Published on: October 16, 2021

ಲುಸಿ ಮಿಷನ್

ಲುಸಿ ಮಿಷನ್

ಸುದ್ಧಿಯಲ್ಲಿ ಏಕಿದೆ? ಗುರು ಗ್ರಹದ ಗುರುತ್ವ ಪರೀಧಿಯೊಳಗಿರುವ ಟ್ರೋಜನ್ ಕ್ಷುದ್ರಗ್ರಹಗಳ ಪಟ್ಟಿಯುತ್ತ ಬಾಹ್ಯಾಕಾಶ ನೌಕೆಯೊಂದನ್ನು ಕಳುಹಿಸಲು ಸಜ್ಜಾಗಿದೆ. ಲುಸಿ ಹೆಸರಿನ ಈ ಬಾಹ್ಯಾಕಾಶ ನೌಕೆ  ಅಟ್ಲಾಸ್ V401 ಎಂಬ ಅತ್ಯಾಧುನಿಕ ರಾಕೆಟ್‌ ಮೂಲಕ ನಭಕ್ಕೆ ಚಿಮ್ಮಲಿದೆ.

ಕ್ಷುದ್ರಗ್ರಹಗಳು ಎಂದರೇನು ?

  • ಸೌರಮಂಡಲದ ಉಗಮದ ಆರಂಭಿಕ ದಿನಗಳಲ್ಲಿ ಗ್ರಹಕಾಯಗಳ ರಚನೆಯ ವೇಳೆ ಉಳಿದ ಅವಶೇಷಗಳೇ ಈ ಕ್ಷುದ್ರಗ್ರಹಗಳು. ಆದರೆ ಇವು ಸೌರಮಂಡಲದ ಬೆಳವಣಿಗೆಯಲ್ಲಿ ತಮ್ಮದೇ ಆದ ಮಹತ್ವದ ಪಾತ್ರವನ್ನು ನಿರ್ವಹಿಸಿವೆ. ಅಷ್ಟೇ ಏಕೆ ಭೂಮಿಯ ಮೇಲೆ ಜೀವಿಗಳ ಉಗಮಕ್ಕೂ ಕ್ಷುದ್ರಗ್ರಹಗಳೇ ಕಾರಣ ಎಂಬ ವಾದದಲ್ಲಿ ಹುರುಳಿದೆ. ಇದೇ ಕಾರಣಕ್ಕೆ ಖಗೋಳ ವಿಜ್ಞಾನಿಗಳು ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
  • ಬಾಹ್ಯಾಕಾಶದಲ್ಲಿ ಸುದೀರ್ಘ 12 ವರ್ಷಗಳ ಪ್ರಯಾಣದ ಬಳಿಕ ಲುಸಿ ನೌಕೆ ಟ್ರೋಜನ್ ಕ್ಷುದ್ರಗ್ರಹಗಳ ಪಟ್ಟಿಯನ್ನು ತಲುಪಲಿದೆ. 2025ರಲ್ಲಿ ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕ್ಷುದ್ರಗ್ರಹಗಳ ಪಟ್ಟಿಯಲ್ಲಿರುವ ಡೋನಾಲ್ಡ್ ಜೋಹಾನ್ಸನ್ ಹೆಸರಿನ ಟ್ರೋಜನ್ ಕ್ಷುದ್ರಗ್ರಹ ತಲುಪಲಿರುವ ಲುಸಿ, 2026ರ ಆಗಸ್ಟ್ ತಿಂಗಳಲ್ಲಿ ಟ್ರೋಜನ್ ಕ್ಷುದ್ರಗ್ರಹಗಳ ಮೊದಲ ಸಮೂಹವನ್ನು ತಲುಪಲಿರುವ ಲುಸಿ, 2027ರ ಸೆಪ್ಟೆಂಬರ್‌ನಲ್ಲಿ ಪಾಲಿಮೆಲೆ ಮತ್ತು 2028ರ ನವೆಂಬರ್‌ನಲ್ಲಿ ಓರಸ್ ಎಂಬ ಟ್ರೋಜನ್ ಪಟ್ಟಿಯ ಕ್ಷುದ್ರಗ್ರಹಗಳನ್ನು ಸುತ್ತಲಿದೆ. ಬಳಿಕ 2033ರಲ್ಲಿ ಟ್ರೋಕಸ್ ಮತ್ತು ಮೆಯೊನಿಟಿಯಸ್ ಹೆಸರಿನ ಕ್ಷುದ್ರಗ್ರಹಗಳನ್ನು ಲುಸಿ ಭೇಟಿ ಮಾಡಲಿದೆ.

ಏನಿದು ಟ್ರೋಜನ್ ಪಟ್ಟಿ?:

  • ಟ್ರೋಜನ್ ಕ್ಷುದ್ರಗ್ರಹಗಳ ಪಟ್ಟಿ ಮಂಗಳ ಮತ್ತು ಗುರು ಗ್ರಹಗಳ ನಡುವಿನ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಇದಕ್ಕೆ ಗ್ರೀಕ್ ಪುರಾಣ ಕಥೆಗಳ ಪಾತ್ರವಾಗಿರುವ ಟ್ರೋಜನ್ ಎಂಬ ಹೆಸರಿಡಲಾಗಿದೆ. ಟ್ರೋಜನ್ ಕ್ಷುದ್ರಗ್ರಹಗಳು ಸೂರ್ಯನನ್ನು ಎರಡು ಸಮೂಹಗಳಲ್ಲಿ ಸುತ್ತುತ್ತವೆ. ಒಂದು ಗುಂಪು ಸ್ವತಂತ್ರ್ಯ ಪಥವನ್ನು ಅನುಸರಿಸಿದರೆ ಮತ್ತೊಂದು ಗುಂಪು ಸೂರ್ಯನ ಕಕ್ಷೆಯಲ್ಲಿ ಗುರು ಗ್ರಹವನ್ನು ಅನುಸರಿಸುತ್ತವೆ.