Published on: July 19, 2022

ಲಿಂಗ ಸಮಾನತೆ

ಲಿಂಗ ಸಮಾನತೆ

ಸುದ್ದಿಯಲ್ಲಿ ಏಕಿದೆ?

ಜಾಗತಿಕ ಲಿಂಗ ಸಮಾನತೆಯ ಅಂತರದ ರ‍್ಯಾಂಕಿಂಗ್ನಲ್ಲಿ ಭಾರತವು 135ನೇ ಸ್ಥಾನದಲ್ಲಿದೆ. ಉದ್ಯೋ ಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ. ಆರ್ಥಿಕ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದರಿಂದ ಶ್ರೇಯಾಂಕ ಏರಿಕೆಯಾಗಿದೆ.

  • ಜಾಗತಿಕ ಆರ್ಥಿಕ ವೇದಿಕೆಯು (ಡಬ್ಲ್ಯು ಇಎಫ್) ಲಿಂಗ ಸಮಾನತೆ ಕುರಿತ ವರದಿಯನ್ನು ಜಿನಿವಾದಲ್ಲಿ ಬಿಡುಗಡೆ ಮಾಡಿದೆ.

ಏನಿದು ಲಿಂಗ ಸಮಾನತೆ?

  • ಉದ್ಯೋಗ, ಶಿಕ್ಷಣ, ರಾಜಕೀಯಕ್ಷೇತ್ರಗಳಲ್ಲಿ ಪುರುಷರಿಗೆ ದೊರೆಯುತ್ತಿರುವ ಅವಕಾಶಗಳು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ನಡುವಣ ವ್ಯತ್ಯಾಸವನ್ನೇ ‘ಲಿಂಗ ಸಮಾನತೆಯ ಅಂತರ’ ಎನ್ನಲಾಗುತ್ತದೆ. ವಿಶ್ವದ 146 ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ರ‍್ಯಾಂಕಿಂಗ್ ಅನ್ನು ಸಿದ್ಧಪಡಿಸಲಾಗಿದೆ.

ಯಾವ ಆಧಾರದ ಮೇಲೆ ನೀಡಲಾಗಿದೆ?

  • ನಾಯಕತ್ವ: ತಯಾರಿಕೆ, ಮೂಲಸೌಕರ್ಯ ವಲಯದಲ್ಲಿ ಮಹಿಳೆಯರು ಹಿಂದೆ ಜಾಗತಿಕವಾಗಿ ಪ್ರಮುಖ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ವಿಶ್ಲೇ ಷಿಸಿದೆ. ಯಾವ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 50ರನ್ನು ದಾಟಿಲ್ಲ ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ. ಸರ್ಕಾರೇತರ ಸಂಸ್ಥೆ, ಶಿಕ್ಷಣ, ವೈಯಕ್ತಿಕ ಸೇವೆ ಮತ್ತು ಆರೈಕೆ ಕ್ಷೇತ್ರಗಳಲ್ಲಿ ಗಮನಾರ್ಹ ಮಟ್ಟದಲ್ಲಿದೆ.

ಮುಖ್ಯಾಂಶಗಳು

  • ಪಟ್ಟಿಯಲ್ಲಿ ಒಟ್ಟು 146 ದೇಶಗಳಿವೆ. ಐಸ್ಲ್ಯಾಂ ಡ್ ಅಗ್ರಸ್ಥಾನ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಫಿನ್ಲೆಂಡ್, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀ ಡನ್ ಇವೆ. ಅಫ್ಗಾನಿಸ್ತಾನ, ಪಾಕಿಸ್ತಾನ, ಕಾಂಗೊ, ಇರಾನ್, ಛಾಡ್ ದೇಶಗಳು ಕೊನೆಯ 5 ಸ್ಥಾನಗಳಲ್ಲಿವೆ.
  • ಈ ಪಟ್ಟಿಯಲ್ಲಿ ಭಾರತವು ಕೊನೆಯಿಂದ 12ನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳು ಇಲ್ಲದೇ ಇರುವ ಕಾರಣ ಭಾರತವು, ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತಿ ಕೆಳಗತಿಯಲ್ಲಿದೆ.
  • ಕಡೆಯ ಸ್ಥಾನದಲ್ಲಿ ದಕ್ಷಿಣ ಏಷ್ಯಾ ಜಾಗತಿಕವಾಗಿ ಎಂಟು ಪ್ರಾದೇಶಿಕ ವಲಯಗಳ ಪೈಕಿ ದಕ್ಷಿಣ ಏಷ್ಯಾ ವಿಭಾಗವು ಲಿಂಗ ಸಮಾನತೆ ಸಾಧಿಸುವ ಪ್ರಯತ್ನದಲ್ಲಿ ಕೊನೆಯ ಸ್ಥಾನದಲ್ಲಿದೆ.
  • ಮೊದಲ ಸ್ಥಾನದಲ್ಲಿರುವ ಉತ್ತರ ಅಮೆರಿಕ ವಿಭಾಗ ಶೇ 76.9ರಷ್ಟು ಪ್ರಗತಿ ದಾಖಲಿಸಿದ್ದರೆ, ದಕ್ಷಿಣ ಏಷ್ಯಾದ ಪ್ರಗತಿ ಶೇ 62.4ರಷ್ಟು ಮಾತ್ರ. ಶಿಕ್ಷಣ, ಆರೋಗ್ಯ, ರಾಜಕೀಯ ಸಬಲೀಕರಣ ಹಾಗೂ ಆರ್ಥಿಕ ಪಾಲ್ಗೊಳ್ಳುವಿಕೆ ವಿಭಾಗಗಳಲ್ಲಿ ದಕ್ಷಿಣ ಏಷ್ಯಾ ಶೇಕಡ ನೂರರಷ್ಟು ಸುಧಾರಣೆ ಕಾಣಲು ಇನ್ನೂ 197 ವರ್ಷ ಸಮಯ ಹಿಡಿಯುತ್ತದೆ ಎಂದು ವರದಿ ವಿಶ್ಲೇ ಷಿಸಿದೆ.
  • ಈ ನಾಲ್ಕೂ ವಲಯಗಳ ಪ್ರಗತಿಯ ನಡುವೆ ಬಹಳ ಅಂತರವಿದೆ. ಶಿಕ್ಷಣ ಮತ್ತು ಆರೋಗ್ಯದ ಅಂಶಗಳಲ್ಲಿ ಶೇ 90ಕ್ಕಿಂತ ಹೆಚ್ಚು ಶ್ರೇಯಾಂಕ ಸಿಕ್ಕಿದೆ. ಆದರೆ, ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ (ಶೇ 35.7) ರಾಜಕೀಯ ಸಬಲೀಕರಣದಲ್ಲಿ (ಶೇ 26.2) ಕ್ರಾಂತಿಕಾರಕ ಸುಧಾರಣೆ ಆಗಬೇಕಿದೆ.

ಲಿಂಗ ಸಮಾನತೆಯಲ್ಲಿದಕ್ಷಿಣ ಏಷ್ಯಾ ವಲಯದ ದೇಶಗಳು

  • ಸುಧಾರಿಸದ ಭಾರತ ಸ್ಥಿತಿಗತಿ ದಕ್ಷಿಣ ಏಷ್ಯಾ ವಲಯದಲ್ಲಿ ಒಂಬತ್ತು ದೇಶಗಳಿದ್ದು, ಇವುಗಳಲ್ಲಿ ಭಾರತದ ರ್‍ಯಾಂಕ್ 6ನೇಯದ್ದು. ಭಾರತದ ನಂತರದ ಸ್ಥಾನಗಳಲ್ಲಿ ಇರಾನ್, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ದೇಶಗಳಿವೆ.
  • ಬಾಂಗ್ಲಾದೇಶ ಹಾಗೂ ನೇಪಾಳ ಮೊದಲ ಎರಡು ಶ್ರೇ ಯಾಂಕ ಪಡೆದಿವೆ. ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾವು ಲಿಂಗ ಸಮಾನತೆ ವಿಚಾರದಲ್ಲಿ ಭಾರತಕ್ಕಿಂ ತ ಉತ್ತಮ ಸ್ಥಿತಿಯಲ್ಲಿದ್ದು ಮೂರನೇ ರ್‍ಯಾಂಕ್ ಗಳಿಸಿದೆ.
  • ಭೂತಾನ್ ಹಾಗೂ ಮಾಲ್ದೀ ವ್ಸ್ ಸಹ ಭಾರತಕ್ಕಿಂ ತ ಉತ್ತಮ ಸ್ಥಿತಿಯಲ್ಲಿವೆ ಎಂದು ವರದಿ ಹೇಳಿದೆ. ಬಾಂಗ್ಲಾ ಹಾಗೂ ನೇಪಾಳ ಶೇ 69ರಷ್ಟು ಲಿಂಗ ಸಮಾನತೆ ಸಾಧಿಸಿವೆ. ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ಕೊನೆಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನದಲ್ಲಿ ಶೇ 43.5ರಷ್ಟು ಲಿಂಗ ಸಮಾನತೆಯಷ್ಟೇ ಸಾಧ್ಯವಾಗಿದೆ.