Published on: November 12, 2022

‘ರಾಷ್ಟ್ರೀಯ ಹಿತಾಸಕ್ತಿ’ ಪ್ರಸಾರ ಕಡ್ಡಾಯ

‘ರಾಷ್ಟ್ರೀಯ ಹಿತಾಸಕ್ತಿ’ ಪ್ರಸಾರ ಕಡ್ಡಾಯ

ಸುದ್ದಿಯಲ್ಲಿ ಏಕಿದೆ?

 ಟಿವಿ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಇತ್ತೀಚಿನ ಅಪ್‌ ಲಿಂಕಿಂಗ್ ಮತ್ತು ಡೌನ್‌ಲೋಡ್ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದೆ.

ಮುಖ್ಯಾಂಶಗಳು

  • ಸುಮಾರು 11 ವರ್ಷಗಳ ನಂತರ ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್​​ಗಾಗಿರುವ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.
  • ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಇತರ ವಿಷಯಗಳಂತಹ ವಾಹಿನಿಗಳು ತಮ್ಮ ವಿಷಯವನ್ನು ಸೂಕ್ತವಾಗಿ ಮಾರ್ಪಡಿಸಬಹುದು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ವಿಷಯವನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಚಾನೆಲ್‌ಗಳಿಗೆ ಸಾಮಾನ್ಯ ಸಲಹೆಗಳನ್ನು ನೀಡಬಹುದು. ಅದನ್ನು ಚಾನಲ್ ಅನುಸರಿಸಬೇಕು ಎಂದು ಹೇಳಲಾಗಿದೆ.
  • ಹೊಸ ಮಾರ್ಗಸೂಚಿಗಳ ಪ್ರಕಾರ, ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ. ನೇರ ಪ್ರಸಾರ ಮಾಡಲು ಈವೆಂಟ್‌ಗಳ ಪೂರ್ವ ನೋಂದಣಿ ಮಾತ್ರ ಅಗತ್ಯ.

ವಿಷಯಗಳು :ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಏಕೀಕರಣದ ರಕ್ಷಣೆ ಇವೆ ಮೊದಲಾದ ವಿಷಯಗಳನ್ನು ಪ್ರಸಾರ ಮಾಡಬೇಕಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ, ಮಹಿಳಾ ಸಬಲೀಕರಣ, ಬೋಧನೆ ಮತ್ತು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಯಾವ ಚಾನೆಲ್ ಗಳಿಗೆ ಅನ್ವಯವಾಗುವುದಿಲ್ಲ

  • ಕ್ರೀಡೆ, ವನ್ಯಜೀವಿ ಮತ್ತು ವಿದೇಶಿ ಚಾನೆಲ್‌ಗಳಿಗೆ ಇದು ಅನ್ವಯಿಸುವುದಿಲ್ಲ.