Published on: August 3, 2021

ರಷ್ಯಾದ ‘ನೌಕಾ’ ಹೆಸರಿನ ಸಂಶೋಧನಾ ಘಟಕ

ರಷ್ಯಾದ ‘ನೌಕಾ’ ಹೆಸರಿನ ಸಂಶೋಧನಾ ಘಟಕ

ಸುದ್ಧಿಯಲ್ಲಿ ಏಕಿದೆ ? ಬಾಹ್ಯಾಕಾಶ ನಿಲ್ದಾಣಕ್ಕೆ ಗೆ ರವಾನಿಸಿದ್ದ ರಷ್ಯಾದ ‘ನೌಕಾ’ ಹೆಸರಿನ ಸಂಶೋಧನಾ ಘಟಕದ ಜೆಟ್ ಥ್ರಸ್ಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಬಾಹ್ಯಾಕಾಶ ನಿಲ್ದಾಣ ಕೆಲ ಸಮಯ ನಿಯಂತ್ರಣ ತಪ್ಪಿ ಹೋಗಿತ್ತು.

ನಿಯಂತ್ರಣ ತಪ್ಪಲು ಕಾರಣ

  • ಜೆಟ್ ಥ್ರಸ್ಟರ್‌ಗಳನ್ನು ಕಕ್ಷೆಯ ಹೊರನೆಲೆಯಲ್ಲಿ ಸೇರ್ಪಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಬಾಹ್ಯಾಕಾಶ ನಿಲ್ದಾಣ ನಿಯಂತ್ರಣ ತಪ್ಪಿ ಆತಂಕ ಸೃಷ್ಟಿಯಾಗಿತ್ತು. ಈ ಘಟನೆಯಿಂದ ಬಾಹ್ಯಾಕಾಶ ತುರ್ತು ಪರಿಸ್ಥಿತಿಯನ್ನು ಕೂಡ ಘೋಷಣೆ ಮಾಡಲಾಗಿತ್ತು.

ಏನಿದು ನೌಕಾ?

  • ಕಳೆದ ಜುಲೈ 21ರಂದು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೇ ROSCOSMOS ನೌಕಾ ಹೆಸರಿನ ಸಂಶೋಧನಾ ಘಟಕವನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಿತ್ತು. ರಷ್ಯನ್ ಭಾಷೆಯಲ್ಲಿ ನೌಕಾ ಎಂದರೆ ವಿಜ್ಞಾನ ಎಂದರ್ಥ. ಸತತ ಎಂಟು ದಿನಗಳ ಪ್ರಯಾಣದ ಬಳಿಕ ನೌಕಾ ಸಂಶೋಧನಾ ಘಟಕ ಕಳೆದ ಜುಲೈ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ವನ್ನು ತಲುಪಿತ್ತು.
  • ಒಟ್ಟು 43 ಅಡಿ ಉದ್ದದ 20 ಟನ್ ತೂಕದ ಈ ನೌಕಾ ಸಂಶೋಧನಾ ಘಟಕವನ್ನು 2007ರಲ್ಲೇ ISS ಜೊತೆ ಜೋಡಿಸಬೇಕಿತ್ತು. ಆದರೆ ತಾಂತ್ರಿಕ ದೋಷವನ್ನು ಸರಿಪಡಿಸಲು ತೆಗೆದುಕೊಂಡ ಸುದೀರ್ಘ ಸಮಯದಿಂದಾಗಿ ಉಡಾವಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು.