Published on: January 10, 2023

ವಿಧಿ ವಿಜ್ಞಾನ ವಿವಿ

ವಿಧಿ ವಿಜ್ಞಾನ ವಿವಿ


ಸುದ್ದಿಯಲ್ಲಿ ಏಕಿದೆ? ಅಪರಾಧದ ದೃಶ್ಯಗಳಿಂದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ವಿಧಿವಿಜ್ಞಾನದ ಕೋರ್ಸ್‌ಗಳನ್ನು ನೀಡಲು ರಾಜ್ಯ ಸರ್ಕಾರವು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ.


ಮುಖ್ಯಾಂಶಗಳು

  • ಕರ್ನಾಟಕದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತ್‌ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
  • ಗುಜರಾತ್‌ನ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಕರ್ನಾಟಕದಲ್ಲಿ ಇದೇ ರೀತಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯಕ್ಕೆ ನೆರವು ನೀಡಲು ಮುಂದೆ ಬಂದಿದೆ.
  • ಒಮ್ಮೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದೇ ಆದರೆ, ದಕ್ಷಿಣ ಭಾರತದಲ್ಲಿ ಸ್ಥಾಪನೆಗೊಂಡ ಮೊದಲ ವಿಧಿವಿಜ್ಞಾನ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಲಿದೆ.
  • ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್‌ಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ವಿಧಿವಿಜ್ಞಾನ :

  • ಅಪರಾಧ ಪ್ರಕರಣಗಳನ್ನು ವೈಜ್ಞಾನಿಕ ತಕ್ಕಡಿಯಲ್ಲಿ ತೂಗು ಹಾಕುವ ಒಂದು ವಿಧಾನವನ್ನು ವಿಧಿವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಎನ್ನಲಾಗುತ್ತದೆ.
  • ವಿಧಿವಿಜ್ಞಾನ ಒಂದು ಪ್ರಯೋಗಶಾಲೆಯನ್ನು ಆಧರಿಸಿಕೊಂಡು ನಡೆಯುವ ವೃತ್ತಿ.
  • ಈ ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆ ಕಾರ್ಯದಲ್ಲಿ ವಿಜ್ಞಾನದ ಮೊರೆ ಹೋಗುವುದರ ಮೂಲಕ ಅಪರಾಧ ಪ್ರಕರಣಗಳ ಗೊಂದಲಗಳನ್ನು ನಿವಾರಿಸುವ ಕಾರ್ಯ ನಡೆಯುತ್ತದೆ.
  • ಬರಿ ಕೊಲೆ, ದರೋಡೆಯಂತಹ ಪ್ರಕರಣಗಳಲ್ಲಿ ಮಾತ್ರ ವಿಧಿವಿಜ್ಞಾನ ತನ್ನ ಸಾಮರ್ಥ್ಯವನ್ನು ಹೊಂದದೆ. ಸಿವಿಲ್ ಪ್ರಕರಣಗಳಾದ ಆಸ್ತಿಪತ್ರಗಳಲ್ಲಿ ಅವ್ಯವಹಾರ, ಸಹಿಯ ದುರ್ಬಳಕೆ, ಪರಿಸರದ ನಿಯಮಗಳನ್ನು ಪಾಲಿಸದಿರುವ ಕಂಪನಿ, ಉದ್ಯಮಗಳ ಪ್ರಕರಣಗಳಲ್ಲಿ ಕೂಡ ವಿಧಿವಿಜ್ಞಾನ ಸಹಾಯ ಮಾಡುತ್ತದೆ.
  • ಇಲ್ಲಿ ಲಭ್ಯವಾಗುವ ಮಾಹಿತಿ/ವರದಿ/ ಸಾಕ್ಷ್ಯಗಳನ್ನು ಒಟ್ಟು ಸೇರಿಸಿ ನ್ಯಾಯಾಂಗದ ಕಲಾಪಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದು ಅಪರಾಧ ಪ್ರಕರಣಗಳಲ್ಲಿ ಅಪರಾಧಿಯ ಕೃತ್ಯವನ್ನು ಎತ್ತಿ ತೋರಿಸುತ್ತದೆ.