Published on: November 12, 2022

ವಿವಿ ಕುಲಪತಿ ಹುದ್ದೆ ಅಧಿಕಾರ

ವಿವಿ ಕುಲಪತಿ ಹುದ್ದೆ ಅಧಿಕಾರ

ಸುದ್ದಿಯಲ್ಲಿ ಏಕಿದೆ?

ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಪದಚ್ಯುತಗೊಳಿಸಲು ಕೇರಳರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ.

ಮುಖ್ಯಾಂಶಗಳು

  • ಸುಗ್ರೀವಾಜ್ಞೆಯಿಂದ ಇನ್ನು ಮುಂದೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಿ ಖ್ಯಾತ ಶಿಕ್ಷಣ ತಜ್ಞರನ್ನು ನೇಮಕ ಮಾಡಲಾಗುವುದು. ಈ ನಿರ್ಧಾರವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಸುಧಾರಣೆಗಳ ಭಾಗವಾಗಿದೆ
  • ಇತ್ತೀಚೆಗೆ, ಸರ್ಕಾರವು ನೇಮಿಸಿದ ಆಯೋಗವು ಕುಲಪತಿಯು ಜೀವಮಾನದ ಶ್ರೇಷ್ಠತೆ ಮತ್ತು ನಾಯಕತ್ವದ ಮೂಲಕ ಸಾರ್ವಜನಿಕ ಜೀವನದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಶ್ರೇಷ್ಠ ವ್ಯಕ್ತಿ ಎಂದು ಶಿಫಾರಸು ಮಾಡಿದೆ.

ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಪದಚ್ಯುತಗೊಳಿಸಲು ಕಾರಣ:

  • ಇತ್ತೀಚೆಗೆ ಉಪಕುಲಪತಿಗಳ ನೇಮಕದಲ್ಲಿ ರಾಜ್ಯಪಾಲ ಆರಿಫ್ ಖಾನ್ ಅವರ ಮಧ್ಯಸ್ಥಿಕೆಯೇ ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ಕೆಳಗಿಳಿಸುವ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸುವುದಕ್ಕೆ ಕಾರಣವಾಗಿದೆ.
  • ಇತ್ತೀಚೆಗಷ್ಟೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಉಪ ಕುಲಪತಿಗಳ ನೇಮಕ ಅನೂರ್ಜಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ರಾಜ್ಯಪಾಲರು 10 ಉಪಕುಲಪತಿಗಳನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು.

ಬೇರೆ ರಾಜ್ಯಗಳಲ್ಲಿರುವ ಸ್ಥಿತಿ-ಗತಿ

  • ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು (ವಿ.ಸಿ) ನೇಮಿಸುವ ಅಧಿಕಾರವನ್ನು ರಾಜ್ಯಪಾಲರಿಂದ ಹಿಂತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
  • ಮಹಾರಾಷ್ಟ್ರ ರಾಜ್ಯ ಶಾಸಕಾಂಗವು ಇತ್ತೀಚೆಗೆ ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಕಾಯಿದೆ 2021ಅನ್ನು ಅಂಗೀಕರಿಸಿದ್ದು ಆ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದೆ.
  • ಗುಜರಾತ್‌ನಲ್ಲಿ ರಾಜ್ಯ ಸರ್ಕಾರವೇ ಕುಲಪತಿಗಳ ನೇಮಕಾತಿಯನ್ನು ಮಾಡುತ್ತಿದೆ. ಈ ಬೆನ್ನಲ್ಲೇ ಪಶ್ಚಿಮ ಬಂಗಾಳ, ಕೇರಳ, ದೆಹಲಿ ಮತ್ತು ಪಂಜಾಬ್ ರಾಜ್ಯಗಳು ರಾಜ್ಯಪಾಲರಿಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿಯ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವರ್ಗಾಯಿಸಲು ಮಸೂದೆಗಳನ್ನು ಮಂಡಿಸಲು ತಯಾರಾಗಿವೆ.