Published on: November 24, 2021

ವೀರ ಚಕ್ರ

ವೀರ ಚಕ್ರ

ಸುದ್ಧಿಯಲ್ಲಿ ಏಕಿದೆ ? ಬಾಲಾಕೋಟ್ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಂತರದ ಘಟನೆಯಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ನ.22 ರಂದು ವೀರ ಚಕ್ರ ಪಶಸ್ತಿ ಪ್ರದಾನ ಮಾಡಲಾಗಿದೆ .

ಹಿನ್ನಲೆ

  • ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ನಲ್ಲಿ ಭಾರತ ನಡೆಸಿದ್ದ ವೈಮಾನಿಕ ದಾಳಿಗೆ ಪ್ರತಿಯಾಗಿ ಪಾಕ್ ನಡೆಸಿದ ದಾಳಿಯ ವೇಳೆ ಫೆ.27, 2019 ರಲ್ಲಿ ಪಾಕಿಸ್ತಾನದ ಎಫ್-16 ಫೈಟರ್ ಜೆಟ್ ನ್ನು ಹೊಡೆದುರುಳಿಸಿ, ಸಂಘರ್ಷದ ಪರಿಸ್ಥಿತಿಯಲ್ಲಿ ಶೌರ್ಯದಿಂದ ಹೋರಾಡಿದ್ದಕ್ಕಾಗಿ ಅಭಿನಂದನ್ ಅವರನ್ನು ಗೌರವಿಸಲಾಗುತ್ತಿದೆ.

ವೀರ ಚಕ್ರ

  • ವೀರ ಚಕ್ರವು ಭಾರತದ ಶೌರ್ಯ ಪುರಸ್ಕಾರವಾಗಿದ್ದು ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು. ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಮೂರನೆಯದ್ದಾಗಿದೆ.
  • ಈ ಪುರಸ್ಕಾರದ ಜೊತೆಗೆ ಧನಸಹಾಯವೂ ಸಂದಾಯವಾಗುತ್ತದೆ.
  • ಪದಕದ ಮುಂಬದಿ: ಮೂರೂವರೆ ಸೆಂ.ಮಿ. ದುಂಡನೆಯ ಬೆಳ್ಳಿಯ ಪದಕ. ಐದು ಕೋನಗಳುಳ್ಳ ನಕ್ಷತ್ರ, ಇದರ ಮಧ್ಯದಲ್ಲಿ ಚಕ್ರ, ಇದರ ಮೇಲೆ ಭಾರತದ ಲಾಂಛನ. ತುದಿಯಲ್ಲಿ ಪದಕದ ಹೆಸರು ಬರೆದಿದೆ .
  • ಪದಕದ ಹಿಂಬದಿ: ಎರಡು ಆಖ್ಯಾನಗಳು ಕಮಲದ ಹೂವುಗಳು ಇವುಗಳ ಮಧ್ಯೆ. ಇದರ ಮೇಲೆ ವೀರ ಚಕ್ರ ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದಿದೆ .