Published on: August 11, 2022
ರಾಷ್ಟ್ರೀಯ ಕೈಮಗ್ಗ ದಿನ
ರಾಷ್ಟ್ರೀಯ ಕೈಮಗ್ಗ ದಿನ
ಸುದ್ದಿಯಲ್ಲಿ ಏಕಿದೆ?
ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಯಿತು. ಈ ದಿನವು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಇದು ಕೈಮಗ್ಗ ಉದ್ಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ.
- ಜವಳಿ ಸಚಿವಾಲಯವು ಆಚರಣೆಯ ನೋಡಲ್ ಏಜೆನ್ಸಿಯಾಗಿದೆ.
ಮುಖ್ಯಾಂಶಗಳು
- ದೇಶದ ನೇಕಾರರ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ, ಕೈಮಗ್ಗ ನೇಕಾರರ ಸಮಗ್ರ ಕಲ್ಯಾಣ ಯೋಜನೆ, ಸಮಗ್ರ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಮತ್ತು ನೂಲು ಸರಬರಾಜು ಯೋಜನೆಯಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.·
- ಭಾರತವು ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ದೊಡ್ಡ ಕೈಮಗ್ಗ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಭಾರತದಲ್ಲಿನ ದೇಶಿಯ ಉಡುಪು ಉದ್ಯಮವು ಭಾರತದ ಒಟ್ಟು ಜಿಡಿಪಿಯಲ್ಲಿ ಶೇಕಡಾ 5 ರಷ್ಟು ಕೊಡುಗೆ ನೀಡುತ್ತಿದೆ.
ಭಾರತೀಯ ಕೈಮಗ್ಗ ಉದ್ಯಮದ ಬಗ್ಗೆ:·
- ಕೈಮಗ್ಗ ಉದ್ಯಮವು ಭಾರತದ ಅತಿದೊಡ್ಡ ಉದ್ಯಮವಾಗಿದೆ.·
- ಈ ವಲಯದ ನೇಯ್ಗೆ ಸಮುದಾಯದಿಂದ ತಯಾರಿಸಿದ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ.·
- ಇದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಮೂಲವಾಗಿದೆ.·
- ಮಹಿಳಾ ಸಬಲೀಕರಣದಲ್ಲಿ ಈ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ನೇಕಾರರು ಮತ್ತು ಸಂಬಂಧಿತ ಕಾರ್ಮಿಕರಲ್ಲಿ 70% ಮಹಿಳೆರಿದ್ದಾರೆ.·
- ಭಾರತೀಯ ಕೈಮಗ್ಗ ಕ್ಷೇತ್ರವು ತನ್ನ ಉತ್ಪನ್ನಗಳನ್ನು ಯುಕೆ, ಯುಎಸ್ಎ, ಫ್ರಾನ್ಸ್, ಜರ್ಮನಿ ಮತ್ತು ದಕ್ಷಿಣ ಆಫ್ರಿಕಾದಂತಹ ವಿಶ್ವದಾದ್ಯಂತ 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.
ದಿನದ ಇತಿಹಾಸ·
- 1905 ಆಗಸ್ಟ್ 7 ರಂದು ಬಂಗಾಳದಲ್ಲಿ ಸ್ವದೇಶಿ ಚಲುವಳಿ ಪ್ರಾರಂಭವಾಗಿತ್ತು. ಆ ಚಳುವಳಿಯ ಮೂಲ ಉದ್ದೇಶ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಿ, ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಉತ್ತೇಜಿಸುವುದಾಗಿದೆ. ಹಾಗಾಗಿ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ·
- ಸ್ವದೇಶಿ ಆಂದೋಲನವು ವಿದೇಶಿ ಸರಕುಗಳ ಮೇಲಿನ ಅವಲಂಬನೆಯನ್ನು ನಿಗ್ರಹಿಸುವ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.·
- ಆಂದೋಲನದ ಭಾಗವಾಗಿ, ಪ್ರತಿಯೊಂದು ಮನೆಯಲ್ಲೂ ಖಾದಿ ಉತ್ಪಾದನೆ ಪ್ರಾರಂಭವಾಯಿತು.·
- ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಖಾದಿಯಿಂದ ಮಾಡಿದ ಭಾರತದ ಧ್ವಜವನ್ನು ಇಂಡಿಯಾ ಗೇಟ್ ಬಳಿ ಅನಾವರಣಗೊಳಿಸಲಾಯಿತು. ಹೀಗಾಗಿ ಸ್ವದೇಶಿ ಆಂದೋಲನ ಆರಂಭವಾದ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.
- ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಚೆನ್ನೈನಲ್ಲಿ ಆಗಸ್ಟ್ 7, 2015 ರಂದು ಆಚರಿಸಲಾಯಿತು;.
· ಈ ದಿನವು ಗ್ರಾಮೀಣ ಉದ್ಯೋಗ ಸೇರಿದಂತೆ ಭಾರತದ ಹಲವಾರು ಕ್ಷೇತ್ರಗಳಲ್ಲಿ ನೇಕಾರ ಸಮುದಾಯದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಈ ದಿನವು ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ರಕ್ಷಿಸಲು ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವ ಮೂಲಕ ಕೈಮಗ್ಗ ಸಮುದಾಯವನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತದೆ. ಇದರ ಗೌರವಾರ್ಥವಾಗಿ ಕೈಮಗ್ಗ ನೇಕಾರ ಸಮುದಾಯದಲ್ಲಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.