Published on: June 1, 2024

ವಿಶ್ವ ತಂಬಾಕು ರಹಿತ ದಿನ

ವಿಶ್ವ ತಂಬಾಕು ರಹಿತ ದಿನ

ಸುದ್ದಿಯಲ್ಲಿ ಏಕಿದೆ? ಜಾಗತಿಕ ಮಟ್ಟದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ತಂಬಾಕು ಸಾಂಕ್ರಾಮಿಕ ಮತ್ತು ತಡೆಗಟ್ಟಬಹುದಾದ ಸಾವು ಮತ್ತು ರೋಗಗಳ ಬಗ್ಗೆ ಜಾಗತಿಕ ಗಮನ ಸೆಳೆಯಲು ರಚಿಸಿದವು.1988 ರಲ್ಲಿ, ನಿರ್ಣಯವನ್ನು ಅಂಗೀಕರಿಸಲಾಯಿತು
  • ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಿತು.‌
  • ವಿಶ್ವ ತಂಬಾಕು ರಹಿತ ದಿನ 2024 ಥೀಮ್: ‌ತಂಬಾಕು ಉದ್ಯಮಗಳ ಹಸ್ತಕ್ಷೇಪಗಳನ್ನು ತಡೆದು ಮಕ್ಕಳನ್ನು ರಕ್ಷಿಸುವುದು ಎಂಬುದಾಗಿದೆ. ಇದು ಭವಿಷ್ಯದ ಜನಾಂಗವನ್ನು ತಂಬಾಕಿನ ದುಷ್ಪರಿಣಾಮಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.
  • WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ತಂಬಾಕು ಸಂಬಂಧಿತ ಕಾಯಿಲೆಗಳ ಪರಿಣಾಮವಾಗಿ ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ. 2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅಭಿಯಾನವನ್ನು ನಡೆಸುತ್ತಿದೆ.

ನಿಮಗಿದು ತಿಳಿದಿರಲಿ

ಪ್ರಪಂಚದಾದ್ಯಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನವಿದೆ. ಭಾರತವನ್ನು ಕ್ಯಾನ್ಸರ್‌ ರಾಜಧಾನಿ ಎಂದೂ ಸಹ ಕರೆಯಲಾಗುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಲ್ಲಿ ತಂಬಾಕು ಪ್ರಮುಖವಾದದ್ದು. ವಿಶ್ವದಲ್ಲಿ ಭಾರತವು ತಂಬಾಕು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ   ಮತ್ತು ಚೀನಾ ಮತ್ತು ಬ್ರೆಜಿಲ್ ನಂತರ 3ನೇ ರಫ್ತುದಾರ ದೇಶ ಆಗಿದೆ.