Published on: April 12, 2022

ವಿಂಡರ್ಜಿ ಇಂಡಿಯಾ 2022

ವಿಂಡರ್ಜಿ ಇಂಡಿಯಾ 2022

ಸುದ್ಧಿಯಲ್ಲಿ ಏಕಿದೆ? ವಿಂಡರ್ಜಿ ಇಂಡಿಯಾ 2022, ಮುಂಬರುವ ಮೆಗಾ ವಿಂಡ್ ಎನರ್ಜಿ ಟ್ರೇಡ್ ಫೇರ್ ಮತ್ತು ಕಾನ್ಫರೆನ್ಸ್ ನಲ್ಲಿ ಭಾರತ ಸರ್ಕಾರ ಪಾಲ್ಗೊಳ್ಳುತ್ತಿದೆ.

ಯಾರು ಬಾಗವಹಿಸಲಿದ್ದಾರೆ ?

  • ನವದೆಹಲಿಯಲ್ಲಿ ಏಪ್ರಿಲ್ 27- 29ರಂದು ನಡೆಯಲಿರುವ ಶೃಂಗದಲ್ಲಿ, ಇಂಧನ ಸಚಿವ ಆರ್.ಕೆ. ಸಿಂಗ್, ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಪಾಲ್ಗೊಳ್ಳಲಿದ್ದಾರೆ.

ವಿಂಡ್ ಎನರ್ಜಿ ಶೃಂಗದ ಬಗ್ಗೆ

  • ವಿಂಡ್ ಎನರ್ಜಿ ಶೃಂಗವು ಮೂರು ದಿನಗಳ ಕಾಲ ನಡೆಯಲಿದೆ. ಸುಮಾರು 150 ಕಂಪನಿಗಳು ಪಾಲ್ಗೊಳ್ಳಲಿದ್ದು ತಾವು ಅಭಿವೃದ್ಧಿ ಪಡಿಸಿರುವ ಪರಿಸರಸ್ನೇಹಿ ಇಂಧನ ಉತ್ಪಾದನಾ ಟೆಕ್ನಾಲಜಿ ಮತ್ತು ಉಪಕರಣಗಳನ್ನು ಪ್ರದರ್ಶಿಸಲಿವೆ.
  • ಪವನ ಶಕ್ತಿ ಕ್ಷೇತ್ರದಿಂದ ಗ್ರಾಮೀಣ ಭಾಗದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.