Published on: September 14, 2021

ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)

ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)

ಸುದ್ಧಿಯಲ್ಲಿ ಏಕಿದೆ?  ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ (ಡಬ್ಲ್ಯೂಜಿಸಿ) ಅಂಕಿ ಅಂಶಗಳ ಪ್ರಕಾರ ಜಗತ್ತಿನ ಚಿನ್ನದ ಗಣಿಗಳಿಂದ ಈ ತನಕ 1,97,576 ಟನ್‌ ಚಿನ್ನದ ನಿಕ್ಷೇಪ ಹೊರ ತೆಗೆದಿದ್ದು, ಭಾರತದಲ್ಲಿ 21,733 ಟನ್‌ ಚಿನ್ನವಿದೆ, ಇದು ಜಗತ್ತಿನ ಶೇ.11 ಪಾಲಾಗಿದೆ. ಹೆಣ್ಮಕ್ಕಳು ಮಾತ್ರವಲ್ಲ ಕೆಲ ಗಂಡಸರಲ್ಲೂ ಇರುವ ಚಿನ್ನದ ವ್ಯಾಮೋಹದಿಂದ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ.

ವಿಶ್ವ ಚಿನ್ನದ ಕೌನ್ಸಿಲ್  ಅಂಕಿ ಅಂಶ ಏನು ಹೇಳುತ್ತದೆ ?

  • ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೀಸಲು ನಿಧಿಯಾಗಿ 676 ಟನ್‌ ಚಿನ್ನ ಹೊಂದಿದ್ದರೆ, ಬ್ಯಾಂಕ್‌ಗಳಲ್ಲಿ ಜನರಿಟ್ಟ ಚಿನ್ನ 300 ಟನ್ನಷ್ಟಿದೆ. ಆದರೆ ಇದಕ್ಕಿಂತ 20 ಪಟ್ಟು ಚಿನ್ನ ಭಾರತೀಯರ ಮನೆ, ಹೆಣ್ಮಕ್ಕಳ ಮೈಮೇಲೆ, ಬ್ಯಾಂಕ್‌ ಲಾಕರ್‌ ಮಾತ್ರವಲ್ಲ ಕೆಲ ಗಂಡಸರ ಬಳಿ ಇದೆ . ಶೇ.37 ಮಂದಿ ಬಡ ವರ್ಗದಲ್ಲಿ ಒಂದು ತುಂಡು ಚಿನ್ನ ಇಲ್ಲದ ಕೊರಗೂ ಇದೆ.
  • ಪ್ರತಿ ವರ್ಷ ಭಾರತ 700 ರಿಂದ 900 ಟನ್‌ ಚಿನ್ನವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಭಾರತೀಯರಿಗೆ ಚಿನ್ನದ ಮೇಲಿರುವ ಮೋಹ – ದಾಹ ಸಾವರಿನ್‌ ಗೋಲ್ಡ್‌ ಬಾಂಡ್‌ ಯೋಜನೆ ಜಾರಿಗೊಳಿಸಿದರೂ ತೀರುತ್ತಿಲ್ಲ. ಭೌತಿಕ ಚಿನ್ನಕ್ಕಿರುವ ಬೆಲೆ, ಕಿಮ್ಮತ್ತು ಬಾಂಡ್‌ಗಿಲ್ಲ.

ವಿಶ್ವ ಚಿನ್ನದ ಮಂಡಳಿ

  • ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ವಿಶ್ವದ ಪ್ರಮುಖ ಚಿನ್ನದ ಉತ್ಪಾದಕರ ಲಾಭರಹಿತ ಸಂಘವಾಗಿದೆ.
  • ಲಂಡನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಡಬ್ಲ್ಯುಜಿಸಿ, ವಿಶ್ವದ ವಾರ್ಷಿಕ ಚಿನ್ನದ ಬಳಕೆಯ ಮುಕ್ಕಾಲು ಭಾಗವನ್ನು ಒಳಗೊಂಡಿರುವ ಮಾರುಕಟ್ಟೆಗಳನ್ನು ಒಳಗೊಂಡಿದೆ.
  • ಇದು 25 ಸದಸ್ಯರು ಮತ್ತು ಅನೇಕ ಚಿನ್ನದ ಗಣಿಗಾರಿಕೆ ಕಂಪನಿಗಳನ್ನು ಒಳಗೊಂಡಿರುವ ಚಿನ್ನದ ಉದ್ಯಮದ ಮಾರುಕಟ್ಟೆ ಅಭಿವೃದ್ಧಿ ಸಂಸ್ಥೆಯಾಗಿದೆ.
  • ಮಾರುಕಟ್ಟೆ ಬಳಕೆ, ಸಂಶೋಧನೆ ಮತ್ತು ಲಾಬಿ ಮೂಲಕ ಚಿನ್ನದ ಬಳಕೆ ಮತ್ತು ಬೇಡಿಕೆಯನ್ನು ಉತ್ತೇಜಿಸಲು ಡಬ್ಲ್ಯುಜಿಸಿ ಸ್ಥಾಪಿಸಲಾಯಿತು.