Published on: April 7, 2023

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ

ಸುದ್ಧಿಯಲ್ಲಿ ಏಕಿದೆ? ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ದಿನವನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. 1950 ರಿಂದ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 07 ರಂದು ಆಚರಣೆ ಮಾಡಲಾಗುತ್ತಿದೆ.

ವಿಶ್ವ ಆರೋಗ್ಯ ದಿನ ಆಚರಣೆಯ ಉದ್ಯೇಶ

  • ಆರೋಗ್ಯದ ಕಾಳಜಿಯ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ವಿಶ್ವ ಆರೋಗ್ಯ ದಿನವನ್ನು ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವು ಮೂಲಕ ಜಾಗೃತಿ ಮೂಡಿಸುತ್ತವೆ.

2023 ಥೀಮ್

  • ವಿಶ್ವ ಆರೋಗ್ಯ ಸಂಸ್ಥೆಯು 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ವಿಶ್ವ ಆರೋಗ್ಯ ದಿನವನ್ನು’ಎಲ್ಲರಿಗೂ ಆರೋಗ್ಯ’ ಎಂಬ ವಿಷಯದ ಮೇಲೆ ಆಚರಣೆ ಮಾಡಲು ನಿರ್ಧರಿಸಿದೆ.

ವಿಶ್ವ ಆರೋಗ್ಯ ದಿನದ ಇತಿಹಾಸ

  • 1948ರಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಜೀವನದ ಮುಖ್ಯ ಅಂಶಗಳಲ್ಲಿ ಒಂದಾಗಿ ಉತ್ತೇಜಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇದಾಗಿ 2 ವರ್ಷಗಳ ನಂತರ, ಅಂದರೆ 1950ರಲ್ಲಿ ಮೊದಲ ಬಾರಿಗೆ ಏಪ್ರಿಲ್‌ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಹಾಗಾಗಿ ಅಂದಿನಿಂದ ಇಂದಿನವರೆಗೆ ಈ ದಿನವನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
  • 1948ರಲ್ಲಿ ಪ್ರಪಂಚದ ಎಲ್ಲಾ ದೇಶಗಳು ಒಟ್ಟಾಗಿ ಸೇರಿ ಆರೋಗ್ಯವನ್ನು ಉತ್ತೇಜಿಸಲು, ಜಗತ್ತನ್ನು ಸುರಕ್ಷಿತವಾಗಿಡಲು ಹಾಗೂ ಅಶಕ್ತರಿಗೆ ಸೇವೆ ನೀಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಿದ್ದವು. ಇಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಆರೋಗ್ಯ ಸೇವೆ ಸಲ್ಲಿಸುತ್ತಿದೆ.

ಮಹತ್ವ

  • ಗುಣಮಟ್ಟದ ಜೀವನ ನಡೆಸಲು ಆರೋಗ್ಯ ಕಾಳಜಿ ಅವಶ್ಯ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಗುರುತಿಸುವ ಉದ್ದೇಶವೂ ಈ ದಿನದ ಆಚರಣೆಯ ಹಿಂದಿನ ಉದ್ದೇಶವಾಗಿದೆ.
  • ಪ್ರತಿ ವರ್ಷ ಜಾಗತಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿಷಯದ ಬಗ್ಗೆ ಪ್ರಪಂಚದಾದ್ಯಂತ ಗಮನ ಸೆಳೆಯಲು ಈ ಸಂಸ್ಥೆಯು ಒಂದು ಮಾಧ್ಯಮ ಎಂಬುದಾಗಿ ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ದಿನವನ್ನು ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಂಗೀಕರಿಸುತ್ತವೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಾಗೂ ಮಾಧ್ಯಮಗಳಲ್ಲಿ ವರದಿ ಭಿತ್ತರಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.