Published on: September 1, 2021

ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಲೋಕಾರ್ಪಣೆ

ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಲೋಕಾರ್ಪಣೆ

ಸುದ್ಧಿಯಲ್ಲಿ ಏಕಿದೆ ? ಲೆಹ್‌ನಿಂದ ಪ್ಯಾಂಗೊಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯತಂತ್ರದ ಮಹತ್ವದ ರಸ್ತೆಯನ್ನು ಲಡಾಖ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಉದ್ಘಾಟಿಸಿದರು.

  • 18,600 ಅಡಿ ಎತ್ತರದಲ್ಲಿ ಹಾದು ಹೋಗುವ ಈ ಮಾರ್ಗವು ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗವಾಗಿದೆ.
  • ಭಾರತೀಯ ಸೇನೆಯ 58 ಎಂಜಿನಿಯರ್ ರೆಜಿಮೆಂಟ್‌ನಿಂದ ನಿರ್ಮಿಸಲಾಗಿರುವ ಈ ರಸ್ತೆಯು ಲೆಹ್ (ಜಿಂಗ್ರಾಲ್‌ನಿಂದ ಟ್ಯಾಂಗ್ಟ್ಸೆ) ನಿಂದ ಕೇಲಾ ಪಾಸ್ ದಾಟಿ ಸುಂದರವಾದ ಪ್ಯಾಂಗೊಂಗ್ ಸರೋವರಕ್ಕೆ ತಲುಪುವ ಈ ಮಾರ್ಗವು 41 ಕಿ.ಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ.
  • ಇಲ್ಲಿಯವರೆಗೆ, 18,380 ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ ಖರ್ದುಂಗ್ಲಾ ಪಾಸ್ ವಿಶ್ವದ ಅತಿ ಎತ್ತರದ ಮೋಟರಬಲ್ ರಸ್ತೆಯಾಗಿತ್ತು.

ರಸ್ತೆಯ ಮಹತ್ವ

  • ಸ್ಥಳೀಯ ನಿವಾಸಿಗಳ, ವಿಶೇಷವಾಗಿ ಲಡಾಖ್‌ನ ಲಾಲೋಕ್ ಪ್ರದೇಶದ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಭವಿಷ್ಯದಲ್ಲಿ ಈ ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಈ ರಸ್ತೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.