Published on: June 13, 2024

ಲ್ಯಾಂಡ್ ಬೀಟ್ ಪ್ರೋಗ್ರಾಂ

ಲ್ಯಾಂಡ್ ಬೀಟ್ ಪ್ರೋಗ್ರಾಂ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಸರ್ಕಾರ, ಸರ್ಕಾರಿ ಜಮೀನುಗಳನ್ನು ರಕ್ಷಿಸಲು ‘ಲ್ಯಾಂಡ್ ಬೀಟ್ ಪ್ರೋಗ್ರಾಂ’ಗೆ ಚಾಲನೆ ನೀಡಿದೆ.

ಮುಖ್ಯಾಂಶಗಳು

  • 14 ಲಕ್ಷ ಸರ್ಕಾರಿ ಆಸ್ತಿಗಳ ಡಿಜಿಟಲ್ ದಾಖಲೆಗಳನ್ನು ಒಳಗೊಂಡ (ಸರ್ವೆ ಸಂಖ್ಯೆ, ಭೌಗೋಳಿಕ ಗಡಿ ಸೇರಿದಂತೆ) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
  • ಜಿಪಿಎಸ್ ಬಳಸಿ ಪ್ರತಿ ಆಸ್ತಿಯನ್ನು ತಂತ್ರಾಂಶದಲ್ಲಿ ಮ್ಯಾಪ್ ಮಾಡಲಾಗುತ್ತದೆ. ಒತ್ತುವರಿ ಪರಿಶೀಲಿಸಲು ಅಧಿಕಾರಿಗಳು ಎಲ್ಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
  • ಯಾವುದೇ ಸಮಸ್ಯೆಗಳನ್ನು ನೇರವಾಗಿ ತಂತ್ರಾಂಶದ ಮೂಲಕ ವರದಿ ಮಾಡುತ್ತಾರೆ. ನಂತರ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.

ಉದ್ದೇಶ

ಇಲಾಖೆಯ ಅಧಿಕಾರಿಗಳ ಮತ್ತು ಗ್ರಾಮ ಆಡಳಿತಾಧಿಕಾರಿಗಳ ಪರಿಶ್ರಮದಿಂದಾಗಿ ಪ್ರತಿ ಗ್ರಾಮಗಳ ಸರ್ಕಾರಿ ಆಸ್ತಿಗಳ ವಿವರವಾದ ಡಿಜಿಟಲ್ ದಾಖಲೆ ಸಿದ್ಧಪಡಿಸಲು ಸಾಧ್ಯವಾಗಿದೆ. ಈ ಆಸ್ತಿಗಳನ್ನು ಸುರಕ್ಷಿತವಾಗಿಡಲು ಆಗಾಗ ಸ್ಥಳ ಪರಿಶೀಲಿಸಲಾಗುವುದು. ಸರ್ಕಾರಿ ಜಮೀನುಗಳು ಒತ್ತುವರಿಯಾಗುವ ದೀರ್ಘ ಕಾಲದ ಸಮಸ್ಯೆಗೆ ಹೊಸ

ವ್ಯವಸ್ಥೆಯಿಂದ ಪರಿಹಾರ ಸಿಗಲಿದೆ.