Published on: June 6, 2022
ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನ
ಸುದ್ಧಿಯಲ್ಲಿ ಏಕಿದೆ?
ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 5 ರಂದು ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಗೆ ಭಾರತ ಸರ್ಕಾರ ಕೈಗೊಂಡ ಕ್ರಮಗಳು
- ಸ್ವಚ್ಛ ಭಾರತ್ ಮಿಷನ್, ತ್ಯಾಜ್ಯವನ್ನು ಸಂಪತ್ತಾಗಿಸುವ ಕಾರ್ಯಕ್ರಮಗಳು, ಅಮೃತ್ ಮಿಷನ್ ಅಡಿ ನಗರಗಳಲ್ಲಿ ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ, ಸಿಂಗಲ್ ಯೂಸ್ ಪ್ಲಾಸ್ಟಿಕ್ಗಳನ್ನು ಬಳಸಿ ಪರಿಸರವನ್ನು ರಕ್ಷಿಸುವ ಭಾರತದ ಬಹು ಆಯಾಮಗಳಾಗಿವೆ.
ಅಂತಾರಾಷ್ಟ್ರೀಯ ಮಟ್ಟದ ಸೌರ ಒಕ್ಕೂಟ
- ಸಿಡಿಆರ್ಐ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟ ರಚನೆಗೆ ಭಾರತ ನೇತೃತ್ವ ವಹಿಸಿದೆ. ಕಳೆದ ವರ್ಷ, ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸುವ ಬಗ್ಗೆ ಸಂಕಲ್ಪ ಮಾಡಿದೆ. ಇಂದು ನಮ್ಮ ಸೌರಶಕ್ತಿ ಸಾಮರ್ಥ್ಯ ಸುಮಾರು 18 ಪಟ್ಟು ಹೆಚ್ಚಾಗಿದೆ. ಅದು ಹೈಡ್ರೋಜನ್ ಮಿಷನ್ ಆಗಿರಲಿ ಅಥವಾ ಸರ್ಕ್ಯೂಲರ್ ಆರ್ಥಿಕ ನೀತಿಯ ವಿಷಯವಾಗಿರಲಿ, ಇದು ಪರಿಸರವನ್ನು ರಕ್ಷಿಸುವ ನಮ್ಮ ಬದ್ಧತೆಯ ಫಲಿತಾಂಶವಾಗಿದೆ ಎಂದರು.
ಮಣ್ಣನ್ನು ಜೀವಂತವಾಗಿರಿಸಲು 5 ಮಂತ್ರ
- ಮಣ್ಣನ್ನು ಜೀವಂತವಾಗಿಡಲು ದೇಶವು ನಿರಂತರವಾಗಿ ಶ್ರಮಿಸುತ್ತಿದೆ. ಮಣ್ಣನ್ನು ಉಳಿಸಲು, ಐದು ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ,
- ಮೊದಲನೆಯದಾಗಿ- ಮಣ್ಣನ್ನು ರಾಸಾಯನಿಕ ಮುಕ್ತವನ್ನಾಗಿ ಮಾಡುವುದು ಹೇಗೆ?
- ಎರಡನೆಯದು- ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನು ಹೇಗೆ ಉಳಿಸುವುದು?, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಣ್ಣಿನ ಸಾವಯವ ವಸ್ತು ಎಂದು ಕರೆಯುತ್ತೀರಿ.
- ಮೂರನೆಯದು- ಮಣ್ಣಿನ ತೇವಾಂಶವನ್ನು ಹೇಗೆ ಕಾಪಾಡಿಕೊಳ್ಳುವುದು?
- ನಾಲ್ಕನೆಯದಾಗಿ ಕಡಿಮೆ ಅಂತರ್ಜಲದಿಂದ ಮಣ್ಣಿಗೆ ಆಗುತ್ತಿರುವ ಹಾನಿಯನ್ನು ಹೇಗೆ ತಡೆಯುವುದು ಮತ್ತು
- ಐದನೆಯದಾಗಿ, ಅರಣ್ಯದ ವ್ಯಾಪ್ತಿಯ ಕಡಿತದಿಂದ ಮಣ್ಣಿನ ನಿರಂತರ ಸವೆತವನ್ನು ಹೇಗೆ ನಿಲ್ಲಿಸುವುದು ಹೇಗೆ ಅನ್ನೋದರ ಬಗ್ಗೆ ಕೇಂದ್ರ ಸರಕಾರ ತನ್ನ ದೃಷ್ಟಿಯನ್ನು ಕೇಂದ್ರಿಕರಿಸಿದೆ ಎಂದು ಪ್ರಧಾನಿ ತಿಳಿಸಿದರು.
ಮಣ್ಣು ಆರೋಗ್ಯ ಕಾರ್ಡ್ ರೈತರಿಗೆ ಅನುಕೂಲ
- ಈ ಹಿಂದೆ ನಮ್ಮ ದೇಶದ ರೈತನಿಗೆ ಯಾವ ರೀತಿಯ ಮಣ್ಣು, ಅವನ ಮಣ್ಣಿನ ಕೊರತೆ ಏನು, ಎಷ್ಟು ಇದೆ ಎಂಬ ಮಾಹಿತಿಯ ಕೊರತೆ ಇತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ದೇಶಾದ್ಯಂತ 22 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ರೈತರಿಗೆ ನೀಡಲಾಗಿದೆ. ಇದರಿಂದ ರೈತರಿಗೆ ಶೇ.8ರಿಂದ 10ರಷ್ಟು ವೆಚ್ಚ ಉಳಿತಾಯವಾಗಿದ್ದು, ಇಳುವರಿಯಲ್ಲಿ ಶೇ.5ರಿಂದ 6ರಷ್ಟು ಹೆಚ್ಚಳವಾಗಿದೆ ಎಂದರು.
ಪೆಟ್ರೋಲ್ನಲ್ಲಿ 10% ಎಥೆನಾಲ್ ಮಿಶ್ರಣ
- ಈ ಎಲ್ಲ ಪ್ರಯತ್ನಗಳ ನಡುವೆ, ಭಾರತವು ಪರಿಸರ ದಿನದಂದು ಮತ್ತೊಂದು ಐತಿಹಾಸಿ ಸಾಧನೆಯನ್ನು ಮಾಡಿದೆ ಭಾರತವು ಪೆಟ್ರೋಲ್ನಲ್ಲಿ ಶೇ. 10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ. ನಿಗದಿತ ಅವಧಿಗಿಂತ 5 ತಿಂಗಳ ಮೊದಲೇ ಭಾರತ ಈ ಗುರಿಯನ್ನು ತಲುಪಿದೆ.
ವಿಶ್ವ ಪರಿಸರ ದಿನದ ಇತಿಹಾಸ:-
- 1972ರ ವಿಶ್ವ ಸಂಸ್ಥೆ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಗಿದ್ದು, 1974 ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬಂತೆ ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಲ್ಲಿ ಹೆಚ್ಚಿನ ಜನರು ಗಿಡಗಳನ್ನು ನೆಡಲು ಪ್ರಾರಂಭಿಸಿರುತ್ತಾರೆ.
- ಹೀಗೆ ನೆಟ್ಟ ಗಿಡಗಳಿಗೆ ನೀರು ಹಾಕುವುದು ಮತ್ತು ಅದಕ್ಕಾಗಿ ನೀರಿನ ಅಭಾವ ಉಂಟಾಗುವುದನ್ನು ಸರಿದೂಗಿಸಲು ಜೂನ್ 5 ರನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಜೂನ್ ತಿಂಗಳಿಂದ ಮಳೆ ಪ್ರಾರಂಭವಾಗಲಿದ್ದು, ನೆಟ್ಟ ಗಿಡಗಳು ಬೆಳೆಯಲು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ, ಈ ದಿನವನ್ನು ಪರಿಸರ ದಿನಾಚರಣೆಗೆ ಮೀಸಲಿಡಲಾಗಿದೆ.
- ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ವಿವಿಧ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಪ್ರಮುಖ ಸಂಸ್ಥೆಗಳು, ಎನ್ಜಿಒಗಳು, ಸಮುದಾಯಗಳು, ಸರ್ಕಾರಗಳು ವಿಶ್ವಾದ್ಯಂತ ಪರಿಸರ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ.
ವಿಶ್ವ ಪರಿಸರ ದಿನದ ಧ್ಯೇಯವಾಕ್ಯ
- ವಿಶ್ವ ಪರಿಸರ ದಿನದ 2022 ರ ಥೀಮ್ “ಒಂದೇಭೂಮಿ”. ಪ್ರಕೃತಿಯೊಂದಿಗೆ ಸಾಮರಸ್ಯ ದಿಂದ ಸ್ವ ಚ್ಛ , ಹಸಿರು ಮತ್ತು ಸುಸ್ಥಿರ ಜೀವನವನ್ನು ಸಕ್ರಿಯಗೊಳಿಸಲು ನೀತಿಗಳು ಮತ್ತು ಆಯ್ಕೆ ಗಳಿಗೆ ಪರಿವರ್ತಕ ಬದಲಾವಣೆಗಳಿಗೆ ಇದು ಕರೆ ನೀಡುತ್ತದೆ.
- ಇದು ಪ್ರ ಕೃತಿಯೊಂದಿಗೆ ಸುಸ್ಥಿ ರವಾಗಿ ಬದುಕುವ ಅಗತ್ಯ ತೆ ಮತ್ತು ನೀ ತಿಗಳು ಮತ್ತು ವೈಯಕ್ತಿಕ ಆಯ್ಕೆ ಗಳಮೂಲಕ ಹಸಿರು ಜೀವನಶೈಲಿಗೆ ಬದಲಾಯಿಸುವ ನಮ್ಮ ಸಾಧ್ಯ ತೆಗಳಮೇಲೆ ಕೇಂದ್ರೀ ಕರಿಸುತ್ತದೆ.
-
2021ರ ಧ್ಯೇಯವಾಕ್ಯವು ‘ಪರಿಸರ ವ್ಯವಸ್ಥೆ ಪುನಃಸ್ಥಾಪನೆ’ ಆಗಿತ್ತು.