Published on: January 6, 2023
ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಮ್
ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಮ್
ಸುದ್ದಿಯಲ್ಲಿ ಏಕಿದೆ? ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂನ್ನು ರೂರ್ಕೆಲಾದಲ್ಲಿ ಉದ್ಘಾಟಿಸಿದ್ದಾರೆ.
ಮುಖ್ಯಾಂಶಗಳು
- ಇದರಲ್ಲಿ ಬರುವ ಜನವರಿ 13 ರಿಂದ ಹಾಕಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
- ಹಾಕಿ ಇಂಡಿಯಾ ಇಲ್ಲಿ ಸೇವೆಗಳನ್ನು ಒದಗಿಸುವುದಕ್ಕೆ ತಾಜ್ ಗ್ರೂಪ್ ನ್ನು ಕರೆತರಲಾಗಿದೆ.
- ಕ್ರೀಡಾಂಗಣಕ್ಕೆ ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಮ್ (ಬಿಎಂಹೆಚ್ಎಸ್) ಎಂದು ನಾಮಕರಣ ಮಾಡಲಾಗಿದೆ .
- ವೆಚ್ಚ: 260 ಕೋಟಿ ರೂಪಾಯಿ
- ಸಾಮರ್ಥ್ಯ:ಸುಮಾರು 20,000 ಮಂದಿ ವೀಕ್ಷಿಸುವ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ.
- ಕ್ರೀಡಾಂಗಣದ ವಿನ್ಯಾಸ: ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರ್ಗಳು ಸಿದ್ಧಪಡಿಸಿದ್ದಾರೆ.
ವಿಶ್ವಕಪ್ ಗ್ರಾಮ: ಸ್ಟೇಡಿಯಮ್ ಕ್ಯಾಂಪಸ್ ನಲ್ಲಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ವಿಶ್ವಕಪ್ ಗ್ರಾಮವನ್ನೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂಕೀರ್ಣದಲ್ಲಿ ಅಭ್ಯಾಸ ಪಿಚ್, ಫಿಟ್ನೆಸ್ ಕೇಂದ್ರ, ಹೈಡ್ರೋಥೆರೆಪಿ ಪೂಲ್, ಡ್ರೆಸ್ಸಿಂಗ್ ಹಾಗೂ ಬದಲಾವಣೆ ಕೊಠಡಿ 225 ಕೊಠಡಿಗಳನ್ನು ಹೊಂದಿರುವ ವಸತಿ ಸಂಕೀರ್ಣಗಳಿದ್ದು, ಕೇವಲ 9 ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡಿದ್ದು 400 ಕ್ರೀಡಾಪಟುಗಳಿಗೆ ಆಗುವ ವ್ಯವಸ್ಥೆಯನ್ನು ಹೊಂದಿರುವ ಪಂಚತಾರ ಸೌಲಭ್ಯಗಳಿವೆ. - ಕ್ರೀಡಾಂಗಣದ ವಿಶೇಷತೆ:
- 15 ಎಕರೆಗಳಷ್ಟು ವಿಸ್ತಾರವಾಗಿದ್ದು
- ವಿಶ್ವದ ಮೊದಲ ಪರಿಸರ ಸ್ನೇ ಹಿ ಹಾಕಿ ಕ್ರೀ ಡಾಂಗಣ
- ಕ್ರೀಡಾಂಗಣದಲ್ಲಿ ಅಭ್ಯಾಸದ ಪಿಚ್ ಮತ್ತು ಬಟ್ಟೆ ಬದಲಾಯಿಸುವ ಕೋಣೆಗೆ ಸಂಪರ್ಕ ಕಲ್ಪಿಸಲು ಸುರಂಗವನ್ನು ಮಾಡಲಾಗಿದೆ.
- ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಎರಡು ಹೋಟೆಲ್ಗಳಿದ್ದು, ವಿಶ್ವಕಪ್ನಲ್ಲಿ ಭಾಗವಹಿಸುವ ಭಾರತ ಮತ್ತು ವಿದೇಶದ ಆಟಗಾರರು ಇಲ್ಲಿ ತಂಗಲಿದ್ದಾರೆ.
- ಕ್ರೀ ಡಾಂಗಣವು ಭೂಕಂಪ ನಿರೋಧಕವಾಗಿದೆ.
- ಕ್ರೀ ಡಾಂಗಣವನ್ನು ಹವಾಮಾನ ಸ್ನೇಹಿಯಾಗಿಡಲು, 250 ಹೆಚ್ಪಿ ಡಕ್ಟಬಲ್ ಎಸಿ ಘಟಕವನ್ನು ಸ್ಥಾಪಿಸಲಾಗಿದೆ.
ಹಾಕಿ ವಿಶ್ವಕಪ್:
- ಭಾರತದಲ್ಲಿ 15ನೇ ಹಾಕಿ ವಿಶ್ವಕಪ್ ಆಯೋಜಿಸಲಾಗುತ್ತಿದೆ.
- ಜನವರಿ 13 ರಿಂದ 29ರವರೆಗೆ ನಡೆಯಲಿರುವ ಈ ಮಹಾನ್ ಹಾಕಿ ಕದನದಲ್ಲಿ ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಆಗಲು ಸೆಣಸಲಿವೆ.
- ವಿಶ್ವಕಪ್ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.
- ವಿಶ್ವಕಪ್ ಹಾಕಿಯ ಮೊದಲ ಪಂದ್ಯ ಭಾರತ ಮತ್ತು ಸ್ಪೇನ್ ನಡುವೆ ಜನವರಿ 13 ರಂದು ಇದೇ ಕ್ರೀ ಡಾಂಗಣದಲ್ಲಿ ನಡೆಯಲಿದೆ.
- ವಿಶ್ವಕಪ್ನ ಎಲ್ಲಾ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ. ಈ ಸ್ಪರ್ಧೆಯಲ್ಲಿ 16 ದೇಶಗಳ ನಡುವೆ ಒಟ್ಟು 44 ಪಂದ್ಯಗಳು ನಡೆಯಲಿವೆ.
- ಈ ಪೈಕಿ 20 ಪಂದ್ಯಗಳು ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ವಿಶ್ವಕಪ್ ಪ್ರಸ್ತಾವನೆ: ಪಾಕಿಸ್ತಾನದ ಏರ್ ಮಾರ್ಷಲ್ ನೂರ್ ಖಾನ್ ಅವರ ಮನಸ್ಸಿಗೆ ಹಾಕಿ ವಿಶ್ವಕಪ್ ಆರಂಭಿಸುವ ಯೋಚನೆ ಬಂತು. ಅವರು ವಿಶ್ವ ಹಾಕಿ ನಿಯತಕಾಲಿಕದ ಮೊದಲ ಸಂಪಾದಕ ಪ್ಯಾಟ್ರಿಕ್ ರೌಲಿ ಮೂಲಕ ಎಫ್ಐಹೆಚ್ಗೆ ಹಾಕಿ ವಿಶ್ವಕಪ್ನ ಪರಿಚಯವನ್ನು ಪ್ರಸ್ತಾಪಿಸಿದರು. ಎಫ್ಐಹೆಚ್ ಪ್ರಸ್ತಾವನೆಯನ್ನು 26 ಅಕ್ಟೋ ಬರ್ 1969 ರಂದು ಅನುಮೋದಿಸಿತು. 12 ಏಪ್ರಿಲ್ 1970 ರಂದು ಬ್ರಸೆಲ್ಸ್ನಲ್ಲಿ ನಡೆದ ಸಭೆಯಲ್ಲಿ ವಿಶ್ವಕಪ್ ನಡೆಯಲಿದೆ ಎಂದು ಘೋಷಿಸಲಾಯಿತು.