Published on: September 3, 2021

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ

ಸುದ್ಧಿಯಲ್ಲಿ ಏಕಿದೆ? ಅಸ್ಸಾಂನ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಬದಲಾಯಿಸಿದ್ದು, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣಗೊಳಿಸಲಾಗಿದೆ.

  • ಅತಿ ಹೆಚ್ಚು ರಾಯಲ್‌ ಬಂಗಾಳ ಹುಲಿಗಳನ್ನು ಹೊಂದಿರುವ ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಇದಾಗಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹೆಸರನ್ನು ತೆರವುಗೊಳಿಸಲಾಗಿದೆ.

ಒರಂಗ್‌ ರಾಷ್ಟ್ರೀಯ ಉದ್ಯಾನವನ ಬಗ್ಗೆ

  • ಒರಂಗ್‌ ರಾಷ್ಟ್ರೀಯ ಉದ್ಯಾನವನ ಧಾರಂಗ್‌, ಉದಳ್‌ಗುರಿ ಮತ್ತು ಸೋನಿತ್‌ಪುರ್‌ ಜಿಲ್ಲೆಯ ಬ್ರಹ್ಮಪುತ್ರ ನದಿಯ ಉತ್ತರ ದಂಡೆ ಮೇಲೆ ಇದೆ. ಇಂಡಿಯನ್‌ ರೈನೋಸ್‌, ರಾಯಲ್‌ ಬೆಂಗಾಲ್‌ ಟೈಗರ್‌, ಪಿಗ್ಮಿ ಹಾಗ್‌, ಆನೆಗಳು ಮತ್ತು ಕಾಡೆಮ್ಮೆಗಳಿಗೆ ಹೆಸರುವಾಸಿಯಾಗಿದೆ. ಒಟ್ಟು 79.28 ಕಿಮೀ ಚದರ ಕಿಮೀ ವಿಸ್ತಿರ್ಣ ಹೊಂದಿರುವ ಒರಂಗ್‌ ರಾಷ್ಟ್ರೀಯ ಉದ್ಯಾನವನವನ್ನು 1999ರಲ್ಲಿ ಸ್ಥಾಪಿಸಲಾಯಿತು. ಅದಕ್ಕೂ ಮುನ್ನ 1985ರಲ್ಲಿ ವನ್ಯಜೀವಿ ಧಾಮ ಎಂದು ಘೋಷಿಸಲಾಗಿತ್ತು.
  • 2001ರಲ್ಲಿ ಕಾಂಗ್ರೆಸ್‌ನ ತರುಣ್‌ ಗೊಗೊಯ್‌ ನೇತೃತ್ವದ ಅಸ್ಸಾಂ ಸರ್ಕಾರ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್‌ ಗಾಂಧಿ ಹೆಸರನ್ನು ನಾಮಕರಣ ಮಾಡಿತ್ತು. ಸದ್ಯ ಬಿಜೆಪಿಯ ಹಿಮಂತ್‌ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದು, ಕೇಂದ್ರದ ನೀತಿಯನ್ನು ರಾಜ್ಯದಲ್ಲಿ ಅಳವಡಿಸಲು ಮುಂದಾಗಿದ್ದಾರೆ