Published on: January 10, 2022

ವೀರ ಬಾಲ ದಿವಸ

ವೀರ ಬಾಲ ದಿವಸ

ಸುದ್ಧಿಯಲ್ಲಿ ಏಕಿದೆ ? ಮೊಘಲ್‌ ಅರಸರಿಂದ ಗಲ್ಲಿಗೇರಿದ 10ನೇ ಸಿಖ್‌ ಗುರು ಗೋವಿಂದ ಸಿಂಗ್‌ ಅವರ ನಾಲ್ವರು ಪುತ್ರರ ಸ್ಮರಣಾರ್ಥ ಡಿಸೆಂಬರ್‌ 26 ಅನ್ನು ಇನ್ನು ಮುಂದೆ ‘ವೀರ ಬಾಲ ದಿವಸ’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ಸಿಖ್‌ ಗುರುವಿನ ಜನ್ಮ ದಿನಾಚರಣೆಯ ವೇಳೆ ಪ್ರಧಾನಿ ಅವರು ಈ ಪ್ರಕಟಣೆ ನೀಡಿದ್ದಾರೆ.
  • ‘ಗುರುವಿನ ಮಕ್ಕಳ ತ್ಯಾಗ ಮತ್ತು ಅವರ ಸಾವಿಗೆ ನ್ಯಾಯ ಒದಗಿಸಲು ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಫತೇಹ್ ಸಿಂಗ್ ಜಿ ಅವರನ್ನು ಜೀವಂತವಾಗಿ ಹೂತು ಹಾಕಿದ ದಿನವೂ ಇದಾಗಿದೆ’

ಸಾಹಿಬ್ಜಾದಾಸ್

  • ಪಂಜಾಬಿಯಲ್ಲಿ ಸಾಹಿಬ್ಜಾದಾ ಎಂದರೆ ಮಕ್ಕಳು. ಈ ಪದವನ್ನು ಸಾಮಾನ್ಯವಾಗಿ ಸಿಖ್ ಗುರು ಗುರು ಗೋಬಿಂದ್ ಸಿಂಗ್ ಅವರ ನಾಲ್ಕು ಪುತ್ರರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅವರು ಸಿಖ್ಖರ ಹತ್ತನೇ ಗುರು. ಅವರ ಜನ್ಮದಿನವನ್ನು ಪ್ರತಿ ವರ್ಷ ಜನವರಿ 9 ರಂದು ಆಚರಿಸಲಾಗುತ್ತದೆ. ಅವರ ನಾಲ್ವರು ಪುತ್ರರು ಸಾಹಿಬ್ಜಾದಾ ಬಾಬಾ ಅಜಿತ್ ಸಿಂಗ್, ಜುಜಾರ್ ಸಿಂಗ್, ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್.