Published on: February 4, 2023

ಲೇಡೀಸ್ ಬೀಚ್’

ಲೇಡೀಸ್ ಬೀಚ್’


ಸುದ್ದಿಯಲ್ಲಿ ಏಕಿದೆ? ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.


ಮುಖ್ಯಾಂಶಗಳು

  • ಪ್ರಾಜೆಕ್ಟ್ ಸೀಬರ್ಡ್ ಬೇಸ್ ಎಂದೂ ಕರೆಯಲ್ಪಡುವ ಯೋಜನೆಯನ್ನು ಬೀಚ್ ಬಳಿ ಕೈಗೊಳ್ಳಲಾಗಿದ್ದು, ಗಡಿಯಾರ ಗೋಪುರಗಳನ್ನು ತಲುಪಲು ಕಡಲತೀರದ ಪಕ್ಕದ ಬೆಟ್ಟದ ಉದ್ದಕ್ಕೂ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ಭಾರತೀಯ ನೌಕಾಪಡೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ.
  • ಐಎನ್‌ಎಸ್ ಕದಂಬ ಅಡಿಯಲ್ಲಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದೆ.

ಬೀಚ್ನ ಇತಿಹಾಸ : ಈ ಬೀಚ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಮಹಿಳೆಯರಿಗೆ ಸ್ನಾನ ಮಾಡಲು ಮತ್ತು ಈಜಲು ಬೀಚ್ ಮೀಸಲಾಗಿತ್ತು. ಈ ವೇಳೆ ಸ್ಥಳೀಯರು ಬೀಚ್’ಗೆ ಬೇಟಿ ನೀಡುವುದಕ್ಕೆ ಅವಕಾಶವಿರಲಿಲ್ಲ.