Published on: June 14, 2022

ವಿಶ್ವ ರಕ್ತದಾನಿಗಳ ದಿನ

ವಿಶ್ವ ರಕ್ತದಾನಿಗಳ ದಿನ

ಸುದ್ದಿಯಲ್ಲಿ ಏಕಿದೆ?  

ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.  ‘ರಕ್ತದಾನ ಮಾಡುವುದು ಸಾಮೂಹಿಕ ಕಾರ್ಯ. ಈ ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ.

ಮುಖ್ಯಾಂಶಗಳು

  • ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿವರ್ಷ ದೇಶದಲ್ಲಿ ಸುಮಾರು 10 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಜನರ ಪೈಕಿ ಹೆಚ್ಚಿನವರಿಗೆ ಕಿಮೋಥೆರಪಿ ಮಾಡುವಾಗ ರಕ್ತಪೂರಣ ಮಾಡಬೇಕಾಗುತ್ತದೆ.

ಯಾರು ರಕ್ತದಾನ ಮಾಡಬಹುದು?

  • 18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 45ರಿಂದ 60 ಕೆ.ಜಿ. ತೂಕದ ವ್ಯಕ್ತಿಗಳಿಂದ 350 ಎಂ.ಎಲ್ ರಕ್ತ ಹಾಗೂ 60 ಕೆ.ಜಿ.ಗೂ ಹೆಚ್ಚು ತೂಕ ಹೊಂದಿರುವ ದಾನಿಗಳಿಂದ 450 ಎಂ.ಎಲ್ ರಕ್ತವನ್ನು ದಾನವಾಗಿ ಪಡೆಯಲಾಗುವುದು.
  • ‘ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು.

ರಕ್ತದಾನದ ಅನುಕೂಲಗಳು

  • ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ, ಹೃದಯಾಘಾತ ಸಾಧ್ಯತೆಯೂ ಶೇ 80ರಷ್ಟು ದೂರವಾಗುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲೂ ರಕ್ತದಾನ ಸಹಕಾರಿ’