Published on: April 23, 2024

ವಿಶ್ವ ಭೂಮಿ ದಿನ

ವಿಶ್ವ ಭೂಮಿ ದಿನ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

2024 ರ ಥೀಮ್: ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬ ಥೀಮ್ ನಡಿಯಲ್ಲಿ 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಧ್ವಜಾರೋಹಣ: ಭೂಮಿಯ ದಿನವನ್ನು ದ್ವಜಾರೋಹಣೆವನ್ನು ಮಾಡಿ ಆಚರಿಸಲಾಗುತ್ತದೆ. ಈ ದಿನದ ಧ್ವಜವು ಬಾರಿ ವಿಶೇಷತೆಗಳಿಂದ ಕೂಡಿದ್ದು, ಅಪೊಲೊ 17 ಸಿಬ್ಬಂದಿ 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಫೋಟೋವನ್ನು ಈ ಧ್ವಜದಲ್ಲಿ ಕಾಣಬಹುದು.

ಉದ್ದೇಶ: ಪೃಥ್ವಿಯನ್ನು ಉಳಿಸುವ ನಿಟ್ಟಿನಲ್ಲಿ ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಪ್ರಕೃತಿಯ ಸಂರಕ್ಷಣೆಯಲ್ಲಿ ಸವಾಲುಗಳನ್ನು ಎದುರಿಸುವುದು, ಜನಸಂಖ್ಯೆಯ ಬೆಳವಣಿಗೆ, ಮಾಲಿನ್ಯ, ಅರಣ್ಯನಾಶದಂತಹ ಪ್ರಮುಖ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವುದು

2018ರಲ್ಲಿ ಭಾರತೀಯರ ದಾಖಲೆ

2018ರ ಏಪ್ರಿಲ್‌ನಲ್ಲಿ ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ಹೊಸ ದಾಖಲೆ ಬರೆದಿದ್ದರು. ಭಾರತೀಯ ಅಧಿಕಾರಿಗಳ ಪ್ರಕಾರ, ಜುಲೈ 11, 2018 ರಂದು 24 ಗಂಟೆಗಳಲ್ಲಿ 49.3 ಮಿಲಿಯನ್ ಮರಗಳನ್ನು ನೆಡಲು 800,000 ಜನರು ಒಟ್ಟಾಗಿ ಸೇರಿಕೊಂಡರು, ಒಂದೇ ದಿನದಲ್ಲಿ ನೆಟ್ಟ ಹೆಚ್ಚಿನ ಮರಗಳನ್ನು ನೆಟ್ಟ ದಾಖಲೆ ಬರೆದರು.

ಹಿನ್ನೆಲೆ

1969ರಲ್ಲಿ ಸ್ಯಾನ್‌ಫ್ರಾನಿಸ್ಕೊದಲ್ಲಿ ನಡೆದ ಯುನೆಸ್ಕೊ ಸಮ್ಮೇಳನದಲ್ಲಿ ಭೂಮಿ ದಿನ ಆಚರಿಸುವ ಬಗ್ಗೆ ನಿರ್ಧರಿಸಲಾಯಿತು. ಏಪ್ರಿಲ್ 22, 1970 ರಂದು ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಬಾರಿಗೆ ಭೂಮಿಯ ದಿನವನ್ನು ಆಚರಿಸಲಾಯಿತು. 1990 ರಲ್ಲಿ, ಡೆನ್ನಿಸ್ ಹೇಯ್ಸ್ ಈ ದಿನವನ್ನು ಜಾಗತಿಕವಾಗಿ ಆಚರಿಸಲು ಪ್ರಸ್ತಾಪಿಸಿದರು.

ನಿಮಗಿದು ತಿಳಿದಿರಲಿ

  • ಪರಿಸರವನ್ನು ರಕ್ಷಿಸುವ ಕಾರ್ಯವಿಧಾನಗಳನ್ನು ನಿಯಂತ್ರಿಸುವ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಪರಿಸರ ಸಂರಕ್ಷಣಾ ಸಂಸ್ಥೆ) ಯನ್ನು ಡಿಸೆಂಬರ್ 2, 1970 ರಂದು ಮೊದಲ ಭೂ ದಿನದ ಆಚರಣೆ ಬಳಿಕ ರಚಿಸಲಾಯಿತು.
  • ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಹವಾಮಾನ ಒಪ್ಪಂದವನ್ನು 2016 ರಲ್ಲಿ ಭೂ ದಿನದಂದು ಮಾಡಲಾಯಿತು. ಈ ಒಪ್ಪಂದಕ್ಕೆ 190 ಕ್ಕೂ ಹೆಚ್ಚು ದೇಶದ ಸದಸ್ಯರು ಸಹಿ ಹಾಕಿದರು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಇತರ ಕ್ರಮಗಳನ್ನು ಕೈಗೊಳ್ಳುವುದು ಈ ಒಪ್ಪಂದ ಪ್ರಮುಖ ಉದ್ದೇಶವಾಗಿತ್ತು.
  • ಭೂಮಿಯ ದಿನವು ಒಂದು ಗೀತೆಯನ್ನು ಹೊಂದಿದ್ದು ಇದು ವಿಶ್ವದ ಪ್ರಮುಖ 8 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ ಭಾಷೆಯಲ್ಲಿಯು ಲಭ್ಯವಿದ್ದು, ಈ ಗೀತೆಯನ್ನು 2013ರಲ್ಲಿ ಕವಿ ಅಭಯ್ ಕುಮಾರ್ ಅವರು ರಚಿಸಿದ್ದರು.
  • ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಅರಣ್ಯನಾಶದಿಂದಾಗಿ ಪ್ರತಿ ವರ್ಷ ಸುಮಾರು 18 ಮಿಲಿಯನ್ ಎಕರೆಯಷ್ಟು ಅರಣ್ಯವು ನಾಶವಾಗುತ್ತಿದೆ. ಹೀಗಾಗಿ earthday.org 2010 ರಲ್ಲಿ ಕ್ಯಾನೋಪಿ ಪ್ರಾಜೆಕ್ಟ್ ಅನ್ನು ಸ್ಥಾಪಿಸಿತು. ಈ ಪ್ರಾಜೆಕ್ಟ್ ನಡಿಯಲ್ಲಿ ಪ್ರಪಂಚದಾದ್ಯಂತ ಹತ್ತು ಮಿಲಿಯನ್ ಮರಗಳನ್ನು ನೆಡುವ ಕಾರ್ಯವಾಗಿದೆ.