Published on: February 3, 2024
ರಾಮ್‌ಸಾರ್ ಸೈಟ್
ರಾಮ್‌ಸಾರ್ ಸೈಟ್
ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ಭಾರತವು ತನ್ನ ರಾಮ್‌ಸರ್ ಸೈಟ್‌ಗಳನ್ನು (ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ತೇವಭೂಮಿಗಳು) ಅಸ್ತಿತ್ವದಲ್ಲಿರುವ 75 ರಿಂದ 80 ಕ್ಕೆ ಹೆಚ್ಚಿಸಿದೆ, ಕರ್ನಾಟಕದಿಂದ ಮೂರು ಮತ್ತು ತಮಿಳುನಾಡಿನ ಎರಡು ರಾಮ್‌ಸಾರ್ ಸೈಟ್‌ಗಳನ್ನು ಗೊತ್ತುಪಡಿಸಿದೆ.
ಹೊಸದಾಗಿ ಸೇರ್ಪಡೆಗೊಂಡ ರಾಮಸರ್ ಸೈಟಗಳು
ಕರ್ನಾಟಕ
- ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ: ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿದೆ
- ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿ ಸಂರಕ್ಷಣಾ ಧಾಮವಾಗಿದೆ.
- ಇದನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಅಡಿ ಸ್ಥಳೀಯ ಮತ್ತು ವಲಸಿಗ ನೀರಿನ ಹಕ್ಕಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಘೋಷಣೆ ಮಾಡಲಾಗಿದೆ.
- ಇದು ತಾತ್ಕಾಲಿಕ ನೀರಿನ ಮೂಲವಾಗಿದ್ದು (ಟ್ಯಾಂಕ್ ಬೆಡ್) ಸಾಕಷ್ಟು ಕರಿಜಾಲಿ ಮರ (ಅಕೇಸಿಯಾ ನಿಲೊಟಿಕಾ)ಗಳೊಂದಿಗೆ 244.04 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ನೀರಿನ ಹಕ್ಕಿಗಳಿಗೆ ಸಂತಾನೋತ್ಪತ್ತಿ ಮತ್ತು ಮರಿಗಳ ಪಾಲನೆಯ ಕೇಂದ್ರವಾಗಿದೆ.
- ಇದು ಪೈಂಟೆಡ್ ಕೊಕ್ಕರೆ (ಮೈಕ್ಟೇರಿಯಾ ಲ್ಯುಕೋಸೆಫಾಲಾ) ಮತ್ತು ಕಪ್ಪು-ತಲೆಯ ಐಬಿಸ್ (ಥ್ರೆಸ್ಕಿಯೊರ್ನಿಸ್ ಮೆಲನೊಸೆಫಾಲಸ್) 1% ಕ್ಕಿಂತ ಹೆಚ್ಚು ಜೈವಿಕ ಭೌಗೋಳಿಕ ಜನಸಂಖ್ಯೆಯನ್ನು ಬೆಂಬಲಿಸುತ್ತದೆ.
- ಮಾಗಡಿ ಕೆರೆ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿದೆ
- ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ದಿನಾಂಕ 2015ರ ಮೂಲಕ ಇದನ್ನು ಅಧಿಸೂಚಿತಗೊಳಿಸಲಾಯಿತು.
- ಮಾನವ ನಿರ್ಮಿತ ಜೌಗು ಪ್ರದೇಶವಾಗಿದ್ದು, ಸುಮಾರು 50 ಹೆಕ್ಟೇರ್ ಪ್ರದೇಶವನ್ನು ನೀರಾವರಿ ಉದ್ದೇಶಗಳಿಗಾಗಿ ಮಳೆನೀರನ್ನು ಸಂಗ್ರಹಿಸಲು ನಿರ್ಮಿಸಲಾಗಿದೆ.
- ಇದು 166 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ, ಚಳಿಗಾಲದಲ್ಲಿ ಸುಮಾರು 8,000 ಪಕ್ಷಿಗಳು ಈ ಸ್ಥಳಕ್ಕೆ ಭೇಟಿ ನೀಡುತ್ತವೆ. ಮಾಗಡಿ ಕೆರೆಯು ದಕ್ಷಿಣ ಭಾರತದಲ್ಲಿ ಬಾರ್-ಹೆಡೆಡ್ ಹೆಬ್ಬಾತುಗಳಿಗೆ (ಅನ್ಸರ್ ಇಂಡಿಕಸ್)ಗಾಗಿ ಅತಿದೊಡ್ಡ ಚಳಿಗಾಲದ ಮೈದಾನಗಳಲ್ಲಿ ಒಂದಾಗಿದೆ.
- ವಾಟರ್ ಫೌಲ್ ಮತ್ತು ಇತರ ಜಲಚರ ಜೀವಿಗಳ ವಾಸಸ್ಥಳ ಮತ್ತು ಸಂತಾನೋತ್ಪತ್ತಿ ಸ್ಥಳವನ್ನು ರಕ್ಷಿಸುವ ಸಲುವಾಗಿ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವನ್ನು ರಚಿಸಲಾಯಿತು.
ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ): ಉತ್ತರ ಕನ್ನಡ ಜಿಲ್ಲೆಯಯಲ್ಲಿದೆ
- ಪ್ರವಾಹ ಮತ್ತು ಸವೆತದ ಅಪಾಯ ತಗ್ಗಿಸುವಿಕೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಜೀವನೋಪಾಯದ ಬೆಂಬಲ ಸೇರಿದಂತೆ ವೈವಿಧ್ಯಮಯ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತದೆ.
- ಜೌಗು ಪ್ರದೇಶವು ಮೀನುಗಾರಿಕೆ, ಕೃಷಿ, ಖಾದ್ಯ ಬೈವಾಲ್ವ್ ಮತ್ತು ಏಡಿಗಳ ಸಂಗ್ರಹ, ಸೀಗಡಿ ಮೀನುಗಾರಿಕೆ, ನದೀಮುಖದ ಭತ್ತದ ಗದ್ದೆಗಳಲ್ಲಿ ಸಾಂಪ್ರದಾಯಿಕ ಮೀನು ಸಾಕಣೆ, ಬೈವಾಲ್ವ್ ಶೆಲ್ ಸಂಗ್ರಹಣೆ ಮತ್ತು ಉಪ್ಪು ಉತ್ಪಾದನೆಯನ್ನು ಬೆಂಬಲಿಸುವ ಮೂಲಕ 6000-7500 ಕುಟುಂಬಗಳಿಗೆ ಜೀವನೋಪಾಯವನ್ನು ಒದಗಿಸುತ್ತದೆ.
- ನದೀಮುಖದ ಗಡಿಯಲ್ಲಿರುವ ಮ್ಯಾಂಗ್ರೋವ್‌ಗಳು ಚಂಡಮಾರುತಗಳು ವಿರುದ್ಧ ತೀರವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನದೀಮುಖವು 66 ಜಲಪಕ್ಷಿ ಜಾತಿಗಳ 43,000 ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ
ನಿಮಗಿದು ತಿಳಿದಿರಲಿ
ರಂಗನತಿಟ್ಟು ಪಕ್ಷಿಧಾಮವನ್ನು 2022ರ ಆಗಸ್ಟ್ನಲ್ಲಿ ಈ ಪಟ್ಟಿಗೆ ಸೇರಿಸಲಾಗಿತ್ತು. ಇದು ಕರ್ನಾಟಕದ ಮೊದಲ ರಾಮಸರ್ ಸೈಟ್ ಆಗಿದೆ.
ತಮಿಳುನಾಡು
- ಕರೈವೆಟ್ಟಿ ಪಕ್ಷಿಧಾಮ: ಇದು ತಮಿಳುನಾಡಿನ ಅತಿ ದೊಡ್ಡ ಒಳನಾಡಿನ ತೇವ ಪ್ರದೇಶವಾಗಿದೆ.
- ಲಾಂಗ್‌ವುಡ್ ಶೋಲಾ ರಿಸರ್ವ್ ಫಾರೆಸ್ಟ್: ಇದು ತಮಿಳುನಾಡಿನಲ್ಲಿದೆ
ತನ್ನ ಹೆಸರನ್ನು ತಮಿಳು ಪದ “ಸೋಲೈ” ನಿಂದ ಪಡೆದುಕೊಂಡಿದೆ, ಇದರರ್ಥ ‘ಉಷ್ಣವಲಯದ ಮಳೆಕಾಡು’.
ಪಶ್ಚಿಮ ಘಟ್ಟಗಳ 26 ಸ್ಥಳೀಯ ಪಕ್ಷಿ ಪ್ರಭೇದಗಳಲ್ಲಿ 14 ಈ ತೇವ ಪ್ರದೇಶಗಳಲ್ಲಿ ಕಂಡುಬರುತ್ತವೆ.