Published on: January 14, 2023

‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆ 2023

‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆ 2023


ಸುದ್ದಿಯಲ್ಲಿ ಏಕಿದೆ? ರಾಜಕೀಯ, ಆರ್ಥಿಕ, ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಮತ್ತು ತಾಂತ್ರಿಕ ವಿಷಯಗಳ ಕುರಿತು ಸಹಕರಿಸಲು ರಾಷ್ಟ್ರಗಳ ಪ್ರಮುಖ ಗುಂಪಾಗಿ 2023 ರ ಜನವರಿ  12 ಮತ್ತು 13  ರಂದು ಭಾರತವು ಶೃಂಗಸಭೆಯನ್ನು ಆಯೋಜಿಸಿತ್ತು.  ಗೌರವಾನ್ವಿತ ಪ್ರಧಾನ ಮಂತ್ರಿಯವರು ಈ ಶೃಂಗಸಭೆಯನ್ನು ಉದ್ಘಾಟಿಸಿದರು.


ಮುಖ್ಯಾಂಶಗಳು

  • ವರ್ಚುವಲ್ ಶೃಂಗಸಭೆಗೆ 120 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದವು.
  • ಗ್ಲೋ ಬಲ್ ಸೌತ್ನ ವಾಯ್ಸ್ ಶೃಂಗಸಭೆಯು ಒಂದು ವಿಶಿಷ್ಟ ಆರಂಭವಾಗಿದೆ. ಇದು ಗ್ಲೋ ಬಲ್ ಸೌತ್ ದೇಶಗಳ ಆದ್ಯತೆಗಳ ಹೆಚ್ಚಿನ ಸಹಯೋಗದ ಹೊಸ ಮಾರ್ಗವನ್ನು ರೂಪಿಸಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ.
  • ಸಂಘರ್ಷ, ಉಗ್ರವಾದ, ಅಗತ್ಯ ವಸ್ತುಗಳ ದರ ಏರಿಕೆ ವಿಷಯದಲ್ಲಿ ವಿಶ್ವವು ಬಿಕ್ಕಟ್ಟಿನಲ್ಲಿದೆ. ಹಾಗಾಗಿ ಸಮಾಜವನ್ನು ಮತ್ತು ಆರ್ಥಿಕತೆಗಳನ್ನು ಬದಲಾಯಿಸುವಂಥ ಸರಳ ಮತ್ತು ಸುಸ್ಥಿರವಾದ ಪರಿಹಾರಗಳನ್ನು ಕಂಡುಕೊಳ್ಳಬೇಕಾದ್ದು ಅಗತ್ಯವಾಗಿದೆ

ಸವಾಲುಗಳನ್ನು   ಎದುರಿಸಲು “4 ಆರ್’ ಮಂತ್ರ:

  • ಭವಿಷ್ಯದಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳಾ ದ ನಮ್ಮ ಪಾಲು ದೊಡ್ಡದಿದೆ.
  • ಅದರ ಪರಿಣಾಮ ಮಾತ್ರ ನಮ್ಮ ಮೇಲೆಯೇ ಹೆಚ್ಚಾಗಿ ಬೀಳುತ್ತಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಅನುಸರಿಸಬೇಕಾದ ಮಂತ್ರವೊಂದೇ. ಅದು- ರೆಸ್ಪಾಂಡ್ (ಸ್ಪಂದನೆ), ರೆಕಗ್ನೈ ಸ್(ಗುರುತಿಸುವಿಕೆ), ರೆಸ್ಪೆಕ್ಟ್ (ಗೌರವ) ಮತ್ತು ರೀಫಾರ್ಮ್ (ಸುಧಾರಣೆ). ಇದರ ಮೂಲಕ ನಾವು ವಿಶ್ವಕ್ಕೆ ಹೊಸ ಶಕ್ತಿ ತುಂಬಬಹುದು.
  • ಉದ್ದೇಶ : ಜಾಗತಿಕ ದಕ್ಷಿಣದ ದೇಶಗಳನ್ನು ಒಟ್ಟುಗೂಡಿಸಲು ಮತ್ತು ವಿವಿಧ ಸವಾಲುಗಳಿಗೆ ಸಂಬಂಧಿಸಿದಂತೆ ಅವರ ಸಾಮಾನ್ಯ ಕಾಳಜಿ ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಲು ಆಯೋಜಿಸಲಾಗಿತ್ತು
  • ವಿಷಯ (ಥೀಮ್) : “ಇಂಧನ ಭದ್ರತೆ ಮತ್ತು ಅಭಿವೃದ್ಧಿ: ಸಮೃದ್ಧಿಗೆ ಮಾರ್ಗಸೂಚಿ”
  • ಗುರಿ: “ಒಗ್ಗಟ್ಟಿನ ಧ್ವನಿ, ಒಗ್ಗಟ್ಟಿನ ಉದ್ದೇಶ ” ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು G20 ದೇಶಗಳು ಮತ್ತು ಜಾಗತಿಕ ದಕ್ಷಿಣದ ಸದಸ್ಯರೊಂದಿಗೆ ಸಮಾಲೋಚನೆಯ ಮೂಲಕ ಸಕಾರಾತ್ಮಕ G20 ಕಾರ್ಯಸೂಚಿಯನ್ನು ರೂಪಿಸುವ ದೃಷ್ಟಿಗೆ ಅನುಗುಣವಾಗಿದೆ.
  • 3F ಕಳವಳ: ಅನೇಕ ಡೊಮೇನ್‌ಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರಿರುವ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಈ  ಕೆಲವು ಅಂಶಗಳು ಕೋವಿಡ್ ಸಾಂಕ್ರಾಮಿಕ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮದಿಂದಾಗಿ ಉದ್ಭವಿಸಿದೆ. ಇದು ಆಹಾರ(food), ರಸಗೊಬ್ಬರ(fertilizer) ಮತ್ತು ಇಂಧನ(fuel) ಕೊರತೆಗಳನ್ನು ಹೆಚ್ಚಿಸುತ್ತಿವೆ.
  • “ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ”ರಚಿಸಲು ಕರೆ: ಜೈವಿಕ ಇಂಧನಗಳು, ಸೌರಶಕ್ತಿ ಉಪಯೋಗಿಸಿಕೊಳ್ಳುವಲ್ಲಿ, ಒಂದು ಸೂರ್ಯ ಒಂದು ವಿಶ್ವ ಒಂದು ಗ್ರಿಡ್ (OSOWOG) ಉಪಕ್ರಮದ ಸಂಬಂಧಿತ ಪ್ರಯೋಜನಗಳನ್ನು ಒತ್ತಿಹೇಳಿದರು G20 ಅಡಿಯಲ್ಲಿ “ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ” ರಚಿಸಲು ಮತ್ತು ನವೀಕರಿಸಬಹುದಾದ ಶಕ್ತಿಯಲ್ಲಿ ಸಹಕಾರವನ್ನು ಬಲಪಡಿಸಲು ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಲು ಗ್ಲೋಬಲ್ ಸೌತ್‌ನ ಪಾಲುದಾರರಿಂದ ಬೆಂಬಲವನ್ನು ಕೋರಲಾಯಿತು .

