Published on: October 15, 2022

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ: 4ನೇ ಸ್ಥಾನ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ: 4ನೇ ಸ್ಥಾನ

ಸುದ್ದಿಯಲ್ಲಿ ಏಕಿದೆ?

ಗುಜರಾತನಲ್ಲಿ ನಡೆದ 36ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 88 ಪದಕಗಳು ಲಭಿಸಿದ್ದು, 27 ಚಿನ್ನ, 23 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಪಡೆದುಕೊಂಡು 4 ನೇ ಸ್ಥಾನದಲ್ಲಿದೆ.

ಮುಖ್ಯಾಂಶಗಳು

  • ದೇಶದ ಸೈನಿಕರ ಸರ್ವಿಸಸ್ ತಂಡ (61ಚಿನ್ನ, 35ಬೆಳ್ಳಿ, 32 ಕಂಚು, ಒಟ್ಟು 12 ಪದಕಗಳನ್ನು) ಅಗ್ರಸ್ಥಾನದೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ಮಹಾರಾಷ್ಟ್ರ ಎರಡನೆಯ ಸ್ಥಾನ ಮತ್ತು ಹರಿಯಾಣ ಮೂರನೆಯ ಸ್ಥಾನ ಪಡೆದು ಕೊಂಡರೆ, ಆತಿಥ್ಯವನ್ನು ಹೊಂದಿದ ಗುಜರಾತವು 12 ನೇ ಸ್ಥಾನ ಪಡೆದು ಕೊಂಡಿತು.
  • ಕರ್ನಾಟಕದ ಈಜುಪಟು ಹಶಿಕಾ ರಾಮಚಂದ್ರ: ಕೂಟದ ಅತ್ಯುತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿ ಪಡೆದುಕೊಂಡರು.