Published on: January 12, 2022

ವಾಟರ್ ಟ್ಯಾಕ್ಸಿ ಸೇವೆ

ವಾಟರ್ ಟ್ಯಾಕ್ಸಿ ಸೇವೆ

ಸುದ್ಧಿಯಲ್ಲಿ ಏಕಿದೆ ? ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ.

ಮುಖ್ಯಾಂಶಗಳು

  • ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ.
  • ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕ ವನ್ನು ಈ ವಾಟರ್ ಟ್ಯಾಕ್ಸಿಗಳು ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಾಟರ್ ಟ್ಯಾಕ್ಸಿಗಳು ಸಂಚರಿಸುವ ಮಾರ್ಗಗಳು:

  • ಎಲಿಫೆಂಟಾದಿಂದ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ನಿಂದ ರೇವಾಸ್, ಧರ್ಮತಾರ್, ಕರಂಜಾಡೆ, ಬೇಲಾಪುರ್, ನೆರೂಲ್, ಐರೋಲಿ, ವಾಶಿ, ಖಂಡೇರಿ ದ್ವೀಪಗಳು ಮತ್ತು ಜವಾಹರಲಾಲ್ ನೆಹರು ಬಂದರಿಗೆ ದೇಶೀಯ ಕ್ರೂಸ್ ಟರ್ಮಿನಲ್ಗಳನ್ನು ವಾಟರ್ ಟ್ಯಾಕ್ಸಿ ಮಾರ್ಗ ಒಳಗೊಂಡಿದೆ.
  • ವಾಟರ್ ಟ್ಯಾಕ್ಸಿ ಸೇವೆ ಜಾರಿಗೊಳ್ಳುವುದರಿಂದ ಮುಂಬೈನ ಸಾರ್ವಜನಿಕ ರೈಲುಗಳ ಲೋಡ್ ಕಡಿಮೆಯಾಗಲಿದ್ದು, ಹೊಸ ಸೇವೆ ಆರಂಭವಾದ ಬಳಿಕ ಸ್ಥಳೀಯ ರೈಲುಗಳ ಹೊರೆ ಕಡಿಮೆಯಾಗಲಿದೆ
  • ಈ ಸೇವೆಯು ಎಲ್ಲಾ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಮುಂಬೈ ಮತ್ತು ನವಿ ಮುಂಬೈ ನಡುವೆ ರಸ್ತೆ ಮತ್ತು ರೈಲು ಮಾತ್ರ ಸಾರಿಗೆ ವಿಧಾನವಾಗಿದೆ. ವಾಟರ್ ಟ್ಯಾಕ್ಸಿಗಳು ಸುಮಾರು 30 ಕಿ.ಮೀ ದೂರದ ಪ್ರಯಾಣವನ್ನು ಕಡಿಮೆ ಮಾಡಲು ಇದು 2,5 ನಿಮಿಷಗಳನ್ನು ತೆಗೆದುಕೊಳ್ಳಲಿದೆ.