ಭಾರತ ಪ್ರಸ್ತಾಪಿಸಿದ ಉಪಕ್ರಮಗಳು

  • ಭಾರತವು ಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಲಿದೆ. “ಈ ಸಂಸ್ಥೆಯು ನಮ್ಮ ಯಾವುದೇ ದೇಶಗಳ ಅಭಿವೃದ್ಧಿ ಪರಿಹಾರಗಳು ಅಥವಾ ಉತ್ತಮ ಅಭ್ಯಾಸಗಳ ಕುರಿತು ಸಂಶೋಧನೆಯನ್ನು ಕೈಗೊಳ್ಳುತ್ತದೆ, ಇದನ್ನು ಜಾಗತಿಕ ದಕ್ಷಿಣದ ಇತರ ದೇಶಗಲ್ಲಿ ವಿಸ್ತರಿಸಬಹುದು ಮತ್ತು ಕಾರ್ಯಗತಗೊಳಿಸಬಹುದು”.
  • ಭಾರತವು “ನಮ್ಮ ಪರಿಣತಿಯನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಜಾಗತಿಕ ದಕ್ಷಿಣ ವಿಜ್ಞಾನ ಮತ್ತು ತಂತ್ರಜ್ಞಾನ ಉಪಕ್ರಮವನ್ನು ಪ್ರಾರಂಭಿಸಲಿದೆ”.
  • ಆರೋಗ್ಯ ಮಿತ್ರ ಯೋಜನೆಯನ್ನು ಘೋಷಿಸಲಾಯಿತು “ಈ ಯೋಜನೆಯಡಿಯಲ್ಲಿ, ನೈಸರ್ಗಿಕ ವಿಕೋಪಗಳು ಅಥವಾ ಮಾನವೀಯ ಬಿಕ್ಕಟ್ಟುಗಳಿಂದ ಪ್ರಭಾವಕ್ಕೊಳಗಾಗಿರುವ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಭಾರತವು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಒದಗಿಸುತ್ತದೆ”.
  • ಅಭಿವೃದ್ಧಿಶೀಲ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಭಾರತವು ಗ್ಲೋಬಲ್ ಸೌತ್ ವಿದ್ಯಾರ್ಥಿವೇತನವನ್ನು ಸಹ ಸ್ಥಾಪಿಸಲಿದೆ .
  • ಗ್ಲೋಬಲ್ ಸೌತ್ : ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕ ದೇಶಗಳನ್ನು ಉಲ್ಲೇಖಿಸುತ್ತದೆ
  • ಲ್ಯಾಟಿನ್ ಅಮೇರಿಕ ಮತ್ತು ಕೆರಿನಿಂಬಿಯನ್ ನ 29 ದೇಶಗಳು, ಆಫ್ರಿಕಾದಿಂದ 47 ದೇಶಗಳು ಯುರೋಪಿನಿಂದ ೭ ದೇಶಗಳು , ಏಷ್ಯಾದಿಂದ 31ದೇಶಗಳು ಮತ್ತು ಓಷಿಯಾನಿಯಾದಿಂದ 11 ದೇಶಗಳು