Published on: April 13, 2023

ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ 2023

ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ 2023

ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಪ್ರತಿವರ್ಷ ಏಪ್ರಿಲ್ 11 ರಂದು ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ.

ಮುಖ್ಯಾಂಶಗಳು

  • ಏಪ್ರಿಲ್ 11 ಮಹಾತ್ಮ ಗಾಂಧೀಜಿ ಅವರ ಪತ್ನಿ ಕಸ್ತೂರಬಾ ಗಾಂಧಿಯವರ 90 ನೇ ಜನ್ಮದಿನದ ಸಂದರ್ಭದಲ್ಲಿ ಘೋಷಿಸಿತು.
  • ಈ ದಿನವನ್ನು ಅಧಿಕೃತವಾಗಿ ಘೋಷಿಸಿದ ವಿಶ್ವದ ಮೊದಲ ದೇಶ ಭಾರತ.
  • ಭಾರತದಲ್ಲಿ ಮೊದಲ ಬಾರಿಗೆ 2003 ರಲ್ಲಿ ಆಚರಿಸಲಾಯಿತು.

ಉದ್ದೇಶ

  • ಗರ್ಭಿಣಿಗೆ ಹೆರಿಗೆಯ ಮೊದಲು, ಹೆರಿಗೆಯ ಸಮಯದಲ್ಲಿ ಮತ್ತು ನಂತರ ಅಗತ್ಯವಿರುವ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಣೆ ಮಾಡಲಾಗುತ್ತದೆ. ಅರ್ಹ ಮತ್ತು ನುರಿತ ವೈದ್ಯರಿಂದ ಪ್ರಸವವನ್ನು ಮಾಡಿಸುವುದು. ಹದಿಹರೆಯದ ಸಮಯದಲ್ಲಿ ಮತ್ತು ಗಭಾವಸ್ಥೆ ಸಮಯದಲ್ಲಿ ಮಹಿಳೆಯರಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆ ಕಡಿಮೆ ಮಾಡುವುದು.

ದಿನದ ಘೋಷಣೆ

  • ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾ (WRAI) ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆರಂಭಿಸಿತು. ಗರ್ಭಾವಸ್ಥೆ ಸಮಯದಲ್ಲಿ, ಪ್ರವಸದ ಸಮಯದಲ್ಲಿ ಹಾಗೂ ಪ್ರಸವದ ನಂತರದ ಸಮಯದಲ್ಲಿ ಮಹಿಳೆಯರ ಆರೈಕೆ, ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆರಂಭಿಸಿತು.
  • 2003ರಲ್ಲಿ WRAI ನ 1,800 ಸಂಘಟನೆಗಳ ಒಕ್ಕೂಟದ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ ಎಂದು ಘೋಷಿಸಿತು.

ಮಹತ್ವ

  • ಗರ್ಭಧಾರಣೆಯ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆ ಬಗ್ಗೆ, ಕುಟುಂಬ ಯೋಜನೆ ಮತ್ತು ಸುರಕ್ಷಿತ ವಿಧಾನಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವುದು, ಪ್ರಸವಪೂರ್ವ ಆರೈಕೆ, ಎದೆಹಾಲಿನ ಪ್ರಾಮುಖ್ಯತೆಯ ಕುರಿತು ಶಿಕ್ಷಣ ನೀಡುವುದು, ಬಾಲ್ಯ ವಿವಾಹವನ್ನು ತಡೆಗಟ್ಟುವುದು ಈ ದಿನ ಆಚರಣೆ ಮಹತ್ವವಾಗಿದೆ.