Published on: January 12, 2022

`ರಾಷ್ಟ್ರೀಯ ಯುವ ದಿನ’

`ರಾಷ್ಟ್ರೀಯ ಯುವ ದಿನ’

ಸುದ್ಧಿಯಲ್ಲಿ ಏಕಿದೆ ? 18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.

ಮುಖ್ಯಾಂಶಗಳು

  • 1863ರ ಜನವರಿ 12ರಂದು ಕೋಲ್ಕತ್ತಾದಲ್ಲಿ ಜನಿಸಿದ್ದ ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತಾ. ಶ್ರೀಮಂತ ಬಂಗಾಳಿ ಕುಟುಂಬದಲ್ಲಿ ಜನಿಸಿದ್ದ ನರೇಂದ್ರನಾಥ ದತ್ತಾ ನಂತರ ಸ್ವಾಮಿ ರಾಮಕೃಷ್ಣ ಪರಮಹಂಸರ ಶಿಷ್ಯರಾದರು. ಇದಾದ ಬಳಿಕ ಸ್ವಾಮಿ ವಿವೇಕಾನಂದರು ಏರಿದ ಎತ್ತರ ಈಗ ಇತಿಹಾಸ. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಇವರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ.
  • ಹೀಗೆ ತಮ್ಮ ತತ್ವ, ಆದರ್ಶಗಳಿಂದ ಎಲ್ಲರ ಬದುಕಿನಲ್ಲೂ ಸ್ಫೂರ್ತಿ ತುಂಬಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಪ್ರತಿವರ್ಷ `ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. 1984ರಲ್ಲಿ ಭಾರತ ಸರ್ಕಾರವು ಜನವರಿ 12ನ್ನು ರಾಷ್ಟ್ರೀಯ ಯುವ ದಿನ ಎಂದು ಘೋಷಿಸಿತು ಮತ್ತು 1985ರಿಂದ ಈ ದಿನವನ್ನು ಪ್ರತಿವರ್ಷ ಯುವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ರಾಷ್ಟ್ರೀಯ ಯುವ ದಿನದ ಆಚರಣೆ

  • ರಾಷ್ಟ್ರೀಯ ಯುವ ದಿನ 2022 ರಾಷ್ಟ್ರೀಯ ಯುವ ಉತ್ಸವ 2022 ರ ಉದ್ಘಾಟನೆಯೊಂದಿಗೆ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಪುದುಚೇರಿಯಲ್ಲಿ ಆನ್-ಗ್ರೌಂಡ್ ಈವೆಂಟ್ ಎಂದು ಯೋಜಿಸಲಾಗಿತ್ತು, ಭಾರತದಲ್ಲಿ ಕೊವಿಡ್ ಮೂರನೇ ಅಲೆಯ ಆತಂಕವಿರುವ ಕಾರಣ ಆ ಬಾರಿ ಆಚರಣೆಯು ವರ್ಚುವಲ್ ಆಗಿರುತ್ತದೆ.