Published on: November 22, 2021

ವಿಶಿಷ್ಟ ದೂರದರ್ಶಕ ಬಳಸಿ ಗ್ರಹ ಪತ್ತೆ

ವಿಶಿಷ್ಟ ದೂರದರ್ಶಕ ಬಳಸಿ ಗ್ರಹ ಪತ್ತೆ

ಸುದ್ಧಿಯಲ್ಲಿ ಏಕಿದೆ ?  ಮೌಂಟ್ ಅಬುವಿನಲ್ಲಿ ಇರುವ ಪಿಆರ್‌ಎಲ್‌ನ 1.2 ಮೀಟರ್‌ ದೂರದರ್ಶಕದಲ್ಲಿ, ಆಪ್ಟಿಕಲ್ ಫೈಬರ್‌ಫೆಡ್ ಸ್ಪೆಕ್ಟ್ರೊಗ್ರಾಫ್‌ (ಪರಸ್) ಅನ್ನು ಬಳಸಿಕೊಂಡು ಈ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿದೆ.

ಮುಖ್ಯಾಂಶಗಳು

  • ಪರಸ್‌ ಸ್ಪೆಕ್ಟ್ರೊಗ್ರಾಫ್‌ ಅನ್ನು ಬಳಸಿಕೊಂಡು ಆ ಗ್ರಹದ ಗಾತ್ರ ಮತ್ತು ದ್ರವ್ಯರಾಶಿಯನ್ನು ಲೆಕ್ಕ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
  • ಭೂಮಿಯಿಂದ 725 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರವನ್ನು ಈ ಗ್ರಹವು ಸುತ್ತುತ್ತಿದೆ. ಹೆನ್ರಿ ಡ್ರೇಪರ್‌ನ ಪಟ್ಟಿಯಲ್ಲಿ ಈ ನಕ್ಷತ್ರವನ್ನು ಎಚ್‌ಡಿ 82139 ಎಂದು ಹೆಸರಿಸಲಾಗಿದೆ. ಅದನ್ನು ಸುತ್ತುತ್ತಿರುವ ದೈತ್ಯ ಗ್ರಹವನ್ನು ಟಿಒಐ 1789ಬಿ ಎಂದು ಕರೆಯಲಾಗಿದೆ.
  • ಟಿಒಐ 1789ಬಿ ಗ್ರಹದ ದ್ರವ್ಯರಾಶಿಯು, ನಮ್ಮ ಸೌರಮಂಡಲದ ಗುರು ಗ್ರಹದ ದ್ರವ್ಯರಾಶಿಗಿಂತ ಶೇ 70ರಷ್ಟು ಹೆಚ್ಚು. ಟಿಒಐ 1789ಬಿ ಗ್ರಹವು, ನಮ್ಮ ಗುರುಗ್ರಹಕ್ಕಿಂತ 1.4 ಪಟ್ಟು ಹೆಚ್ಚು ದೊಡ್ಡದು.
  • 2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ವರೆಗೆ ನಡೆಸಿದ ಅಧ್ಯಯನದಲ್ಲಿ ಈ ಗ್ರಹದ ಗಾತ್ರ ಮತ್ತು ದ್ರವ್ಯರಾಶಿಯನ್ನು ಲೆಕ್ಕ ಹಾಕಲಾಗಿದೆ.
  • ಜರ್ಮನಿಯ ಸ್ಪೆಕ್ಟ್ರೊಗ್ರಾಫ್‌ ಮತ್ತು ಪಿಆರ್‌ಎಲ್‌ನ 43 ಸೆಂ.ಮೀ.ನ ದೂರದರ್ಶಕವನ್ನು ಬಳಸಿಕೊಂಡು, ಪರಸ್ ಸ್ಪೆಕ್ಟ್ರೊಗ್ರಾಫ್‌ನಲ್ಲಿ ಲೆಕ್ಕಹಾಕಲಾದ ಗಾತ್ರ ಮತ್ತು ದ್ರವ್ಯರಾಶಿಯನ್ನು ದೃಢಪಡಿಸಿಕೊಳ್ಳಲಾಗಿದೆ
  • ಟಿಒಐ 1789ಬಿ ಗ್ರಹವು, ಎಚ್‌ಡಿ 82139 ನಕ್ಷತ್ರವನ್ನು ಪ್ರತಿ 3.2 ದಿನಕ್ಕೊಮ್ಮೆ ಸುತ್ತಿಬರುತ್ತದೆ. ಅಲ್ಲದೆ ಈ ಗ್ರಹವು ನಕ್ಷತ್ರಕ್ಕೆ ಅತ್ಯಂತ ಸಮೀಪವಿದೆ. ನಮ್ಮ ಸೂರ್ಯ ಮತ್ತು ಬುಧ ಗ್ರಹದ ನಡುವಣ ಅಂತರದ 10ನೇ 1ರಷ್ಟು ದೂರವಷ್ಟೇ, ಈ ಗ್ರಹ ಮತ್ತು ನಕ್ಷತ್ರದ ನಡುವಿನ ಅಂತರ

ಪರಸ್

  • ಪರಸ್, ಭಾರತದಲ್ಲಿನ ಮೊದಲ ಆಪ್ಟಿಕಲ್ ಫೈಬರ್‌ಫೆಡ್ ಸ್ಪೆಕ್ಟ್ರೊಗ್ರಾಫ್‌ ಆಗಿದೆ. ಇದನ್ನು ಬಳಸಿಕೊಂಡು 2018ರಲ್ಲಿ, ಭೂಮಿಯಿಂದ 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕೆ2–236ಬಿ ಎಂಬ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿತ್ತು.