Published on: December 16, 2022

ವಿಜಯ್ ದಿವಸ್

ವಿಜಯ್ ದಿವಸ್

ಸುದ್ದಿಯಲ್ಲಿ ಏಕಿದೆ? 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ವಿಜಯವನ್ನು ನೆನಪಿಸುವ ದಿನವನ್ನು(ಡಿಸೆಂಬರ್ 16 ) ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಿತು

ಮುಖ್ಯಾಂಶಗಳು

  • ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ-. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಹಾಗೂ ಆತ್ಮಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ.
  • ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದರೆ ಭಾರತೀಯ ಸಶಸ್ತ್ರ ಪಡೆಗಳು, ಯೋಧರು, ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತಮ್ಮ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಗೌರವ ಸಲ್ಲಿಸುತ್ತಾರೆ.
  • ಬಾಂಗ್ಲಾದೇಶಕ್ಕೂ ಈ ದಿನ ಮುಖ್ಯವಾಗಿದೆ. ಈ ದಿನವನ್ನು ಬಾಂಗ್ಲಾದೇಶದಲ್ಲಿ ‘ಬಿಜೋಯ್ ಡಿಬೋಸ್’ ಎಂದು ಆಚರಿಸಲಾಗುತ್ತದೆ.

ಪಾಕಿಸ್ತಾನಿ ಪಡೆಗಳ ವಿರುದ್ಧ ‘ಆಪರೇಷನ್ ಜಾಕ್ ಪಾಟ್: 

  • 1971 ರ ಯುದ್ಧಕ್ಕೆ ಕಾರಣವಾದ ಘಟನೆಗಳು ಭಾರತೀಯ ಪಡೆಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿತು; ಪಶ್ಚಿಮ ಪಾಕಿಸ್ತಾನದಲ್ಲಿ ನೆಲೆಸಿರುವ ಮುಸ್ಲಿಮೇತರರನ್ನು ಗುರಿಯಾಗಿಸಲಾಯಿತು. ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವು 13 ದಿನಗಳ ಕಾಲ ನಡೆಯಿತು, ಡಿಸೆಂಬರ್ 16, 1971 ರಂದು ಕೊನೆಗೊಂಡು ಬಾಂಗ್ಲಾದೇಶದ ಹೆಸರಿನಿಂದ ಹೊಸ ರಾಷ್ಟ್ರದ ವಿಮೋಚನೆಗೆ ಕಾರಣವಾಯಿತು. ಸುಮಾರು 93 ಸಾವಿರ ಪಾಕಿಸ್ತಾನಿ ಸೈನಿಕರನ್ನು ಶರಣಾಗುವಂತೆ ಮಾಡಿದ್ದು ಮತ್ತು ವಿಶ್ವದ ಭೂಪಟದ ರೂಪರೇಖೆಯನ್ನು ಬದಲಾಯಿಸಿದ್ದು ಭಾರತದ ಜಯವಾಗಿದೆ.