Published on: October 28, 2021

ವರ್ಲ್ಪೂಲ್ ಗ್ಯಾಲಕ್ಸಿ

ವರ್ಲ್ಪೂಲ್ ಗ್ಯಾಲಕ್ಸಿ

ಸುದ್ಧಿಯಲ್ಲಿ ಏಕಿದೆ? ಖಗೋಳಶಾಸ್ತ್ರಜ್ಞರು ಇದೇ ಮೊದಲ ಬಾರಿಗೆ ನಮ್ಮ ಕ್ಷಿರಪಥ(ಮಿಲ್ಕಿ ವೇ) ನಕ್ಷತ್ರ ಪುಂಜದ ಹೊರಗೆ ಅಸ್ತಿತ್ವದಲ್ಲಿರಬಹುದಾದ ಸಂಭವನೀಯ ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ನಾಸಾದ ಚಂದ್ರ ಎಕ್ಸ್‌-ರೇ ಖಗೋಳ ವೀಕ್ಷಣಾಲಯದ ಖಗೋಳ ವಿಜ್ಞಾನಿಗಳು, M51 ಅಥವಾ ‘ವರ್ಲ್‌ಪೂಲ್’ ಗ್ಯಾಲಕ್ಸಿಯಲ್ಲಿ ಅಸ್ತಿತ್ವದಲ್ಲಿರುವ ಸೂರ್ಯನ ಗಾತ್ರದ M51-ULS-1 ಹೆಸರಿನ ನಕ್ಷತ್ರವನ್ನು ಈ ಸಂಭವನೀಯ ಗ್ರಹ ಸುತ್ತುತ್ತಿದೆ ಎಂದು ಅಂದಾಜಿಸಿದ್ದಾರೆ.

  • ಈ M51-ULS-1 ನಕ್ಷತ್ರ ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪುಕುಳಿ(ಬ್ಲ್ಯಾಕ್ ಹೋಲ್)ಯೊಂದಿಗೆ ಗುರುತ್ವ ಸಂಬಂಧ ಹೊಂದಿದ್ದು, ಈ ಸೂರ್ಯ ಗಾತ್ರದ ನಕ್ಷತ್ರವನ್ನು ಈ ಸಂಭವನೀಯ ಗ್ರಹ ಸುತ್ತುತ್ತಿದೆ ಎನ್ನಲಾಗಿದೆ
  • ಈ ಸಂಭವನೀಯ ಗ್ರಹ ಭೂಮಿಯಿಂದ ಸುಮಾರು 28 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದ್ದು, ಈವರೆಗೂ ಕಂಡುಹಿಡಿದ ಎಕ್ಸೋಪ್ಲ್ಯಾನೆಟ್‌ಗಳಿಗಿಂತಲೂ ಬಹಳ ದೂರದಲ್ಲಿದೆ
  • ಒಂದು ವೇಳೆ ಈ ಗ್ರಹದ ಅಸ್ತಿತ್ವ ಸಾಬೀತಾದರೆ ನಮ್ಮ ಹಾಲುಹಾದಿ ನಕ್ಷತ್ರಪುಂಜದಿಂದ ಹೊರಗೆ ಅಥವಾ ಬೇರೊಂದು ಗ್ಯಾಲಕ್ಸಿಯಲ್ಲಿ ಅಸ್ತಿತ್ವದಲ್ಲಿ ಇರುವ ಗ್ರಹವನ್ನು ಪತ್ತೆ ಮಾಡಿದಂತಾಗುತ್ತದೆ.

ಸೌರಮಂಡಲದ ಹೊರಗಿನ ಗ್ರಹವನ್ನು ಹೇಗೆ ಪತ್ತೆಮಾಡಲಾಗುತ್ತದೆ ?

  • ಅಸ್ತಿತ್ವದಲ್ಲಿರುವ ನಕ್ಷತ್ರವೊಂದರ ಪಥಧಲ್ಲಿ ಗ್ರಹಕಾಯವೊಂದು ಹಾದು ಹೋದಾಗ ಆ ನಿರ್ದಿಷ್ಟ ನಕ್ಷತ್ರದ ಬೆಳಕು ಮಂದವಾಗುತ್ತದೆ. ಈ ಮೂಲಕ ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರಗಿನ ಗ್ರಹ) ಅಸ್ತಿತ್ವವನ್ನು ಕಂಡುಹಿಡಿಯಲಾಗುತ್ತದೆ.
  • ಆದರೆ ಇದೇ ಮೊದಲ ಬಾರಿಗೆ ಚಂದ್ರ ಎಕ್ಸ್‌-ರೇ ಖಗೋಳ ವೀಕ್ಷಣಾಲಯದ ಸಹಾಯದಿಂದ ಬೇರೊಂದು ಗ್ಯಾಲಕ್ಸಿಯಲ್ಲಿ ಅಸ್ತಿತ್ವದಲ್ಲಿ ಇರಬಹುದಾದ ಗ್ರಹವನ್ನು ಪತ್ತೆ ಮಾಡಿದ್ದು, M51-ULS-1 ನಕ್ಷತ್ರವನ್ನು ಪ್ರತಿ 70 ವರ್ಷಗಳಿಗೊಮ್ಮೆ ಸುತ್ತುತ್ತದೆ ಎಂದು ಖಗೋಳ ವಿಜ್ಞಾನಿಗಳು ಅಂದಾಜಿಸಿದ್ದಾರೆ.