Published on: June 1, 2024
ರುದ್ರ ಎಂ-II ಕ್ಷಿಪಣಿ
ರುದ್ರ ಎಂ-II ಕ್ಷಿಪಣಿ
ದ್ದಿಯಲ್ಲಿ ಏಕಿದೆ? ಡಿಆರ್‌ಡಿಒ ರುದ್ರ ಎಂ-II ಹೆಸರಿನ ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಒಡಿಶಾದ ಕರಾವಳಿ ತೀರದಲ್ಲಿ, ಭಾರತೀಯ ವಾಯುಪಡೆಯ (IAF) Su-30 MK-I ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ.
ಮುಖ್ಯಾಂಶಗಳು
- “ರುದ್ರಂ” ಎಂಬ ಹೆಸರು “ದುಃಖಗಳ ನಿವಾರಣೆ” ಎಂದು ಅರ್ಥ ಕೊಡುತ್ತದೆ
- ರುದ್ರಮ್ ಸರಣಿಯು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಕಿರಣ ವಿರೋಧಿ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಇದು ಲಾಕ್-ಆನ್-ಬಿಫೋರ್-ಲಾಂಚ್ ಮತ್ತು ಲಾಕ್-ಆನ್-ಆಫ್ಟರ್-ಲಾಂಚ್ ಮೋಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಷಿಪಣಿಯು ಆಂತರಿಕ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದ್ದು, ಉಡಾವಣೆ ಮಾಡಿದ ನಂತರ ಗುರಿಯತ್ತ ತನ್ನನ್ನು ತಾನೇ ಚಲಿಸುವಂತೆ ಮಾಡುತ್ತದೆ.
ಉದ್ದೇಶ
ವಿಕಿರಣ-ವಿರೋಧಿ ಕ್ಷಿಪಣಿಗಳನ್ನು ಅವುಗಳು ಹೊರಸೂಸುವ ರೇಡಿಯೊ ಸಂಕೇತಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಶತ್ರುಗಳ ರೆಡಾರ್ ಮತ್ತು ಸಂವಹನ ವ್ಯವಸ್ಥೆಗಳನ್ನು ಪತ್ತೆ ಹಚ್ಚಲು ಮತ್ತು ದ್ವಂಸಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಶತ್ರು ರಾಷ್ಟ್ರದ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗೆ ಇದೆ.
ಕ್ಷಿಪಣಿಯ ವಿಶೇಷತೆ
- ಕ್ಷಿಪಣಿಯು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದೆ.
- ಇದು ಘನ ಇಂಧನವನ್ನು ಬಳಸಿಕೊಂಡು ಗಾಳಿಯಲ್ಲಿ ಉಡಾವಣೆ ಆಗುತ್ತದೆ.
- ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯಾಗಿದೆ.
- ಬಹಳ ದೂರದಲ್ಲಿ ಇರುವ ಶತ್ರುಗಳ ಸೇನಾ ಸೇನೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.
- ವ್ಯಾಪ್ತಿ: 300 ಕಿಲೋಮೀಟರ್
- ವೇಗ: ಮ್ಯಾಕ್ 5.5 (ಅಂದಾಜು 1.9 ಕಿಮೀ/ಸೆಕೆಂಡ್ ಅಥವಾ 6792 ಕಿಮೀ/ಗಂ) ವೇಗವನ್ನು ತಲುಪಬಹುದು ಸಾಮರ್ಥ್ಯ: 200-ಕಿಲೋಗ್ರಾಂ ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ರುದ್ರ ಎಂ -1 ಮುಂದಿನ ಪೀಳಿಗೆಯ ವಿರೋಧಿ ಕ್ಷಿಪಣಿ (ARM) ಯನ್ನು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈಗಾಗಲೇ ಅಭಿವೃದ್ಧಿಪಡಿಸಿದೆ. 2020 ರಲ್ಲಿ ಪರೀಕ್ಷಿಸಲಾಯಿತು.