Published on: January 17, 2022

ರಾಷ್ಟ್ರೀಯ ಸ್ಟಾರ್ಟ್ಅಪ್ ದಿನ

ರಾಷ್ಟ್ರೀಯ ಸ್ಟಾರ್ಟ್ಅಪ್ ದಿನ

ಸುದ್ಧಿಯಲ್ಲಿ ಏಕಿದೆ ? ಜನವರಿ 16ರ ದಿನವನ್ನು ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್‌ಅಪ್ ಡೇ) ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಸ್ಟಾರ್ಟ್‌ಅಪ್‌ನಲ್ಲಿ ಬೆಳವಣಿಗೆ

  • ವರ್ಷದ ಹಿಂದೆ 500ರಷ್ಟಿದ್ದ ಭಾರತದ ನವೋದ್ಯಮ ಸಂಖ್ಯೆ ಈಗ 60,000ಕ್ಕೆ ಜಿಗಿದಿದೆ. ಕಳೆದ ವರ್ಷ 42 ಯುನಿಕಾರ್ನ್‌ಗಳು ಆರಂಭವಾಗಿವೆ. ಇದು ಸ್ವಾವಲಂಬಿ ಮತ್ತು ಆತ್ಮವಿಶ್ವಾಸಿ ಭಾರತವನ್ನು ಸಂಕೇತಿಸುತ್ತಿದೆ. ಭಾರತದಲ್ಲಿ ಪ್ರಸ್ತುತ 82 ಯುನಿಕಾರ್ನ್‌ಗಳಿವೆ. ಪ್ರತಿಯೊಂದರ ಮೌಲ್ಯ 1 ಬಿಲಿಯನ್ ಡಾಲರ್ ದಾಟಿದೆ. ಇದು ಜಗತ್ತಿನಲ್ಲಿಯೇ ಮೂರನೇ ಅತ್ಯಧಿಕ ಸಂಖ್ಯೆಯಾಗಿದೆ
  • ಆವಿಷ್ಕಾರಗಳ ಸೂಷ್ಯಂಕದಲ್ಲಿ ಗಮನಾರ್ಹ ಏರಿಕೆಯನ್ನು ಭಾರತ ಕಾಣುತ್ತಿದೆ. 2013-14ರಲ್ಲಿ 4,000 ಪೇಟೆಂಟ್‌ಗಳನ್ನು ನೀಡಲಾಗಿತ್ತು. ಕಳೆದ ವರ್ಷ 28 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಕೊಡಲಾಗಿದೆ. 2013-14ರಲ್ಲಿ ಸುಮಾರು 70,000 ಟ್ರೇಟ್‌ಮಾರ್ಕ್‌ಗಳು ನೋಂದಣಿಯಾಗಿದ್ದವು. 2020-21 2.5 ಲಕ್ಷಕ್ಕೂ ಅಧಿಕ ಟ್ರೇಡ್‌ಮಾರ್ಕ್‌ಗಳು ನೋಂದಣಿಯಾಗಿವೆ. 2013-14ರಲ್ಲಿ ಕೇವಲ 4,000 ಹಕ್ಕುಸ್ವಾಮ್ಯಗಳನ್ನು ನೀಡಲಾಗಿತ್ತು. ಆದರೆ ಕಳೆದ ವರ್ಷ 16,000ಕ್ಕೂ ಅಧಿಕ ಹಕ್ಕುಸ್ವಾಮ್ಯಗಳನ್ನು (ಕಾಪಿರೈಟ್) ನೀಡಲಾಗಿದೆ

ಸರ್ಕಾರ ತರಲು ಬಯಸಿರುವ  ಮೂರು ಪ್ರಮುಖ ಬದಲಾವಣೆಗಳು

ಆವಿಷ್ಕಾರ, ಸಾಹಸೋದ್ಯಮ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ.

  • ಮೊದಲನೆಯದು, ಸರ್ಕಾರದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ನಿರ್ವಹಣೆಗಳಲ್ಲಿ ಸಾಹಸೋದ್ಯಮ ಮತ್ತು ಆವಿಷ್ಕಾರವನ್ನು ಸ್ವತಂತ್ರಗಿಳಿಸುವುದು.
  • ಎರಡನೆಯದು, ಆವಿಷ್ಕಾರವನ್ನು ಪ್ರಚುರಪಡಿಸಲು ಸಾಂಸ್ಥಿಕ ಯಾಂತ್ರಿಕತೆಯನ್ನು ಸೃಷ್ಟಿಸುದು.
  • ಮೂರನೆಯದು, ಯುವ ಪರಿವರ್ತಕರು ಮತ್ತು ಯುವ ಸಾಹಸೋದ್ಯಮಿಗಳ ಕೈಹಿಡಿಯವುದು