ವಿಶ್ವ ಆರೋಗ್ಯ ದಿನ
ವಿಶ್ವ ಆರೋಗ್ಯ ದಿನ
ಸುದ್ದಿಯಲ್ಲಿ ಏಕಿದೆ? 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರ ಸ್ಮರಣಾರ್ಥ ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಮುಖ್ಯಾಂಶಗಳು
- ಜಗತ್ತಿನಲ್ಲಿ ವಿಶ್ವದಾದ್ಯಂತ ಮಿತಿ ಇಲ್ಲದೆ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆ ಏನೆಂದರೆ ಯುವಜನಾಂಗದಲ್ಲಿ ಬೆಳೆಯುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳು ‘ಎಂದರೆ ತರುಣರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು.
- ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ತರುಣರು ಈ ಬಗೆಗೆ ಗಮನವನ್ನು ಹರಿಸಬೇಕೆಂಬ ದೃಷ್ಟಿಯಿಂದ ‘Non-communicable diseases in the youth’ ಎಂಬ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
- 2024ನೇ ಸಾಲಿನ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ ನನ್ನ ಹಕ್ಕು‘
ಉದ್ದೇಶ
ವಿಶ್ವ ಆರೋಗ್ಯ ಸಂಸ್ಥೆ ಎಂಬುದು ಅಂತರರಾಷ್ಟ್ರೀಯ ಸಂಸ್ಥೆ. ಈ ಸಂಸ್ಥೆಯ ಧ್ಯೇಯವೇನೆಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಾರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು ಮತ್ತು ಆರೋಗ್ಯ ಮಟ್ಟವನ್ನು ಮೇಲೇರಿಸುವುದು.
ಅಸಾಂಕ್ರಾಮಿಕ ರೋಗಗಳು
ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು, ಕ್ಯಾನ್ಸರ್ ಗಳು ದೀರ್ಘಕಾಲಿಕ ಶ್ವಾಸಕೋಶ ವ್ಯಾಧಿಗಳು ಮುಂತಾದವು. ಹಿಂದೆ ಇವು ಹೆಚ್ಚು ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದುವು. ಆದರೆ ಈಗ ಆಧುನಿಕ ಜೀವನಶೈಲಿಯಿಂದ ವಯೋಭೇದ, ಲಿಂಗಭೇದ, ಸಾಮಾಜಿಕ ಭೇದ ಇಲ್ಲದೆ ಎಲ್ಲರಲ್ಲೂ ಗೋಚರಿಸುತ್ತಿವೆ. ಈ ನಾಲ್ಕು ರೋಗಗಳಿಗೆ ಮುಖ್ಯವಾದ ಕಾರಣಗಳು 1) ಆಹಾರ ಪದ್ಧತಿಗಳು 2) ಶ್ರಮರಹಿತ ಜೀವನಶೈ ಲಿ 3) ತಂಬಾಕು ಸೇವನೆ 4) ಜೊತೆಗೆ ರಕ್ತದೊತ್ತಡ, ಅತಿಯಾದ ಕೊಲೆಸ್ಟೆರಾಲ್, ಮಿತಿಮೀರಿದ ಸಕ್ಕರೆ ಅಂಶ, ಆನುವಂಶಿಕತೆ ಇತ್ಯಾದಿ.
ವಿಶ್ವ ಆರೋಗ್ಯ ದಿನದ ಇತಿಹಾಸ
- 1948 ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು.
- ಈ ದಿನವನ್ನು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು.
- ನಂತರ ಏಪ್ರಿಲ್ 07ಕ್ಕೆ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
- ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ದಿನವನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
- 1950 ರಿಂದ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 07 ರಂದು ಆಚರಣೆ ಮಾಡಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ
ಅಂತರ ಸರ್ಕಾರಿ ಸಂಸ್ಥೆ
ಪ್ರಧಾನ ಕಛೇರಿ: ಜಿನೀವಾ, ಸ್ವಿಟ್ಜರ್ಲೆಂಡ್
ಸ್ಥಾಪನೆ: 7 ಏಪ್ರಿಲ್ 1948
ಪೋಷಕ ಸಂಸ್ಥೆ: ವಿಶ್ವಸಂಸ್ಥೆ