Published on: January 7, 2023

ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರ

ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರ


ಸುದ್ದಿಯಲ್ಲಿ ಏಕಿದೆ? ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗಾಗಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು (ಆರ್‌ವಿಎಂ) ಅಭಿವೃದ್ಧಿಪಡಿಸಿದೆ. 


ಮುಖ್ಯಾಂಶಗಳು

  • ಜನವರಿ 16ರಂದು ಇದರ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಆಹ್ವಾನ ನೀಡಿದೆ.
  • ಈ ಕುರಿತಂತೆ ಚರ್ಚೆ ನಡೆದು ಜಾರಿಗೆ ಬಂದರೆ, ವಲಸೆ ಕಾರ್ಮಿಕರು ಮತದಾನ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ಹೋಗುವ ಅಗತ್ಯವೇ ಇರುವುದಿಲ್ಲ. ಇದ್ದಲ್ಲಿಯೇ ಮತದಾನ ಮಾಡಬಹುದು.
  • ಚುನಾವಣಾ ಆಯೋಗವು ರಿಮೋಟ್ ಮತದಾನದ ಪರಿಕಲ್ಪನೆಯನ್ನು ಅದನ್ನು ಕಾರ್ಯಗತಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಿದೆ.
  • ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾಗಿರುವ ರಿಮೋಟ್ ಇವಿಎಂ ಇದಾಗಿದ್ದು, ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ.
  • ಯಾರಿಗೆ : ನಮ್ಮ ದೇಶದ ಅನೇಕ ಜನರು ಉದ್ಯೋಗ ಅಥವಾ ಅಧ್ಯಯನಕ್ಕಾಗಿ ಮನೆಯಿಂದ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಚುನಾವಣೆ ಎದುರಾದರೆ ಬಹಳ ಕಡಿಮೆ ಸಂಖ್ಯೆಯ ಮತದಾರರು ಮಾತ್ರ ಮತ (Voting) ಚಲಾಯಿಸಲು ಸಾಧ್ಯವಾಗುತ್ತದೆ. ಪ್ರಯಾಣದ ವೆಚ್ಚ ಮತ್ತು ಸಮಯದ ಅಭಾವ ಇದಕ್ಕೆ ಪ್ರಮುಖ ಕಾರಣ.
  • ಉದ್ದೇಶ : ಮತದಾನದ ಬಗ್ಗೆ ಯುವಕರು ಮತ್ತು ನಗರದ ನಿವಾಸಿಗಳ ನಿರಾಸಕ್ತಿಗಳ ಬಗ್ಗೆ ಗಮನ ಹರಿಸಿದ ನಂತರ, ರಿಮೋಟ್ ಮತದಾನವು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಬಲಪಡಿಸುವ ಪರಿವರ್ತನೆಯ ಉಪಕ್ರಮವಾಗಿದೆ’. ಈ ಯೋಜನೆ ಯಶಸ್ವಿಯಾದರೆ ಮನೆಯಿಂದ ದೂರ ಉಳಿದವರ ಹಣ ಉಳಿತಾಯವಾಗುವುದಲ್ಲದೆ, ಮತದಾನದ ಪ್ರಮಾಣವೂ ಹೆಚ್ಚುತ್ತದೆ.