಳಿರುವ ದೇಶ ಎಂಬ ಖ್ಯಾತಿಗೂ ಒಳಗಾಗಿದೆ
  • ಪಕ್ಷಿಗಳ ಮೆಚ್ಚಿನ ಮನೆಯಾದ ರಂಗನತಿಟ್ಟು ಪಕ್ಷಿಧಾಮವು ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗಿರುವುದು ನಾಡಿನ ಜೀವವೈವಿಧ್ಯದ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆ.

ರಂಗನತಿಟ್ಟು ಪಕ್ಷಿಧಾಮ

  • ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ.
  • ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ.ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ  ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ  ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ.

ಧಾಮದ ಇತಿಹಾಸ

  • 1648 ರಲ್ಲಿ ಆಗಿನ ಮೈಸೂರು ಸ೦ಸ್ಥಾನದ ಅರಸರಾದ ಕ೦ಠೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು.
  • 1940ರಲ್ಲಿ ಪಕ್ಷಿವಿಜ್ಞಾನ ತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವದನ್ನು ಗಮನಿಸಿ ಮೈಸೂರು ಸ೦ಸ್ಥಾನದ ಆಗಿನ ರಾಜರಾದ ಒಡೆಯರ್ ಅವರನ್ನು ಈ ದ್ವೀಪ ಸಮೂಹಗಳನ್ನು ಅಭಯಧಾಮವೆ೦ದು ಘೋಷಿಸಲು ಮನಒಲಿಸಿದರು.

ರಾಮ್ಸರ್ ಸಮಾವೇಶದ ಬಗ್ಗೆ:·

  • ರಾಮ್ಸರ್ ಸಮಾವೇಶವನ್ನು ಯುನೆಸ್ಕೋ ಫೆಬ್ರವರಿ 2, 1971 ರಂದು ಸ್ಥಾಪಿಸಿತು. ಇದು ಅಂತರಸರ್ಕಾರಿ ಪರಿಸರ ಒಪ್ಪಂದವಾಗಿದ್ದು, ಇರಾನ್‌ನಲ್ಲಿರುವ ರಾಮ್‌ಸರ್ ನಗರದ ಹೆಸರನ್ನು ಇಡಲಾಗಿದೆ ಏಕೆಂದರೆ ಅದು ಅಲ್ಲಿ ಸಹಿ ಹಾಕಲ್ಪಟ್ಟಿದೆ. ಸಮಾವೇಶವು 1975 ರಲ್ಲಿ ಜಾರಿಗೆ ಬಂದಿತು. ಇದು ತೇವ ಪ್ರದೇಶಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು ಅಂತರರಾಷ್ಟ್ರೀಯ ಸಹಕಾರ ಮತ್ತು ರಾಷ್ಟ್ರೀಯ ಕ್ರಮವನ್ನು ಉತ್ತೇಜಿಸುತ್ತದೆ. ಇದರ ಅಡಿಯಲ್ಲಿ, ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳನ್ನು ವಿಶ್ವಾದ್ಯಂತ ಗುರುತಿಸಲಾಗಿದೆ.