Published on: June 17, 2024

ಲಿಂಗತ್ವ ಸಮಾನತೆ

ಲಿಂಗತ್ವ ಸಮಾನತೆ

ಸುದ್ದಿಯಲ್ಲಿ ಏಕಿದೆ? ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯು ಇಎಫ್) ಬಿಡುಗಡೆ ಮಾಡಿರುವ ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿದ ಸೂಚ್ಯಂಕದಲ್ಲಿ ಭಾರತವು ಎರಡು ಸ್ಥಾನ ಕುಸಿತ ಕಂಡಿದ್ದು, 146 ದೇಶಗಳಲ್ಲಿ 129ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಅದು 127ನೇ ಸ್ಥಾನದಲ್ಲಿತ್ತು.

ಮುಖ್ಯಾಂಶಗಳು

  • ಇದು ಪ್ರಪಂಚದಾದ್ಯಂತದ ದೇಶಗಳಲ್ಲಿನ ಸಂಪನ್ಮೂಲಗಳು ಮತ್ತು ಅವಕಾಶಗಳ ಪ್ರವೇಶದಲ್ಲಿ ಲಿಂಗ ಆಧಾರಿತ ಅಂತರವನ್ನು ಅಳೆಯುತ್ತದೆ.
  • ಇದು ದೀರ್ಘಾವಧಿಯ ಸೂಚ್ಯಂಕವಾಗಿದೆ, 2006 ರಲ್ಲಿ ಪ್ರಾರಂಭವಾದಾಗಿನಿಂದ ಕಾಲಾನಂತರದಲ್ಲಿ ಈ ಅಂತರವನ್ನು ಮುಚ್ಚುವತ್ತ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತದೆ.
  • ಆವೃತ್ತಿ: 18
  • ಜಾಗತಿಕವಾಗಿ ಲಿಂಗತ್ವ ಅಂತರವು ಶೇ 68.5ರಷ್ಟು ಇದ್ದು, ಇದೇ ವೇಗದಲ್ಲಿ ಸಾಗಿದರೆ ಪೂರ್ಣ ಪ್ರಮಾಣದಲ್ಲಿ ಲಿಂಗತ್ವ ಸಮಾನತೆ ಸಾಧಿಸಲು ಇನ್ನೂ 134 ವರ್ಷಗಳು ಬೇಕಾಗುತ್ತವೆ 2158ನೇ ಇಸವಿವರೆಗೆ ಇದನ್ನು ಸಾಧಿಸಬಹುದು.
  • ಉಜ್ಬೇಕಿಸ್ತಾನ್ (108 ನೇ, 68.1%) ಮತ್ತು ಸುಡಾನ್ (146ನೇ, 56.8%) ಮೊದಲ ಬಾರಿಗೆ ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ.

ಇದು ನಾಲ್ಕು ಪ್ರಮುಖ ಮಾನದಂಡಗಳಲ್ಲಿ ಅನುಸರಿಸಿ ಲಿಂಗ ಅಂತರ ವರದಿಯನ್ನು ನೀಡುತ್ತದೆ

  • ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ,
  • ಶೈಕ್ಷಣಿಕ ಸಾಧನೆ,
  • ಆರೋಗ್ಯ ಮತ್ತು ಬದುಕುಳಿಯುವಿಕೆ, ಮತ್ತು
  • ರಾಜಕೀಯ ಸಬಲೀಕರಣ.
  • ಇದು 0 ರಿಂದ 1 ರವರೆಗಿನ ಪ್ರಮಾಣದಲ್ಲಿ ದೇಶಗಳನ್ನು ಶ್ರೇಣೀಕರಿಸುತ್ತದೆ, ಸ್ಕೋರ್ 1 ದೇಶವು ಸಂಪೂರ್ಣ ಲಿಂಗ ಸಮಾನತೆಯನ್ನು ಸಾಧಿಸಿದೆ ಎಂದು ಸೂಚಿಸುತ್ತದೆ, ಆದರೆ 0 ಅಂಕವು ಸಂಪೂರ್ಣ ಸಮಾನತೆಯ ಕೊರತೆಯನ್ನು ಸೂಚಿಸುತ್ತದೆ.

ವರದಿಯ ಪ್ರಕಾರ  ದೇಶಗಳ ಸ್ಥಾನಗಳು

ಕ್ರಮವಾಗಿ ಮೊದಲ ಐದು ಸ್ತಾನಗಳನ್ನು ಪಡೆದ ದೇಶ:  ಐಸ್ಲ್ಯಾಂಡ್ (1) ಫಿನ್ಲ್ಯಾಂಡ್, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್

ಕೆಳಗಿನ ಐದು ದೇಶಗಳು: ಸುಡಾನ್(146), ಪಾಕಿಸ್ತಾನ, ಚಾಡ್, ಇರಾನ್ ಮತ್ತು ಗಿನಿಯಾ

ಬ್ರಿಟನ್ 14ನೇ ಸ್ಥಾನ ಮತ್ತು ಅಮೆರಿಕ 43ನೇ ಸ್ಥಾನ ಪಡೆದಿದೆ.

ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಭಾರತ ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿದ್ದ ರೆ, ಪಾಕಿಸ್ತಾನ ಕೊನೆಯ ಸ್ಥಾನದಲ್ಲಿದೆ.

ವರದಿಯ ಪ್ರಕಾರ ಭಾರತದ ಸ್ಥಿತಿ

  • ಶಿಕ್ಷಣ, ರಾಜಕೀಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ಲಿಂಗತ್ವ ಸಮಾನತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಭಾರತವು ಕಳೆದ ಸಾಲಿಗಿಂತ ಎರಡು ಸ್ಥಾನಗಳಷ್ಟು ಕುಸಿತ ಕಂಡಿದೆ. ಆದರೆ ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳಿಗೆ ಸಂಬಂಧಿಸಿದ ಅಂಕಗಳಲ್ಲಿ ಸುಧಾರಣೆ ಕಂಡು ಬಂದಿದೆ.
  • ಮಾಧ್ಯಮಿಕ ಶಿಕ್ಷಣ ದಾಖಲಾತಿಗೆ ಸಂಬಂಧಿಸಿದಂತೆ ಭಾರತವು ಅತ್ಯುತ್ತಮ ಲಿಂಗ ಸಮಾನತೆ ಹೊಂದಿದೆ. ಮಹಿಳಾ ರಾಜಕೀಯ ಸಬಲೀಕರಣದಲ್ಲೂ ಭಾರತ ಉತ್ತಮ ಅಂಕಗಳನ್ನು ಗಳಿಸಿದ್ದು, ಜಾಗತಿಕವಾಗಿ 65ನೇ ಸ್ಥಾನ ಪಡೆದಿದೆ

140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಲಿಂಗತ್ವ ಅಸಮಾನತೆಯನ್ನು ಅಳಿಸಿ ಹಾಕುವಲ್ಲಿ ಒಟ್ಟಾ ರೆ ಶೇ 64.1ರಷ್ಟು ಪ್ರಗತಿ ಸಾಧಿಸಿದೆ