Published on: November 9, 2022

ವಿದ್ಯಾನಿಧಿ ಯೋಜನೆ

ವಿದ್ಯಾನಿಧಿ ಯೋಜನೆ

ಸುದ್ದಿಯಲ್ಲಿ ಏಕಿದೆ?

ರೈತರು, ನೇಕಾರರಾರೂ ಮತ್ತು ಮೀನುಗಾರರ ಮಕ್ಕಳಿಗೆ ಜಾರಿಗೊಳಿಸಿದ ರೈತ ವಿದ್ಯಾವಿಧಿ ಯೋಜನೆಯನ್ನು ಹಳದಿ ಬೋರ್ಡ ಹೊಂದಿದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ.

ಮುಖ್ಯಾಂಶಗಳು

  • ಅರ್ಹತೆ : ತಂದೆ ತಾಯಿ ಇಬ್ಬರೂ ಚಾಲಕರಾಗಿದ್ದೂ, ಸಾರಥಿ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿದ್ದಲ್ಲಿ ಈ ಯೋಜನೆಯಲ್ಲಿ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಚಾಲಕರ ಮಕ್ಕಳು ಅರ್ಹರಾಗಿರುತ್ತಾರೆ.
  • ಕರ್ನಾಟಕದಲ್ಲಿ ಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್ಎಲ್ ಬಿ, ಪ್ಯಾರಾ ಮೆಡಿಕಲ್ ಬಿ ಫಾರ್ಮ್, ನರ್ಸಿಂಗ್, ಎಂಬಿಬಿಎಸ, ಬಿಇ, ಬಿಟೆಕ್ ಮತ್ತು ಎಲ್ಲ ಸ್ನಾತ್ತಕೋತ್ತರ ಕೊರ್ಸಗೆ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ಸೇವಾ ಸಿಂಧು, ಕರ್ನಾಟಕ ಒನ್ ಗ್ರಾಮ್ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು.
  • ವಿಶೇಷ ಸೂಚನೆ- ಪುನರಾವರ್ತಿತ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ.

ಉದ್ದೇಶ

  • ಈ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ವಿದ್ಯಾನಿಧಿ ಯೋಜನೆ ಸೌಲಭ್ಯದ ಅನುಷ್ಟಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.