Published on: October 7, 2022
ವಿಶ್ವ ಪ್ರವಾಸೋದ್ಯಮ ದಿನ
ವಿಶ್ವ ಪ್ರವಾಸೋದ್ಯಮ ದಿನ
ಸುದ್ದಿಯಲ್ಲಿ ಏಕಿದೆ?
ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಲು ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣದತ್ತ ಜನರು ಹೆಚ್ಚು ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ.
ವಿಶ್ವ ಪ್ರವಾಸೋದ್ಯಮ ದಿನದ ಆಚರಣೆಯ ಹಿನ್ನೆಲೆ?
- ಈ ದಿನವನ್ನು ಆಚರಿಸಲು, 1970 ರಲ್ಲಿ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಪರವಾಗಿ ಚರ್ಚೆಗಳನ್ನು ನಡೆಸಲಾಯಿತು. ಇದರ ನಂತರ, ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 27 ಸೆಪ್ಟೆಂಬರ್ 1980 ರಂದು ಆಚರಿಸಲಾಯಿತು. ಅಂದಿನಿಂದ, ಈ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ.
- 1980 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಉದ್ಘಾಟನಾ ಆವೃತ್ತಿಯ ವಿಷಯವೆಂದರೆ ಮತ್ತು ಪರಸ್ಪರ ತಿಳುವಳಿಕೆಗೆ “ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಶಾಂತಿ
ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುವ ಉದ್ದೇಶ
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ.
ವಿಶ್ವ ಪ್ರವಾಸೋದ್ಯಮ ದಿನದ ಥೀಮ್ 2022: ರೀಥಿಂಕಿಂಗ್ ಟೂರಿಸಂ.
- ಇದರರ್ಥ ಇದು ಮರುಪರಿಶೀಲಿಸುವ ಸಮಯ. ಸಾಂಕ್ರಾಮಿಕ ರೋಗ ಪ್ರವಾಸೋದ್ಯಮದ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿತು. ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ತಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ವಿಶ್ವ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ.
- ಆಯೋಜಿಸಿದ ದೇಶ :ಈ ಬಾರಿ(2022) ಇಂಡೋನೇಷ್ಯಾ ಪ್ರವಾಸೋದ್ಯಮ ದಿನದ ಆಚರಣೆಯನ್ನು ಆಯೋಜಿಸುತ್ತಿದೆ.
ವಿಶ್ವ ಪ್ರವಾಸೋದ್ಯಮ ಸಂಸ್ಥೆ(UNTO)
- UNTO ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದ್ದು ಅದು ಪ್ರಪಂಚದಾದ್ಯಂತ ಜವಾಬ್ದಾರಿಯುತ, ಸಮರ್ಥನೀಯ ಮತ್ತು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಮ್ಯಾಡ್ರಿಡ್ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ, ಇದು ಪ್ರವಾಸೋದ್ಯಮ ವಲಯದಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕಾಗಿ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರವಾಸೋದ್ಯಮ ಸಂಬಂಧಿತ ವಿಷಯಗಳ ಕುರಿತು ಜ್ಞಾನದ ಮೂಲವಾಗಿದೆ.
ಭಾರತದ ಪ್ರವಾಸೋದ್ಯಮ ಕ್ಷೇತ್ರ
- ವರ್ಲ್ಡ್ ಟ್ರಾವೆಲ್ ಮತ್ತು ಟೂರಿಸಂ ಕೌನ್ಸಿಲ್ (ಡಬ್ಲ್ಯೂಟಿಟಿಸಿ) ಯ ಆರ್ಥಿಕ ಪರಿಣಾಮದ ವರದಿಯ ಇತ್ತೀಚಿನ ಆವೃತ್ತಿಯು ಭಾರತೀಯ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಿದೆ.
- ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ವರದಿಯಲ್ಲಿ 2021 ರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಅತಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಶಿವೆ ಎಂದು ಹೇಳಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರ
- ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಖಾಸಗಿ ಸಗಿತ್ವಕ್ಕೆ ಹೆಚ್ಚಿನಹಭಾ ಒಟ್ಟುಡಲಾಗು ನೀಡುತ್ತಿದೆ .
- ಒನ್ ಟಿಕೆಟ್.ಇನ್ ರಾಜ್ಯದ ಪ್ರವಾಸಿ ತಾಣಗಳಲ್ಲಿ ಆನ್ ಲೈನ್ ಮೂಲಕ ಪ್ರವೇಶ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಾಯೋಗಿಕವಾಗಿ ೫ ಜಿಲ್ಲೆಗಳಲ್ಲಿ ಈ ಅಪ್ಲಿಕೇಶನ್ ಲೋಕಾರ್ಪಣೆಗೊಳ್ಳಲಿದೆ.
- ಪ್ರವಾಸಿ ಗೈಡಗಳಿಗೆ ವೇತನ : ದೇಶದಲ್ಲಿ ಮೊದಲ ಬಾರಿಗೆ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ಗೈಡಗಳಿಗೆ ಮಾಸಿಕ ೨ ಸಾವಿರ ವೇತನ ನೀಡಲು ವಿಶ್ವ ಪ್ರವಾಸೋದ್ಯಮ ದಿನದಂದು ಚಾಲನೆ ನೀಡಲಾಗಿದೆ
ಖಾಸಗಿ ಸಹಭಾಗಿತ್ವ ಮಂತ್ರ
- ರಾಜ್ಯದ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡುವ ದೃಷ್ಟಿಯಿಂದ ಹಂಪಿ ಮತ್ತು ಮೈಸೂರನ್ನು ಕೇಂದ್ರವಾಗಿಸಿಕೊಂಡು ಎರಡು ಪ್ರವಾಸಿ ವೃತ್ತ ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಉದ್ದೇಶಕ್ಕಾಗಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಡಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.
- ಹಂಪಿ ಪ್ರವಾಸೋದ್ಯಮ ವೃತ್ತ : ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ವಿಜಯಪುರ
- ಮೈಸೂರು ಪ್ರವಾಸೋದ್ಯಮ ವೃತ್ತ : ಶ್ರೀರಂಗಪಟ್ಟಣ, ಮೈಸೂರು, ಹಾಸನ ಬೇಲೂರು, ಹಳೇಬೀಡು.
ಪ್ರಮುಖ ಯೋಜನೆಗಳು
- ಹೊಯ್ಸಳ ತಾಣ: ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿ ಹೊಯ್ಸಳರ ಸ್ಮಾರಕಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಕ್ರಮ
- ಜೋಗಜಲಪಾತ: ಜೋಗಜಲಪಾತದ ಹತ್ತಿರ ಐಷಾರಾಮಿ ಹೋಟೆಲ್ ಮತ್ತು ರೋಪ್ ವೆ ನಿರ್ಮಾಣ
- ನಂದಿಬೆಟ್ಟ : ನಂದಿಬೆಟ್ಟದಲ್ಲಿ ರೋಪ್ ವೆ ನಿರ್ಮಾಣ
- ಯಾಣ : ರೋಪ್ ವೆ ನಿರ್ಮಾಣಕ್ಕೆ ಯೋಜನೆ
- ಅಂಜನಾದ್ರಿ ಬೆಟ್ಟ : ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಯೋಜನೆ